1 ಕೋಟಿ ರೂಪಾಯಿ ಒಂದು ನಿಮಿಷಕ್ಕೆ, ಇದು ರಜನಿಕಾಂತ್ ಹವಾ!
ರಜನಿಕಾಂತ್ ಈಗಲೂ ಒಂದು ಸ್ಟೈಲ್ ಮಾಡಿದರೆ ಅಭಿಮಾನಿಗಳು ಥಿಯೇಟರ್‌ನಲ್ಲಿ ಶಿಳ್ಳೆ & ಚಪ್ಪಾಳೆ ಹಾಕಿ ಸಂಭ್ರಮಿಸುತ್ತಾರೆ. ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ಈ ಲೆಜೆಂಡ್ ನಟ ನೀಡುತ್ತಿದ್ದು, ಭಾರತೀಯ ಸಿನಿಮಾ ರಂಗದಲ್ಲೇ ದೊಡ್ಡ ಹೆಸರನ್ನು ಮಾಡಿ ಮಿಂಚಿದ್ದಾರೆ. ಆದ್ರೆ ಇಡೀ ದೇಶದಲ್ಲೇ ಅತ್ಯಂತ ಕಾಸ್ಟ್ಲಿ ನಟ ರಜನಿಕಾಂತ್ ಎನ್ನುವ ಹೊಸ ದಾಖಲೆ ಕೂಡ ರಜನಿಕಾಂತ್ ಹೆಸರಲ್ಲಿ ನಿರ್ಮಾಣವಾಗಿದೆ. ರಜನಿಕಾಂತ್ ಈಗ 1 ನಿಮಿಷಕ್ಕೆ 1 ಕೋಟಿ ರೂಪಾಯಿ ಪಡೆಯುತ್ತಿದ್ದಾರಂತೆ!
ಹೌದು, ರಜನಿಕಾಂತ್ 73ನೇ ವಯಸ್ಸಿನಲ್ಲೂ ಅದ್ಧೂರಿಯಾಗಿ ಸಿನಿಮಾ ಮಾಡುತ್ತಾರೆ. ಹಾಗೇ ಅಭಿಮಾನಿಗಳನ್ನ ಸೆಳೆಯುತ್ತಾರೆ. ಇದೀಗ ಹಿಂದೂ & ಮುಸ್ಲಿಂ ಧರ್ಮೀಯರ ಕಥೆ ತಂದಿದ್ದಾರೆ. ಈ ಸಿನಿಮಾಗೆ ರಜನಿಕಾಂತ್ ಪುತ್ರಿಯೆ ಡೈರೆಕ್ಷನ್ ಮಾಡಿದ್ದು ಈ ಮೂಲಕ ರಜನಿಕಾಂತ್ ಅವರು ಮೊಯಿದ್ದೀನ್ ಭಾಯ್ ಆಗಿ ಧರ್ಮ ಧರ್ಮಗಳ ನಡುವೆ ಸಾಮರಸ್ಯ ಮೂಡಿಸಲು ಎಂಟ್ರಿಯನ್ನ ಹಾಕಿದ್ದಾರೆ. ಆದರೆ ಇದೇ ಸಿನಿಮಾಗೆ ರಜನಿಕಾಂತ್ ಪ್ರತಿ ನಿಮಿಷಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರಂತೆ!

ಕನ್ನಡಿಗ ರಜನಿಕಾಂತ್ ಹವಾ ಜೋರು
ಕರ್ನಾಟಕ ಮೂಲದ ರಜನಿಕಾಂತ್ ಅವರು ಹಲವು ದಶಕಗಳ ಹಿಂದೆ ತಮಿಳುನಾಡಿಗೆ ತೆರಳಿ ಅಲ್ಲೇ ಸೆಟಲ್ ಆದರು. ರಜನಿಕಾಂತ್ ಅವರು ಹೀಗೆ ತಮಿಳು ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದರು. 1975ರಲ್ಲಿ ಅಪೂರ್ವ ರಾಗಂಗಳ್ ತಮಿಳು ಚಿತ್ರದಲ್ಲಿ ನಾಯಕ ನಟನಾಗಿ ನಟಿಸುವುದಕ್ಕೂ ಮೊದಲು ಕೆಲ ಸಿನಿಮಾಗಳಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದರು. ಬಳಿಕ ಅವರು ಫುಲ್ ಟೈಂ ಹೀರೋ ಆಗಿ ಹೊಸ ಸಂಚಲನ ಸೃಷ್ಟಿ ಮಾಡಿದ್ದಾರೆ. ಹೀಗಿದ್ದಾಗಲೇ ನಟ ರಜನಿ ಈಗ ತಮ್ಮ ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ರಜನಿಕಾಂತ್ 'ಲಾಲ್ ಸಲಾಂ'
ಅಷ್ಟಕ್ಕೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ 'ಲಾಲ್ ಸಲಾಂ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ ಫೆ. 9ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಸೂಪರ್ ಸ್ಟಾರ್ ರಜನಿಕಾಂತ್, ವಿಷ್ಣು ವಿಶಾಲ್ ಸೇರಿ ವಿಕ್ರಾಂತ್, ಕಪಿಲ್ ದೇವ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ, ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡಿದ್ದು, ಟ್ರೇಲರ್ ಮೂಲಕ ಕುತೂಹಲ ಡಬಲ್ ಆಗಿಸಿದೆ. ಇದೇ ಸಮಯದಲ್ಲಿ ನಟ ರಜನಿಕಾಂತ್ ಅವರ ಸಂಭಾವನೆ ವಿಚಾರ ಕೂಡ ಹಲ್‌ಚಲ್ ಎಬ್ಬಿಸಿದೆ. ಹಾಗಾದರೆ ಈ ಸಿನಿಮಾಗೆ ರಜನಿಕಾಂತ್ ಅವರು ಪಡೆದ ಸಂಭಾವನೆ ಎಷ್ಟು ಗೊತ್ತೆ? ಬನ್ನಿ ತಿಳಿಯೋಣ.

