PM Modi in Dwarka: ಸಮುದ್ರದಲ್ಲಿ ಮುಳುಗಿರುವ ಶ್ರೀಕೃಷ್ಣ ನಗರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ದ್ವಾರಕಾ ಫೆಬ್ರವರಿ 26: ಈ ಹಿಂದೆ ಲಕ್ಷದ್ವೀಪದಲ್ಲಿ ಸಮುದ್ರಕ್ಕಿಳಿದು 'ಸ್ನಾರ್ಕಲಿಂಗ್' ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತಿನ ದ್ವಾರಕಾದಲ್ಲಿ 'ಸ್ಕೂಬಾ ಡೈವಿಂಗ್' ಮಾಡಿದರು.

ಸಮುದ್ರದಲ್ಲಿ ಮುಳುಗಿರುವ ಶ್ರೀಕೃಷ್ಣನ ನಗರ ದ್ವಾರಕೆಯ ಅವಶೇಷಗಳನ್ನು ವೀಕ್ಷಿಸಿದ ಮೋದಿ ಅವರು, ಸಮುದ್ರದ ಆಶದಲ್ಲೇ ಕೃಷ್ಣನ ಪಾರ್ಧನೆ ಮಾಡಿದರು. ಈ ಕುರಿತು ಮಾಹಿತಿಯನ್ನು ಜಾಲತಾಣದ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮೋದಿ 'ಸಮುದ್ರದೊಳಗೆ ಮುಳುಗಿರುವ ದ್ವಾರಾ ನಗರಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಒಂದು ದೈವಿಕ ಅನುಭೂತಿ. ದ್ವಾರಕೆಯ ದರ್ಶನದೊಂದಿಗೆ ಆಧ್ಯಾತ್ಮಿಕ ಭವ್ಯತೆ ಮತ್ತು ಕಾಲತೀತ ಭಕ್ತಿಯ ಅನುಭವವನ್ನು ಪಡೆದುಕೊಂಡೆ. ಕೇಷ್ಣ ಭಗವಾನ್‌ ನಮ್ಮೆಲ್ಲರನ್ನೂ ಆಶೀರ್ವದಿಸಲಿ' ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

PM Modi in Dwarka: Modi visited Srikrishna Nagar submerged in the sea

ಸ್ಕೂಬಾ ಡೈವಿಂಗ್‌ಗೆ ಅಗತ್ಯವಾದ ವಸ್ತ್ರ ಧರಿಸಿ ತಜ್ಞರೊಂದಿಗೆ ಸ್ಕೂಬಾ ಡೈವಿಂಗ್ ನಡೆಸಿದ ಪ್ರಧಾನಿ ಮೋದಿ, ಇದೇ ವೇಳೆ ನವಿಲುಗರಿಯನ್ನು ಸಮುದ್ರದಾಳದಲ್ಲಿರುವ ದ್ವಾರಕೆ ಕೃಷ್ನನಿಗೆ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದರು. ಈ ಕುರಿತಾದ ಫೋಟೋ ಮತ್ತು ವಿಡಿಯೋಗಳನ್ನು ಮೋದಿ ಹಂಚಿಕೊಂಡಿದ್ದಾರೆ.

ಸ್ಕೂಬಾ ಡೈವಿಂಗ್ ಎಲ್ಲಿ?

ಅರಬ್ಬೀ ಸಮುದ್ರದಲ್ಲಿ ಬರುವ ಬೇಟ್ ದ್ವಾರಕಾ ದ್ವೀಪದ ದ್ವಾರಕಾ ಕರಾವಳಿಯಲ್ಲಿ ಈ ಸ್ಕೂಬಾ ಡೈವಿಂಗ್ ನಡೆಸಲು ಪ್ರವಾಸಿಗರಿಗೆ ಅವಕಾಶವಿದೆ. ಇದು ಮಹಾ ಭಾರತದ ಕಾಲದಲ್ಲಿ ಕೃಷ್ಣನ ರಾಜಧಾನಿ ಆಗಿದ್ದ ದ್ವಾರಕಾ ನಗರಿ ಎಂಬುದನ್ನು ಪ್ರಾಚ್ಯವಸ್ತು ಇಲಾಖೆಯ ತಜ್ಞರು ದಶಕಗಳ ಹಿಂದೆ ಪತ್ತೆ ಮಾಡಿದ್ದರು. ಸಮುದ್ರದಾಳದಲ್ಲಿ ಕಂಡುಬಂರುವ ಅನೇಕ ಅವಶೇಷಗಳು ದ್ವಾರಕೆಯ ನೆನಪನ್ನು ಭಕ್ತರ ಮುಂದಿಡುತ್ತವೆ. ಇಲ್ಲಿ 15-20 ನಿಮಿಷದ ಸ್ಕೂಬಾ ಡೈವ್‌ಗೆ 2000-3000 ರೂಪಾಯಿವರೆಗೂ ಶುಲ್ಕವಿದೆ.

