ಅಯೋಧ್ಯೆಗೆ ಬನ್ನಿ ಎಂದು ಸೂಪರ್ ಸ್ಟಾರ್ ರಜನಿಕಾಂತ್‌ಗೆ ಆಹ್ವಾನ!
ಶ್ರೀರಾಮ ಜನ್ಮಭೂಮಿ ಅಯೋಧ್ಯೆ ಭವ್ಯ ರಾಮ ಮಂದಿರ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿದೆ ಇದೇ ಸಮಯದಲ್ಲಿ ದೇಗುಲ ಉದ್ಘಾಟನೆಗೆ, ಜಗತ್ತಿನ ವಿವಿಧ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ಮತ್ತೊಂದು ಕಡೆ ಭಾರತೀಯ ಸಿನಿಮಾ ರಂಗದ ಸೂಪರ್ ಸ್ಟಾರ್, ಕನ್ನಡಿಗ ರಜನಿಕಾಂತ್‌ಗೆ ಕೂಡ ಶ್ರೀರಾಮ ಮಂದಿರ ಉದ್ಘಾಟನೆಗೆ ಬರಲು ಆಹ್ವಾನ ನೀಡಲಾಗಿದೆ. ಹಾಗಾದ್ರೆ ಯಾರು ಬಂದು ರಜನಿಕಾಂತ್ ಅವರಿಗೆ ಆಹ್ವಾನ ಪತ್ರಿಕೆ ಕೊಟ್ಟಿದ್ದಾರೆ.? ರಜನಿಕಾಂತ್ ಅಯೋಧ್ಯೆಗೆ ಹೋಗ್ತಾರಾ..?
ನಟ ರಜನಿಕಾಂತ್ ಅವರು ಆಧ್ಯಾತ್ಮಿಕವಾಗಿ ಭಾರಿ ಒಲವು ಹೊಂದಿರುವ ವ್ಯಕ್ತಿ. ಹೀಗಾಗಿಯೇ ರಜನಿಕಾಂತ್ ಅವರು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಹೀಗಿದ್ದಾಗ ಶ್ರೀರಾಮ ಮಂದಿರ ಉದ್ಘಾಟನೆಗೆ ಕೂಡ ನಟ ರಜನಿಕಾಂತ್ ಅವರಿಗೆ ಆಹ್ವಾನ ಬಂದಿದೆ. ಕೆಲ ತಿಂಗಳ ಹಿಂದಷ್ಟೇ ನಟ ರಜನಿಕಾಂತ್ ಅವರು ಅಯೋಧ್ಯೆ ಇರುವ ಉತ್ತರ ಪ್ರದೇಶ ಭೇಟಿ ನೀಡಿದ್ರು. ಇದೀಗ ರಜನಿಕಾಂತ್ ಅವರಿಗೆ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಲಾಗಿದೆ.

ರಜನಿಕಾಂತ್‌ಗೆ ಆಹ್ವಾನ ನೀಡಿದ್ದು ಯಾರು?
ಅಷ್ಟಕ್ಕೂ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಬಿಜೆಪಿ ನಾಯಕ ರಾ. ಅರ್ಜುನಮೂರ್ತಿ ಅವರು ಆಹ್ವಾನ ನೀಡಿದ್ದಾರೆ. ಹೀಗೆ ಶ್ರೀರಾಮ ಮಂದಿರದ ಉದ್ಘಾಟನೆಗೆ ಆಹ್ವಾನಿಸಿದ ಕುರಿತ ಫೋಟೋ ಹಂಚಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಫೋಟೋ ಹೇಳುವಂತೆ ರಜನಿಕಾಂತ್ ಸೇರಿ ಇತರರು ಆಹ್ವಾನ ಪತ್ರಿಕೆ ಹಿಡಿದು ನಿಂತಿದ್ದನ್ನ ಕಾಣಬಹುದು. ಹೀಗೆ ದೇಶದ ವಿವಿಧ ಗಣ್ಯರ ಜೊತೆ ನಟ ರಜನಿಕಾಂತ್ ಅವರಿಗೂ ಇದೀಗ ಶ್ರೀರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ.
எனது வாழ்நாளில் கிடைத்த அரும்பாக்கியமாக இன்றைய நிகழ்வு அமைந்தது!
— Ra.Arjunamurthy | ரா.அர்ஜூனமூர்த்தி (@RaArjunamurthy) January 2, 2024
நம் அன்பு தலைவர் திரு. @rajinikanth அவர்களை அவரது இல்லத்தில் சென்று அயோத்தி, ராம ஜன்மபூமி தீர்த்த க்ஷேத்ரா சார்பில் அவரது குடும்பத்தினரையும் ஜனவரி 22 ம்தேதி அயோத்தி கும்பாபிஷேக நிகழ்வுக்கு வரவேண்டி ஆர்.எஸ்.எஸ்… pic.twitter.com/UcHakkRdLW
ಕನ್ನಡದ ನಟರಿಗೂ ಆಹ್ವಾನ ಸಿಕ್ಕಿದೆ!
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಮಾರಂಭ ಅದ್ಧೂರಿಯಾಗಿ ನಡೆಲಿದೆ. 2024ರ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರವು, ಲೋಕಾರ್ಪಣೆ ಆಗಲಿದೆ. ಈ ಹಿನ್ನೆಲೆ, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಯಲ್ಲೇ ದೇಶ & ವಿದೇಶಗಳ ಗಣ್ಯರಿಗೆ ದೇವಾಲಯ ಉದ್ಘಾಟನೆ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಅದರಲ್ಲೂ ಕನ್ನಡ ನೆಲದ ಹಲವು ಗಣ್ಯರಿಗೆ ಕೂಡ ಆಹ್ವಾನ ಹೋಗಿದ್ದು, ಕನ್ನಡ ನಾಡಿನ ನಟ ಯಶ್ ಅವರಿಗೂ ಅಯೋಧ್ಯೆಗೆ ಬರುವಂತೆ ಆಹ್ವಾನ ನೀಡಲಾಗಿದೆ.

