ಲಿಯೋ ನಂತರ ನಟನೆಗೆ ದಳಪತಿ ವಿಜಯ್‌ ಬ್ರೇಕ್‌, ರಾಜಕೀಯ ಎಂಟ್ರಿಗೆ ಸಜ್ಜು?

ಚೆನ್ನೈ, ಜುಲೈ, 3: ಮುಂಬರುವ ಅಕ್ಟೋಬರ್ 19 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿರುವ ತನ್ನ ಹೊಸ ಚಿತ್ರ ಲಿಯೋ ಬಿಡುಗಡೆಗೆ ಸಜ್ಜಾಗುತ್ತಿರುವ ಜನಸಾಮಾನ್ಯ ದಳಪತಿ ವಿಜಯ್ ಈ ಬಾರಿ ಸಾಕಷ್ಟು ಅವರ ಅಭಿಮಾನಿಗಳಿಗೆ ನಿರಾಶಾದಾಯಕ ಕಾರಣಗಳಿಗಾಗಿ ಮತ್ತೊಮ್ಮೆ ಸುದ್ದಿ ಮಾಡುತ್ತಿದ್ದಾರೆ.

ತಮಿಳುನಾಡಿನ ಸ್ಟಾರ್ ನಟ ವಿಜಯ್ ತಮ್ಮ ರಾಜಕೀಯ ಪಾದಾರ್ಪಣೆಯತ್ತ ಗಮನಹರಿಸಲು ಮೂರು ವರ್ಷಗಳ ಕಾಲ ನಟನೆಯಿಂದ ವಿರಾಮ ತೆಗೆದುಕೊಳ್ಳಲು ಯೋಜಿಸುತ್ತಿದ್ದಾರೆ ಎಂಬ ವದಂತಿಗಳು ಈಗ ಚರ್ಚೆಯಲ್ಲಿವೆ. ವರದಿಯೊಂದರ ಪ್ರಕಾರ, ಲೋಕೇಶ್ ಕನಕರಾಜ್ ಅವರ ಲಿಯೋ ಚಿತ್ರದಲ್ಲಿ ಮಿಂಚಲು ರೆಡಿಯಾಗಿರುವ ವಿಜಯ್, ಎಜಿಎಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ದಳಪತಿ 68 ವೆಂಕಟ್ ಪ್ರಭು ಅವರ ಚಿತ್ರದ ನಂತರ ನಟನೆಯನ್ನು ನಿಲ್ಲಿಸುತ್ತಾರೆ ಎನ್ನಲಾಗುತ್ತಿದೆ.

Actor Thalapathy Vijay

ಈ ಸುದ್ದಿ ತಮಿಳು ಮನರಂಜನಾ ಉದ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳೊಂದಿಗೆ ಅಲೆಗಳನ್ನು ಸೃಷ್ಟಿಸಿದೆ. ಅನೇಕರು ಆಘಾತಕ್ಕೊಳಗಾಗಿದ್ದರೆ, ಕೆಲವರು ಈ ನಿರ್ಧಾರದಿಂದ ಸಂತೋಷಪಟ್ಟಿದ್ದಾರೆ. ವಿಜಯ್ ರಾಜಕೀಯದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಹಂಬಲ ಹೊಂದಿದ್ದು, ಸ್ವಂತ ರಾಜಕೀಯ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎನ್ನಲಾಗಿದೆ.

ಅಭಿಮಾನಿಗಳನ್ನು ಕಾರ್ಯಕರ್ತರಾಗಿ ಪರಿವರ್ತಿಸುವುದು ಮತ್ತು ರಾಜಕೀಯ ಪಕ್ಷವನ್ನು ರಚಿಸುವ ಪ್ರಕ್ರಿಯೆಯು ವೇಗವನ್ನು ಪಡೆದುಕೊಂಡಿದೆ. ಪ್ರಸ್ತುತ ಬೆಳವಣಿಗೆಗಳೊಂದಿಗೆ, ವಿಜಯ್ ಶೀಘ್ರದಲ್ಲೇ ಚುನಾವಣಾ ರಾಜಕೀಯಕ್ಕೆ ತಮ್ಮ ಔಪಚಾರಿಕ ಪ್ರವೇಶವನ್ನು ಘೋಷಿಸಬಹುದು ಎಂಬುದು ಸ್ಪಷ್ಟವಾಗುತ್ತಿದೆ. ಇತ್ತೀಚೆಗೆ ವಿಜಯ್ ತಮಿಳುನಾಡಿನಲ್ಲಿ ಈ ವರ್ಷ ಎಲ್ಲಾ ಕ್ಷೇತ್ರಗಳ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಟಾಪರ್‌ಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಿದ್ದರು. ಸಭೆಯಲ್ಲಿ ಅನೇಕರು ಅವರು ರಾಜಕೀಯಕ್ಕೆ ಬರುವಂತೆ ಒತ್ತಾಯಿಸಿದ್ದರು.

