Get Updates
Get notified of breaking news, exclusive insights, and must-see stories!

ಜೈಲರ್ ಬಳಿಕ ಮತ್ತೆ ಅಬ್ಬರ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿಯ ಸಿನಿಮಾ ರಿಲೀಸ್‌ಗೆ ರೆಡಿ!

ರಜನಿಕಾಂತ್ ಅವರಿಗೆ ಈಗ 73 ವರ್ಷ ಆದ್ರೆ ಅವರು ಮಾಡುವ ಸಿನಿಮಾಗಳು ಥೇಟ್ ಈಗ ಇನ್ನೂ 30 ವರ್ಷದ ಹುಡುಗರು ಮಾಡಿದಂತೆ ಇರುತ್ತವೆ. ಹೀಗಾಗಿಯೇ ನಟ ರಜನಿಕಾಂತ್ ಅವರಿಗೆ ಭಾರಿ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅದರಲ್ಲೂ ರಜನಿಕಾಂತ್‌ರ ಸಿನಿಮಾಗಳು ರಿಲೀಸ್ ಆಗ್ತವೆ ಅಂದ್ರೆ, ಫ್ಯಾನ್ಸ್ ವರ್ಷಗಟ್ಟಲೇ ಕಾಯುತ್ತಾರೆ. ಇದೀಗ ಕೂಡ ಅಷ್ಟೇ 'ಜೈಲರ್' ಸಕ್ಸಸ್ ಬಳಿಕ ರಜನಿಕಾಂತ್‌ರ ಅದೊಂದು ಸಿನಿಮಾಗೆ ಫ್ಯಾನ್ಸ್ ಕಾಯ್ತಾ ಇದ್ರು. ಈಗ ಆ ಬಗ್ಗೆ ಅಪ್‌ಡೇಟ್ ಸಿಕ್ಕಿದೆ.

ಅಂದಹಾಗೆ ಮೊದಲೇ ಹೇಳಿದಂತೆ 'ಜೈಲರ್' ಅಭೂತಪೂರ್ವ ಯಶಸ್ಸಿನ ಬಳಿಕ, ಸೂಪರ್ ಸ್ಟಾರ್ ರಜನಿ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ 'ಲಾಲ್ ಸಲಾಂ' ರಿಲೀಸ್‌ಗೆ ಸಿದ್ಧವಾಗ್ತಿದೆ. ಅಂದಹಾಗೆ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಈ ಸಿನಿಮಾ ಇದೇ ತಿಂಗಳಲ್ಲಿ ಅಂದರೆ ಜನವರಿಯಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಇದೀಗ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ. ಈ ಚಿತ್ರವನ್ನು ರಜನಿ ಅವರ ಮಗಳು ಐಶ್ವರ್ಯ ರಜನಿಕಾಂತ್ ನಿರ್ದೇಶಿಸುತ್ತಿದ್ದಾರೆ. ಸಂಕ್ರಾಂತಿಗೆ ಚಿತ್ರ ತೆರೆಗೆ ತರುವುದಾಗಿ ಸಿನಿಮಾ ಟೀಂ ಹೇಳಿತ್ತು. ಆದರೆ ಈಗ, ಲಾಲ್ ಸಲಾಂ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ.

Here Is The Big Update About Rajinikanths Upcoming Movie Lal Salaam

ಯಾವಾಗ ಬರುತ್ತೆ 'ಲಾಲ್ ಸಲಾಂ'?

ಹೌದು, ಸೂಪರ್ ಸ್ಟಾರ್ ರಜನಿಕಾಂತ್ ಅವರು ಏನೇ ಮಾಡಿದ್ರೂ ಪರ್ಫೆಕ್ಟ್ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ರಜನಿಕಾಂತ್ ಅವರಿಗೆ ಬೆಟ್ಟದಷ್ಟು ಅಭಿಮಾನಿ ಬಳಗ ಇದೆ. ಹೀಗಿದ್ದಾಗ ನಟ ರಜನಿಕಾಂತ್ ಸಿನಿಮಾಗೆ ಫ್ಯಾನ್ಸ್ ಕಾಯ್ತಿರ್ತಾರೆ. ಹೀಗಾಗಿ 'ಲಾಲ್ ಸಲಾಂ' ಸಿನಿಮಾ ಪೊಂಗಲ್ ಅಂದ್ರೆ ಸಂಕ್ರಾಂತಿಗೆ ರಿಲೀಸ್ ಆಗಬೇಕಿತ್ತು. ಆದರೆ ಈಗ ಬಿಡುಗಡೆ ದಿನಾಂಕವೇ ಮುಂದೆ ಹೋಗಿದೆ. ಫೆಬ್ರವರಿ 9 ರಂದು ಲಾಲ್ ಸಲಾಂ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.

