Lal Salaam Trailer: ಅಪ್ಪನಿಗೆ ಟೋಪಿ ಹಾಕಿಸಿ ನಮಾಜ್ ಮಾಡಿಸಿದ ರಜನಿಕಾಂತ್ ಮಗಳು
ನಟ ರಜನಿಕಾಂತ್ ತಮ್ಮ 73ನೇ ವಯಸ್ಸಿನಲ್ಲೂ ಅದ್ಧೂರಿಯಾಗಿ ಸಿನಿಮಾ ಮಾಡುತ್ತಾರೆ. ಹಾಗೇ ತಮ್ಮ ಅಭಿಮಾನಿಗಳನ್ನು ಸೆಳೆಯುತ್ತಾರೆ. ಅದೇ ರೀತಿ ಇದೀಗ ಹಿಂದೂ & ಮುಸ್ಲಿಂ ಧರ್ಮೀಯರ ಕಥೆಯನ್ನ ತಂದಿದ್ದಾರೆ. ಇನ್ನು ಈ ಸಿನಿಮಾಗೆ ರಜನಿಕಾಂತ್ ಅವರ ಮಗಳು ಡೈರೆಕ್ಷನ್ ಮಾಡಿದ್ದಾರೆ. ಈ ಮೂಲಕ ರಜನಿಕಾಂತ್ ಅವರು ಮೊಯಿದ್ದೀನ್ ಭಾಯ್ ಆಗಿ ಧರ್ಮ ಧರ್ಮಗಳ ನಡುವೆ ಸಾಮರಸ್ಯ ಮೂಡಿಸಲು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
ಅಷ್ಟಕ್ಕೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ 'ಲಾಲ್ ಸಲಾಂ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ ಫೆ. 9ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಸೂಪರ್ ಸ್ಟಾರ್ ರಜನಿಕಾಂತ್, ವಿಷ್ಣು ವಿಶಾಲ್, ವಿಕ್ರಾಂತ್, ಕಪಿಲ್ ದೇವ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ, ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡಿದ್ದು, ಟ್ರೇಲರ್ ಮೂಲಕ ಕುತೂಹಲ ಡಬಲ್ ಆಗಿಸಿದೆ. ಅರೆ ಈ ಸಿನಿಮಾ ಮೂಲಕ ನಟ ರಜನಿಕಾಂತ್ ಏನ್ ಹೇಳಲು ಹೊರಟಿದ್ದಾರೆ ಅಂದ್ರಾ? ಬನ್ನಿ ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

73ನೇ ವಯಸ್ಸಿನಲ್ಲೂ ರಜನಿಕಾಂತ್ ಖದರ್
ರಜನಿಕಾಂತ್ ಸಿನಿಮಾಗಳು ರಿಲೀಸ್ ಆಗುತ್ತವೆ ಅಂದ್ರೆ ಒಂದು ತೂಫಾನ್ ಹುಟ್ಟಿಕೊಳ್ಳುತ್ತದೆ. ಅದ್ರಲ್ಲೂ ತಮ್ಮ 73ನೇ ವಯಸ್ಸಿನಲ್ಲೂ ರಜನಿಕಾಂತ್ ಅವರು ಹೀರೋ ಆಗಿ ಮಿಂಚುತ್ತಾ ಥಿಯೇಟರ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಾರೆ. ಹೀಗಿದ್ದಾಗ ಎಲ್ಲ ಅಂದುಕೊಂಡಂತೆ ನಡೆದಿದ್ದರೆ 'ಲಾಲ್ ಸಲಾಂ' ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಈ ಸಿನಿಮಾ ಸಂಕ್ರಾಂತಿ ಹಬ್ಬದ ವೇಳೆಗೆ ಬಿಡುಗಡೆ ಆಗಬೇಕಿತ್ತು. ಆದ್ರೆ ಚಿತ್ರ ತಂಡ ಹಲವು ಕಾರಣಕ್ಕೆ ರಿಲೀಸ್ ಡೇಟ್ ಮುಂದೆ ಹಾಕಿತ್ತು. ಇದೀಗ 'ಲಾಲ್ ಸಲಾಂ' ಸಿನಿಮಾ ಟ್ರೇಲರ್ ಭರ್ಜರಿಯಾಗಿ ರಿಲೀಸ್ ಆಗಿ ಹೊಸ ಸಂಚಲನ ಸೃಷ್ಟಿ ಮಾಡಿದೆ.
ಫೆಬ್ರವರಿ 9ಕ್ಕೆ ಸಿನಿಮಾ ರಿಲೀಸ್
ಇದೀಗ ರಿಲೀಸ್ ಆಗಿರುವ 'ಲಾಲ್ ಸಲಾಂ' ಸಿನಿಮಾ ಟ್ರೇಲರ್ ಅದ್ಧೂರಿಯಾಗಿ ಮೂಡಿದೆ. ಹಾಗೇ ರಜನಿಕಾಂತ್ ಅವರು 'ಲಾಲ್ ಸಲಾಂ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಫೆಬ್ರವರಿ 9ಕ್ಕೆ ಈ ಚಿತ್ರ ತೆರೆಕಾಣಲಿದೆ. ಟ್ರೇಲರ್ ಬಿಡುಗಡೆ ಆಗಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ರಜನಿಕಾಂತ್ ಮೊಯಿದ್ದೀನ್ ಭಾಯ್ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಇದೀಗ ಟ್ರೇಲರ್ ಫುಲ್ ಹೈಲೈಟ್ ಆಗಿದೆ. ಹಾಗೇ ರಜನಿಕಾಂತ್ ಅವರ ಅಭಿಮಾನಿಗಳು ಟ್ರೇಲರ್‌ನ ನೋಡಿ ಫಿದಾ ಆಗಿದ್ದಾರೆ.

'ಲಾಲ್ ಸಲಾಂ' ಕಥೆ ಏನು?
ಇನ್ನು ಈ ಸಿನಿಮಾದಲ್ಲಿ ಸಾಕಷ್ಟು ಹೊಸತನ್ನು ಕಥೆಯಾಗಿ ಬಳಸಿಕೊಳ್ಳಲಾಗಿದೆ. ಜೊತೆಗೇ, ಹಿಂದೂ & ಮುಸ್ಲಿಂ ಧರ್ಮಗಳ ನಡುವೆ ಘರ್ಷಣೆ ಹಾಗೂ ಸಾಮರಸ್ಯದ ಕಥೆಯನ್ನೂ 'ಲಾಲ್ ಸಲಾಂ' ಸಿನಿಮಾ ವಿವರಿಸಲಿದೆ. ಕಥೆ ಬಗ್ಗೆ ಸುಳಿವು ನೀಡುವಂತಹ ಅನೇಕ ಡೈಲಾಗ್ಸ್ ಇದೀಗ ಟ್ರೇಲರ್ ಮೂಲಕ ರಿವೀಲ್ ಆಗಿವೆ 'ಜನ ಯಾವ ದೇವರ ಮೇಲೆ ನಂಬಿಕೆ ಇಡುತ್ತಾರೆ ಎಂಬುದು ಮುಖ್ಯವಲ್ಲ. ಎಲ್ಲಾ ದೇವರೂ ಒಂದೇ' ಎಂಬ ಡೈಲಾಗ್ ಗಮನ ಸೆಳೆಯುತ್ತದೆ. ಹಾಗೇ ಈ ಟ್ರೇಲರ್‌ನಲ್ಲಿ ನಟ ರಜನಿಕಾಂತ್ ಅವರ ಮುಂಬೈ ಕಥೆ ಕೂಡ ಸೇರಿಕೊಂಡಿದೆ. ಸಿಕ್ಕಾಪಟ್ಟೆ ಆಕ್ಷನ್ ಮಾಡಿಯೂ ರಜನಿಕಾಂತ್ ಗಮನ ಸೆಳೆಯುತ್ತಾರೆ.
ಕಪಿಲ್ ದೇವ್ ಕೂಡ ಇದ್ದಾರೆ
ಇಷ್ಟೆಲ್ಲದರ ನಡುವೆ 'ಲಾಲ್ ಸಲಾಂ' ಸಿನಿಮಾದಲ್ಲಿ ಕ್ರೀಡೆ ಕುರಿತಾದ ಕಥೆಯು ಇದೆ. ಕ್ರಿಕೆಟ್ ಕೇಂದ್ರಿತವಾದ ಕಥೆ ಹೇಳಿದ್ದಾರೆ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್. ಹೀಗಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರದ್ದು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಎನ್ನಲಾಗಿದೆ. ರಜನಿಕಾಂತ್ ಮತ್ತು ಕಪಿಲ್ ದೇವ್ ಅವರು ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಇದೀಗ ಟ್ರೇಲರ್ ಮೂಲಕ ಇದರ ಝಲಕ್ ತೋರಿಸಿದ್ದು, ಈಗ ಲಾಲ್ ಸಲಾಂ ಭಾರಿ ಗಮನ ಸೆಳೆಯುತ್ತಿದೆ.












Click it and Unblock the Notifications