40 ಕೋಟಿ ರೂಪಾಯಿ ಸಂಭಾವನೆ?
'ಲಾಲ್ ಸಲಾಂ' ಸಿನಿಮಾದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಆದ್ರೂ ರಜನಿಕಾಂತ್ ಅವರಿಗೆ ಭರ್ಜರಿ 40 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ ಎಂಬ ಮಾಹಿತಿ ಈಗ ಹಲ್‌ಚಲ್ ಎಬ್ಬಿಸಿದೆ. ಹಾಗೇ ಈ ಸಿನಿಮಾದಲ್ಲಿ ರಜನಿಕಾಂತ್ ಅವರು ಕೇವಲ 30-40 ನಿಮಿಷ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಲೆಕ್ಕದಲ್ಲಿ ಹೇಳುವುದಾದರೆ ಪ್ರತಿ ನಿಮಿಷ ಲೆಕ್ಕದಲ್ಲಿ ಸುಮಾರು 1 ಕೋಟಿ ರೂಪಾಯಿಯಷ್ಟು ರಜನಿಕಾಂತ್ ಅವರು ಸಂಭಾವನೆಯ ಪಡೆದಂತೆ ಆಗಿದೆ.
ಮತ್ತೆ ಫೈಟ್ ಮಾಡಿದ ರಜನಿಕಾಂತ್
ಹಿಂದೂ & ಮುಸ್ಲಿಂ ಧರ್ಮಗಳ ನಡುವೆ ಘರ್ಷಣೆ ಹಾಗೂ ಸಾಮರಸ್ಯದ ಕಥೆಯನ್ನೂ 'ಲಾಲ್ ಸಲಾಂ' ಸಿನಿಮಾ ವಿವರಿಸಲಿದೆ. ಕಥೆ ಬಗ್ಗೆ ಸುಳಿವು ನೀಡುವಂತಹ ಅನೇಕ ಡೈಲಾಗ್ಸ್ ಇದೀಗ ಟ್ರೇಲರ್ ಮೂಲಕ ರಿವೀಲ್ ಆಗಿವೆ 'ಜನ ಯಾವ ದೇವರ ಮೇಲೆ ನಂಬಿಕೆ ಇಡುತ್ತಾರೆ ಎಂಬುದು ಮುಖ್ಯವಲ್ಲ. ಎಲ್ಲಾ ದೇವರೂ ಒಂದೇ' ಎಂಬ ಡೈಲಾಗ್ ಗಮನ ಸೆಳೆಯುತ್ತದೆ. ಟ್ರೇಲರ್‌ನಲ್ಲಿ ನಟ ರಜನಿಕಾಂತ್ ಅವರ ಮುಂಬೈ ಕಥೆ ಕೂಡ ಸೇರಿಕೊಂಡಿದೆ. ಸಿಕ್ಕಾಪಟ್ಟೆ ಆಕ್ಷನ್ ಮಾಡಿಯು ರಜನಿಕಾಂತ್ ಈ ಸಿನಿಮಾದಲ್ಲಿ ಗಮನ ಸೆಳೆಯುತ್ತಾರೆ. ಹಾಗೇ ಭಾರಿ ದೊಡ್ಡ ಸಂಭಾವನೆಯ ಕೂಡ ಪಡೆದಿದ್ದಾರಂತೆ.
ಇಷ್ಟೆಲ್ಲದರ ನಡುವೆ 'ಲಾಲ್ ಸಲಾಂ' ಸಿನಿಮಾದಲ್ಲಿ ಕ್ರೀಡೆ ಕುರಿತಾದ ಕಥೆಯು ಇದೆ. ಕ್ರಿಕೆಟ್ ಕೇಂದ್ರಿತವಾದ ಕಥೆ ಹೇಳಿದ್ದಾರೆ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್. ಹೀಗಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರದ್ದು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಎನ್ನಲಾಗಿದೆ. ರಜನಿಕಾಂತ್ ಮತ್ತು ಕಪಿಲ್ ದೇವ್ ಅವರು ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಇಷ್ಟೆಲ್ಲದರ ನಡುವೆ ರಜನಿಕಾಂತ್ ಅವರ ಸಂಭಾವನೆ ವಿಚಾರಕ್ಕೆ ಕೂಡ ಈ ಸಿನಿಮಾ ಸದ್ದು ಮಾಡಿದೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications