Leo Trailer: ದಳಪತಿ ವಿಜಯ್ ‘ಲಿಯೋ’ ಅಬ್ಬರ ಬಲು ಜೋರು!
ದಳಪತಿ ವಿಜಯ್ ನಟಿಸುತ್ತಿರುವ ಬಹುನಿರೀಕ್ಷಿತ ಲಿಯೋ ಟ್ರೈಲರ್ (Leo Trailer) ಈಗ ರಿಲೀಸ್ ಆಗಿದೆ. ಹೀಗೆ ಯುಟ್ಯೂಬ್ ಅಖಾಡಕ್ಕೆ ಲಿಯೋ ಟ್ರೈಲರ್ ಎಂಟ್ರಿ ಕೊಡುತ್ತಿದ್ದಂತೆ ಹಲವು ದಾಖಲೆಗಳನ್ನು ಅಳಿಸಿ ಹಾಕಿದೆ. ಹಾಗಾದರೆ ಹೇಗಿದೆ ಲಿಯೋ ಟ್ರೈಲರ್? ದಳಪತಿ ವಿಜಯ್ ಅಬ್ಬರ ಹೇಗಿದೆ? ಟ್ರೈಲರ್ ನೋಡಿ ವಿಜಯ್ ಫ್ಯಾನ್ಸ್ ಏನ್ ಹೇಳಿದ್ರು?
'ಲಿಯೋ' ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ನಟ ದಳಪತಿ ವಿಜಯ್ (Thalapathy Vijay) ಮುಖ್ಯ ಪಾತ್ರ ನಿರ್ವಹಿಸುತ್ತಿದ್ದು, ಬಹುತಾರಾಗಣದ 'ಲಿಯೋ' ಟ್ರೈಲರ್ ಇಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಅಷ್ಟಕ್ಕೂ ಮೂಲ ತಮಿಳು ಭಾಷೆಯ ಈ ಸಿನಿಮಾ ಕನ್ನಡ, ತೆಲುಗು, ಹಿಂದಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಇದೀಗ ಕನ್ನಡದಲ್ಲೂ ಡಬ್ ಆಗಿ ಲಿಯೋ ರಿಲೀಸ್ ಆಗಿದ್ದು, ಸಂಚಲನ ಸೃಷ್ಟಿಸಿದೆ. ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತೆ ದೊಡ್ಡ ಮಟ್ಟದಲ್ಲೇ ಕಂಬ್ಯಾಕ್ ಮಾಡುವ ಸೂಚನೆ ಕೊಟ್ಟಿದ್ದಾರೆ.

ದಳಪತಿ ವಿಜಯ್ 'ಲಿಯೋ' ಹೇಗಿದೆ?
ಸಂಜಯ್ ದತ್, ಅರ್ಜುನ್ ಸರ್ಜಾ, ದಳಪತಿ ವಿಜಯ್ 'ಲಿಯೋ' ಸಿನಿಮಾಗೆ ಸಾಥ್ ನೀಡಿ ಸಂಚಲನ ಸೃಷ್ಟಿಸಿದ್ದಾರೆ. ಇವರ ಜೊತೆಗೆ ತ್ರಿಷಾ ಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ. ಈ ನಡುವೆ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಡೈರೆಕ್ಷನ್ ಬೇರೆ. ಹೀಗಿದ್ದಾಗ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಈ ಎಲ್ಲಾ ನಿರೀಕ್ಷೆಗಳನ್ನ ನಿಜ ಮಾಡಿದ್ದಾರೆ ನಿರ್ದೇಶಕ ಲೋಕೇಶ್ ಕನಗರಾಜ್. ಟ್ರೈಲರ್ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಮಧ್ಯೆ ವಿಜಯ್ ಅಬ್ಬರಕ್ಕೆ ಅಭಿಮಾನಿಗಳಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ.
'ಸೆವೆನ್ ಸ್ಕ್ರೀನ್ ಸ್ಟುಡಿಯೋ' ಮೂಲಕ 'ಲಿಯೋ' ನಿರ್ಮಾಣ ಆಗಿದ್ದು, ಆ್ಯಕ್ಷನ್ ಪ್ರಿಯರಿಗೆ ರಸದೌತಣ ಪಕ್ಕಾ. ದಳಪತಿ ವಿಜಯ್ ಪಾತ್ರದ ರೀತಿ ಅರ್ಜುನ್ ಸರ್ಜಾ ಅವರ ಗೆಟಪ್ ಕೂಡ ಗಮನ ಸೆಳೆದಿದೆ. ಕಥೆ ಬಗ್ಗೆ ಟ್ರೈಲರ್ ಸುಳಿವು ಬಿಟ್ಟುಕೊಟ್ಟಿದ್ದು, ಟ್ರೈಲರ್ ನೋಡಿದ ದಳಪತಿ ವಿಜಯ್ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. 'ಕೈದಿ' & 'ವಿಕ್ರಮ್' ಸಿನಿಮಾಗಳ ಮೂಲಕವೇ ಲೋಕೇಶ್ ಕನಗರಾಜ್ ಖ್ಯಾತಿ ಪಡೆದಿದ್ದಾರೆ. ಅವರು ಈಗ 'ಲಿಯೋ' ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಇನ್ನೊಂದು ಕುತೂಹಲ ಕೋಟ್ಯಂತರ ಅಭಿಮಾನಿಗಳನ್ನು ಕಾಡ್ತಿದೆ.

'ಕೈದಿ' & 'ವಿಕ್ರಮ್' ಜೊತೆ 'ಲಿಯೋ' ಲಿಂಕ್?
ಅಷ್ಟಕ್ಕೂ 'ಕೈದಿ' & 'ವಿಕ್ರಮ್' ಸಿನಿಮಾಗಳ ಕಥೆಗೂ 'ಲಿಯೋ' ಸಿನಿಮಾ ಕಥೆಗೂ ಲಿಂಕ್ ಇದೆಯಾ? ಎಂಬ ಪ್ರಶ್ನೆ ಕೂಡ ಕೇಳಿಬಂದಿದೆ. ಹೀಗಾಗಿಯೇ ಸಿನಿಮಾ ಮೇಲೆ ನಿರೀಕ್ಷೆ ಈಗ ದುಪ್ಪಟ್ಟಾಗಿದೆ. ಯಾಕಂದ್ರೆ ಈಗಾಗಲೇ ನಿರ್ದೇಶಕ ಲೋಕೇಶ್ ಕನಗರಾಜ್ ಅವರು 'ಕೈದಿ' & 'ವಿಕ್ರಮ್' ಸಿನಿಮಾಗಳ ಕಥೆಗೆ ಲಿಂಕ್ ಮಾಡಿದ್ದಾರೆ. ಇದನ್ನು ವೆರ್ಸ್ ಅಂತಾ ಸಿನಿಮಾ ಭಾಷೆಯಲ್ಲಿ ಕರೆಯುವುದುಂಟು. ಹೀಗಾಗಿ ಲಿಯೋ ಕಥೆಯನ್ನು 'ಕೈದಿ' & 'ವಿಕ್ರಮ್' ಸಿನಿಮಾಗಳ ಕಥೆಯ ಜೊತೆಯಲ್ಲಿ ಜೋಡಿಸುತ್ತಾರಾ? ಎಂಬ ಕುತೂಹಲ ಕೆರಳಿದೆ.
ಒಟ್ನಲ್ಲಿ ಅಕ್ಟೋಬರ್ 19ರಂದು 'ಲಿಯೋ' ಚಿತ್ರ ರಿಲೀಸ್ ಆಗಲಿದ್ದು, ದಕ್ಷಿಣ ಭಾರತದಿಂದ ಮತ್ತೊಂದು ಪ್ಯಾನ್ ಇಂಡಿಯಾ ಅಬ್ಬರಿಸಲಿದೆ. 'ಲಿಯೋ' ಟ್ರೈಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಹತ್ತಾರು ಮಿಲಿಯನ್ ವೀವ್ಸ್ ಬಾಚಿಕೊಂಡಿದ್ದು, ಯುಟ್ಯೂಬ್ ಅಖಾಡದಲ್ಲಿ ಹೊಸ ದಾಖಲೆ ಬರೆಯೋದು ಬಹುತೇಕ ಗ್ಯಾರಂಟಿ. ಹೀಗೆ ಅಭಿಮಾನಿಗಳು ಕೂಡ ತಮ್ಮ ಗಮನವನ್ನ ಸಿನಿಮಾ ಮೇಲೆ ನೆಟ್ಟಿದ್ದು, ಈ ಎಲ್ಲಾ ನಿರೀಕ್ಷೆಗೆ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಸಿಗಲಿದೆ. ಹಾಗೇ 'ಲಿಯೋ' ಸಿನಿಮಾದ ಕಥೆ ಬೇರೆ ಚಿತ್ರಗಳ ಕಥೆಯ ಜೊತೆಗೆ ಲಿಂಕ್ ಆಗುತ್ತಾ? ಅನ್ನೋ ಪ್ರಶ್ನೆಗೂ ಉತ್ತರ ಸಿಗಲಿದೆ. ಅಕಸ್ಮಾತ್ ಈ ಪ್ರಶ್ನೆ ನಿಜವಾದರೆ ದಾಖಲೆಗಳು ಉಡೀಸ್ ಆಗೋದು ಗ್ಯಾರಂಟಿ.












Click it and Unblock the Notifications