ಅತಿ ಉದ್ದದ ಕೇಬಲ್ ಸೇತುವೆ ಲೋಕಾರ್ಪಣೆ:

ಶ್ರೀಕೃಷ್ಣ ಪರಮಾತ್ಮನ ಐತಿಹ್ಯದ ಪುರಾತನ ಬೇಟ್ ದ್ವಾರಕೆಗೆ ಸಂಪರ್ಕ ಕಲ್ಪಿಸುವ ದೇಶದ ಅತಿ ಉದ್ದದ ಕೇಬಲ್ ಸೇತುವೆಯನ್ನು ಪ್ರಧಾನಿ ಮೋದಿ ಭಾನುವಾರ ಲೋಕಾರ್ಪಣೆ ಮಾಡಿದರು. ಇದಕ್ಕೆ ಸುದರ್ಶನ ಸೇತು ಎಂದು ಹೆಸರಿಡಲಾಗಿದೆ.

PM Modi in Dwarka: Modi visited Srikrishna Nagar submerged in the sea

ಹಾಲಿ ದ್ವಾರಕ ನರದಿಂದ ಮೂವತ್ತು ಕಿ.ಮೀ ದೂರದಲ್ಲಿರುವ ಓಖಾ ಬಂದರಿನಿಂದ ಪುರಾತನ ದ್ವಾರಕಾಧೀಶ ಮಂದಿರ ಇರುವ ಬೇಟ್ ದ್ವಾರಕೆ ದ್ವೀಪಕ್ಕೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ. ಓಖಾದಿಂದ ಬೇಟ್ ದ್ವಾರಕಾ ವರೆಗೆ 2.32 ಕಿ.ಮೀ ಉದ್ದದ ಸೇತುವೆಯನ್ನು ಅರಬ್ಬಿ ಸಮುದ್ರದ ಮೇಲೆ ನಿರ್ಮಿಸಲಾಗಿದೆ.

ಚತುಷ್ಟಥ ಸೇತುವೆಯು 2.32 ಕಿ.ಮೀ ಉದ್ದ ಮತ್ತು 27.20 ಮೀಟರ್ ಅಗಲವಿದ್ದು, ರಸ್ತೆಯ ಉಭಯ ಬದಿಗಳಲ್ಲಿ ತಲಾ 2.5 ಮೀ. ಅಗಲದ ಪಾದಚಾರಿ ಮಾರ್ಗ ಅಳವಡಿಸಲಾಗಿದೆ. 979 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.

ಭಗವದ್ಗೀತೆ ಕೆತ್ತನೆ:

ಸೇತುವೆಯ ಪಾದಚಾರಿ ಮಾರ್ಗದಲ್ಲಿ ಭಗದ್ಗೀತೆಯ ಶ್ಲೋಕ ಕೆತ್ತನೆ ಮಾಡಲಾಗಿದೆ. ಉಭಯ ತಡೆಗೋಡೆಗಳಲ್ಲಿ ಶ್ರೀಕೃಷ್ಣನ ಚಿತ್ರ ವಿನ್ಯಾಸಗೊಳಿಸಲಾಗಿದೆ.

ಈವರೆಗೂ ಹೇಗೆ ಹೋಗಬೇಕಿತ್ತು?

ಇದಕ್ಕೂ ಮೊದಲು ಶ್ರೀ ಕೃಷ್ಣನ ಪುರಾತನ ದೇಗುಲವನ್ನು ಕಾಣಲು ಭಕ್ತಾಧಿಗಳು ಓಖಾ ಬಂದರಿನಿಂದ ಭೋಟ್ ಮೋಲಕ ಹಗಲಲ್ಲಿ ಮಾತ್ರ ಸಂಚರಿಸಲು ಅವಕಾಶವಿತ್ತು. ಆದರಿನ್ನು ಮುಂದೆ ದಿನದ 24 ಗಂಟೆಗೂ ಓಖಾದಿಂದ ಬೇಟ್ ದ್ವಾರಕೆಗೆ ವಾಹನಗಳ ಮೂಲಕ ಸುಲಭವಾಗಿ ತೆರಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+