Actor Thalapathy Vijay

ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಟ ವಿಜಯ್ 10 ನಿಮಿಷಗಳ ಕಾಲ ಮಾತನಾಡಿ, ನಾನೇನು ಓದಿಲ್ಲ ನಿಮಗೆ ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ ಎಂದು ಧನುಷ್ ನಟನೆಯ 'ಅಸುರನ್' ಚಿತ್ರದ ಡೈಲಾಗ್‌ವೊಂದನ್ನು ಪ್ರಸ್ತಾಪಿಸಿ ನೀವು ಓದಿದರೆ ಅದನ್ನು ಯಾರಿಂದರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಓದುವುದು ಬಹಳ ಅಗತ್ಯ. ಎಂಜಾಯ್ ಮಾಡುವಾಗ ಎಂಜಾಯ್ ಮಾಡಿ. ಓದುವ ಸಮಯದಲ್ಲಿ ಓದಬೇಕು. ಹಣ ತೆಗೆದುಕೊಂಡು ಮತ ಚಲಾಯಿಸಬೇಡಿ ಎಂದು ತಿಳಿಸಿದ್ದಾರೆ.

ಇನ್ನು ಅಂಬೇಡ್ಕರ್, ಕಾಮರಾಜ್, ಪೆರಿಯಾರ್ ಎಲ್ಲರ ಬಗ್ಗೆಯೂ ಓದುವುದು ಒಳ್ಳೆಯದು. ಅದರಲ್ಲಿ ನಿಮಗೆ ಬೇಕು ಅನ್ನಿಸಿದ್ದನ್ನು ಅಳವಡಿಸಿಕೊಳ್ಳಿ, ಬೇಡದ್ದನ್ನು ಬಿಟ್ಟುಬಿಡಿ. ಸೋಷಿಯಲ್ ಮೀಡಿಯಾ ಬಗ್ಗೆ ಎಚ್ಚರದಿಂದಿರಿ ಎಂದು ಸಲಹೆ ನೀಡಿದ್ದರು. ಕಾಲಿವುಡ್‌ನಲ್ಲಿ ಸೂಪರ್ ಹಿಟ್ ಸಿನಿಮಾಗಳಿಂದ ವಿಜಯ್ ಸೆನ್ಸೇಷನ್ ಕ್ರಿಯೇಟ್ ಮಾಡಲು ನಿಸ್ಸೀಮರು. ಸೂಪರ್ ಸ್ಟಾರ್ ರಜನಿಕಾಂತ್ ಬಳಿಕ ತಮಿಳು ಚಿತ್ರರಂಗದಲ್ಲಿ ಆ ಮಟ್ಟಿಗಿನ ಕ್ರೇಜ್ ಸಂಪಾದಿಸಿರುವ ಮತ್ತೊಬ್ಬ ನಟ ದಳಪತಿ ವಿಜಯ್ ಆಗಿದ್ದಾರೆ.

ಚೆನ್ನೈನ ನೀಲಂಕರೈನಲ್ಲಿರುವ ಆರ್‌ಕೆ ಕನ್ವೆಕ್ಷನ್‌ ಹಾಲ್‌ನಲ್ಲಿ ವಿದ್ಯಾರ್ಥಿಗಳಿಗೆ ಸಲ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ತಮಿಳುನಾಡಿನಾದ್ಯಂತೆ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ 10 ಮತ್ತು 12ನೇ ತರಗತಿ(ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ) ಟಾಪ್ 3 ವಿದ್ಯಾರ್ಥಿಗಳಿಗೆ ವಿಜಯ್ ಬಹುಮಾನ ನೀಡಿದರು. ಪಿಯುಸಿಯಲ್ಲಿ 600 ಅಂಕಕ್ಕೆ 600 ಅಂಕ ಗಳಿಸಿದ ವಿದ್ಯಾರ್ಥಿನಿ ನಂದಿನಿಗೆ ವಿಜಯ್ ಡೈಮಂಟ್ ನೆಕ್ಲೆಸ್ ಬಹುಮಾನವಾಗಿ ನೀಡಿದ್ದು ವಿಶೇಷವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+