ಯಾರೆಲ್ಲಾ ಇದ್ದಾರೆ ಸಿನಿಮಾದಲ್ಲಿ?

'ಲಾಲ್ ಸಲಾಂ' ಸಿನಿಮಾ ಸ್ಪೋರ್ಟ್ ಡ್ರಾಮಾ ಕಥಾ ಹಂದರ ಹೊಂದಿದೆ. ವಿಷ್ಣು ವಿಶಾಲ್ ಸೇರಿದಂತೆ ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಘ್ನೇಶ್, ಲಿವಿಂಗ್ಸ್ಟನ್, ಸೆಂಥಿಲ್, ಜೀವಿತಾ, ಕೆ.ಎಸ್. ರವಿಕುಮಾರ್ & ತಂಬಿ ರಾಮಯ್ಯ ಸೇರಿ ಹಲವು ಘಟಾನುಘಟಿ ನಟ & ನಟಿಯರು ಈ ಸಿನಿಮಾದ ತಾರಾಬಳಗದಲ್ಲಿ ಇದ್ದಾರೆ. ಹಾಗಾದರೆ ಈ ಸಿನಿಮಾದಲ್ಲಿ ರಜನಿ ಅವರದ್ದು ಯಾವ ಪಾತ್ರ ಗೊತ್ತೆ? ಮುಂದೆ ಓದಿ.

ಮಿಂಚಲಿದ್ದಾರೆ ಸೂಪರ್ ಸ್ಟಾರ್ ರಜನಿ

'ಲಾಲ್ ಸಲಾಂ' ಸಿನಿಮಾ ಆರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿತ್ತು. ಅದ್ರಲ್ಲೂ ನಟ ರಜನಿಕಾಂತ್ ಅವರು ಈ ಸಿನಿಮಾದಲ್ಲಿ ಮೊಯ್ದೀನ್ ಭಾಯ್ ಎಂಬ ಪವರ್‌ಫುಲ್ ಪಾತ್ರ ನಿಭಾಯಿಸಿದ್ದಾರೆ. ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಕೂಡ ಲಾಲ್ ಸಲಾಂ ಸಿನಿಮಾ ಭಾಗವಾಗಿ ಮಿಂಚಿದ್ದಾರೆ. 2022ರ ನವೆಂಬರ್‌ನಲ್ಲಿ ಟೈಟಲ್ ರಿವೀಲ್ ಮಾಡಲಾಯಿತು. ನಂತರ 2023ರ ಮಾರ್ಚ್ ನಲ್ಲಿ ಶೂಟಿಂಗ್ ಶುರು ಮಾಡಲಾಗಿತ್ತು. ಆಗಸ್ಟ್ 2023 ರಲ್ಲಿ ಚಿತ್ರೀಕರಣ ಮುಗಿಸಿತ್ತು 'ಲಾಲ್ ಸಲಾಂ' ಸಿನಿಮಾ ಟೀಂ.

Here Is The Big Update About Rajinikanths Upcoming Movie Lal Salaam

ಆಸ್ಕರ್ ವಿನ್ನರ್ ಮ್ಯೂಸಿಕ್ ಅಬ್ಬರ

ಲಾಲ್ ಸಲಾಂ ಸಿನಿಮಾಗೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕರಾದ, ಎ.ಆರ್. ರೆಹಮಾನ್ ಅವರ ಸಂಗೀತ ಸಂಯೋಜನೆ ಇದ್ದರೆ. ವಿಷ್ಣು ರಂಗಸಾಮಿ ಛಾಯಾಗ್ರಹಣ & ಬಿ. ಪ್ರವೀಣ್ ಭಾಸ್ಕರ್ ಸಂಕಲನ ಇದೆ. ಲಾಲ್‌ ಸಲಾಂ ಕಾಲಿವುಡ್‌ನ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ನ ಸುಭಾಸ್ಕರನ್‌ ನಿರ್ಮಿಸಿದ್ದು, ಕನ್ನಡ, ತೆಲುಗು, ಹಿಂದಿ ಜೊತೆಗೆ ಮಲಯಾಳಂನಲ್ಲಿಯೂ ಈ ಸಿನಿಮಾ ರಿಲೀಸ್ ಆಗಲಿದೆ. ಅಂದಹಾಗೆ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾಗೆ, ಇದು 3ನೇ ಸಿನಿಮಾ ಆಗಿರುವುದು ಕುತೂಹಲ ಹೆಚ್ಚಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+