ರೆಮೋ ಸಿನಿಮಾದ ಹಕ್ಕು ಪಡೆದ ದೀಪಕ್

By: ಒನ್ಇಂಡಿಯಾ ಸಿಬ್ಬಂದಿ
Subscribe to Oneindia Kannada

ಚೆನ್ನೈ, ಆಗಸ್ಟ್ 30: ಕಾಲಿವುಡ್ ಚಿತ್ರರಂಗದ ಜನಪ್ರಿಯ ಹೀರೋ ಶಿವಕಾರ್ತಿಕೇಯನ್ ಮತ್ತು ಬೆಡಗಿ ಕೀರ್ತಿ ಸುರೇಶ್ ನಟನೆ ಮೂಡಿಬರುತ್ತಿರುವ 'ರೆಮೋ' ಚಿತ್ರ ಅಕ್ಟೋಬರ್ 7ರಂದು ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸುತ್ತಿದೆ. ಈ ಚಿತ್ರದ ಕರ್ನಾಟಕದ ವಿತರಣಾ ಹಕ್ಕನ್ನು ದೀಪಕ್ ಸಾಮಿ ಅವರು ಪಡೆದುಕೊಂಡಿದ್ದಾರೆ.

ಇದೀಗ 'ರೆಮೋ' ಚಿತ್ರವನ್ನು ನೋಡಲೆಂದು ಕಾಯುತ್ತಿರುವ ಕರ್ನಾಟಕದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಎಂಜಿ (Minimum Guarantee) ಬೇಸ್ ಮೂಲಕ ಕಾಮಿಡಿ ಎಂರ್ಟಟೈನರ್ 'ರೆಮೋ' ಚಿತ್ರವನ್ನು ದೀಪಕ್ ಅವರು ಇಡೀ ಕರ್ನಾಟಕದಾದ್ಯಂತ ವಿತರಣೆ ಮಾಡಲಿದ್ದಾರೆ. ಈ ಮೊದಲು ದೀಪಕ್ ಅವರು ವಿಜಯ್ ಅವರ 'ತೆರಿ' ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದ್ದರು.

#Remo KARNATAKA Release with Deepak Sami on MG Basis

24AM ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ 'ರೆಮೋ' ಸಿನಿಮಾ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದು, ನಟ ಶಿವಕಾರ್ತಿಕೇಯನ್ ಅವರಿಗೆ ಅತ್ಯಂತ ದೊಡ್ಡ ಮಟ್ಟದ ಬ್ರೇಕ್ ಕೊಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.[ರಜನಿ ಸೋದರಳಿಯನ ಸಾಂಗ್ ಯೂಟ್ಯೂಬಿನಲ್ಲಿ ರಿಲೀಸ್]

ಸೆಪ್ಟೆಂಬರ್ 5 ರಂದು ಚಿತ್ರದ ಆಡಿಯೋ ರಿಲೀಸ್ ಆಗಲಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಯೂಟ್ಯೂಬಿನಲ್ಲಿ ಪ್ರಚಾರ ವಿಡಿಯೋ ರಿಲೀಸ್ ಮಾಡಿ ಸುದ್ದಿ ಮಾಡಿದ್ದಾರೆ.

ಚಿತ್ರಕ್ಕೆ ಭಾಗ್ಯರಾಜ್ ಆಕ್ಷನ್-ಕಟ್ ಹೇಳಿದ್ದು, ನಿರ್ಮಾಪಕ ಆರ್.ಡಿ ರಾಜಾ ಅವರು ಬಂಡವಾಳ ಹೂಡಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Deepak Sami of South Side Studios has acquired the theatrical rights of 'Remo' in Karnataka on minimum guarantee (MG) basis, confirmed production house 24 AM Studios on its official micro-blogging page. South Side Studios distributed the Vijay, Samantha Ruth Prabhu and Amy Jackson-starrer 'Theri' in Karnataka
Please Wait while comments are loading...