ಯಾರಿಗೆಲ್ಲಾ ಆಹ್ವಾನ ನೀಡಿದ್ದಾರೆ?
ನಟ ರಜನಿಕಾಂತ್ ಅವರ ಜೊತೆಗೇ, ನಟ ಡಾರ್ಲಿಂಗ್ ಪ್ರಭಾಸ್ ಅವರಿಗೂ ಆಹ್ವಾನ ಹೋಗಿದೆ ಎನ್ನಲಾಗಿದೆ. ಅಲ್ಲದೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬರಲು, ರಣಬೀರ್ ಕಪೂರ್, ಅಲಿಯಾ ಭಟ್ ಸೇರಿದಂತೆ ಅಜಯ್ ದೇವಗನ್ ಮತ್ತೆ ಸನ್ನಿ ಡಿಯೋಲ್ ಅವರಿಗೆ ಆಹ್ವಾನ ಹೋಗಿದೆಯಂತೆ. ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್, ಅನುಪಮ್ ಖೇರ್, ಅಕ್ಷಯ್ ಕುಮಾರ್ & ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ & ಚಿರಂಜೀವಿ, ಮೋಹನ್ ಲಾಲ್, ಧನುಷ್ ಸೇರಿ ಕನ್ನಡದ ರಿಷಬ್ ಶೆಟ್ಟಿ ಅವರನ್ನ ಹಿಂದೆಯೇ ಆಹ್ವಾನಿಸಲಾಗಿದೆ.
ಒಟ್ಟು ಎಷ್ಟು ಮಂದಿಗೆ ಆಹ್ವಾನ?
ಸಿನಿಮಾ ಸ್ಟಾರ್ಸ್ ಮಾತ್ರವಲ್ಲ ಕ್ರಿಕೆಟ್ ಸ್ಟಾರ್‌ಗಳಿಗೂ ಆಹ್ವಾನ ಸಿಕ್ಕಿದೆ ಈ ಮೂಲಕ ಅಯೋಧ್ಯೆ ಶ್ರೀರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನಿಸಲಾಗಿದೆ ಎನ್ನಲಾಗಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ & ವಿರಾಟ್ ಕೊಹ್ಲಿ & ಉದ್ಯಮಿ ಮುಕೇಶ್ ಅಂಬಾನಿ ಅವರು, ರತನ್ ಟಾಟಾ & ಗೌತಮ್ ಅದಾನಿ ಅವರು ಸೇರಿ ಒಟ್ಟಾರೆ 7000 ಗಣ್ಯರ ದೇವಾಲಯದ ಟ್ರಸ್ಟ್ ಆಹ್ವಾನಿಸಿದೆ ಎನ್ನಲಾಗಿದೆ. 3000 ವಿವಿಐಪಿ ಸೇರಿ ಒಟ್ಟು 7000 ಮಂದಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ ಎನ್ನಲಾಗಿದೆ.












Click it and Unblock the Notifications