‘ರೊಲೆಕ್ಸ್’ ಸೂರ್ಯ ಅಭಿನಯದ 43ನೇ ಸಿನಿಮಾ ಫಿಕ್ಸ್: ಯಾವುದು ಗೊತ್ತಾ?

ನಟ ಸೂರ್ಯ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಅದ್ರಲ್ಲೂ ದಕ್ಷಿಣ ಭಾರತದ ಸಿನಿ ಪ್ರಿಯರ ಪಾಲಿನ ಅತ್ಯುತ್ತಮ ನಟ ಸೂರ್ಯ. ಇಂತಿಪ್ಪ ಸೂರ್ಯ ಇತ್ತೀಚೆಗೆ ರಿಲೀಸ್ ಆದ 'ವಿಕ್ರಂ' ಸಿನಿಮಾ ಮೂಲಕ 'ರೊಲೆಕ್ಸ್' ಎಂಬ ಬಿರುದು ಪಡೆದರು. ಹೀಗಾಗಿ ಸೂರ್ಯಗೆ ರೋಲೆಕ್ಸ್ ಸೂರ್ಯ ಎಂಬ ಹೊಸ ಹೆಸರು ಕೂಡ ಬಂದಿದೆ. ಇಷ್ಟೆಲ್ಲ ಹೆಸರು ಮಾಡಿರುವ ನಟ ಸೂರ್ಯ ತಮ್ಮ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ.

ಹೌದು, ಸೌತ್ ಇಂಡಸ್ಟ್ರಿ ಸ್ಟಾರ್ ಸೂರ್ಯ ಹಾಗೂ ನಿರ್ದೇಶಕಿ ಸುಧಾ ಮತ್ತೆ ಕೈಜೋಡಿಸಿದ್ದು ಹೊಸ ಹಿಟ್ ಸಿನಿಮಾ ಕೊಡಲು ಸಜ್ಜಾಗಿದ್ದಾರೆ. ಕನ್ನಡಿಗ, ಕ್ಯಾಪ್ಟನ್ ಗೋಪಿನಾಥ್ ಜೀವನ ಆಧಾರಿತ ಸಿನಿಮಾ 'ಸೂರರೈ ಪೋಟ್ರು' ಮೂಲಕ ಸಂಚಲನ ಸೃಷ್ಟಿಸಿದ್ದ ಜೋಡಿ ಈಗ ಮತ್ತೆ ಒಂದಾಗಿದ್ದಾರೆ. ಸೂರ್ಯ ನಟಿಸುವ 43ನೇ ಸಿನಿಮಾಗೆ, ಸುಧಾ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಮೊದಲು 'ಸೂರರೈ ಪೋಟ್ರು' ಸಿನಿಮಾ ಪ್ರೇಕ್ಷಕರು & ವಿಮರ್ಷಕರಿಂದಲೂ ಸಖತ್ ರೆಸ್ಪಾನ್ಸ್ ಪಡೆದಿತ್ತು. ಇದೇ ರೀತಿ ಮತ್ತೊಂದು ಬ್ಲಾಕ್ ಬಸ್ಟರ್ ಕೊಡಲು ಇಬ್ಬರೂ ಸಜ್ಜಾಗಿದ್ದಾರೆ.

 Surya Prepared For His 43rd Movie With Soorarai Pottru Team

ಆಸ್ಕರ್ ರೇಸ್‌ನಲ್ಲೂ ಅಬ್ಬರಿಸಿತ್ತು!

ಸೂರ್ಯ ಅಭಿನಯಿಸುವ ಸಿನಿಮಾಗಳು ಅಂದ್ರೆ ಒಂದು ಗತ್ತು ಇರುತ್ತೆ ಹಾಗೇ ಬಿಲ್ಡಪ್‌ಗಿಂತ ಹೆಚ್ಚಾಗಿ ನಟನೆ ಮತ್ತು ಕಥೆಗೆ ಆದ್ಯತೆ ಇರುತ್ತೆ. ಹೀಗಾಗಿಯೇ ರೋಲೆಕ್ಸ್ ಸೂರ್ಯ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗುತ್ತಾರೆ. ಇಂತಿಪ್ಪ ಸೂರ್ಯ ಅಭಿನಯಿಸಿದ್ದ, ಸೂರರೈ ಪೋಟ್ರು ಸಿನಿಮಾ ಆಸ್ಕರ್ ರೇಸ್‌ನಲ್ಲಿ ಕೂಡ ಸದ್ದು ಮಾಡಿತ್ತು. ಈ ಚಿತ್ರ ಹಲವು ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಕೂಡ ಬಾಚಿಕೊಂಡಿತ್ತು. ಅತ್ಯುತ್ತಮ ನಟ & ಅತ್ಯುತ್ತಮ ನಟಿ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದುಕೊಂಡ ಈ ತಂಡ ಹೊಸ ಪ್ರಾಜೆಕ್ಟ್‌ಗೆ ಜೈ ಎಂದಿದೆ.

ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?

ಅಂದಹಾಗೆ ಹೀಗೆ ಸೂರರೈ ಪೋಟ್ರು ಮೂಲಕ ಧಮಾಕ ಎಬ್ಬಿಸಿದ್ದ ಸೂರ್ಯ ಹಾಗೂ ಸುಧಾ ಹೊಸ ಸಿನಿಮಾದಲ್ಲಿ ಬೇರೆಯದ್ದೆ ರಣತಂತ್ರ ರೂಪಿಸಿರುವಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ದೊಡ್ಡ ತಾರಾಬಳಗ #Suriya43 ಸಿನಿಮಾಗೆ ಸಾಥ್ ಕೊಟ್ಟಿದೆ. ಮಾಲಿವುಡ್ ಹ್ಯಾಂಡ್ಸಮ್ ಹಂಕ್ ದುಲ್ಕರ್ ಸಲ್ಮಾನ್ ಸೇರಿದಂತೆ ನಜ್ರಿಯಾ ಫಹದ್ ಮತ್ತು ವಿಜಯ್ ವರ್ಮಾ ಈ ಚಿತ್ರಕ್ಕೆ ಸಾಥ್ ನೀಡಲಿದ್ದಾರೆ.

ಇನ್ನು ಈ ಸಿನಿಮಾಗೆ ತಾತ್ಕಾಲಿಕವಾಗಿ #Suriya43 ಎಂಬ ಟೈಟಲ್ ಇಡಲಾಗಿದೆ. ಸೂರ್ಯ ಒಡೆತನದ ಸಂಸ್ಥೆಯ ಅಡಿಯಲ್ಲಿ ಜ್ಯೋತಿಕಾ & ಸೂರ್ಯ ಸೇರಿದಂತೆ ಇತರರು ನಿರ್ಮಾಣಕ್ಕೆ ಕೈಜೋಡಿದ್ದಾರೆ. ಹಾಗೇ ಇಲ್ಲಿ ಜಿವಿ ಪ್ರಕಾಶ್ ಮ್ಯೂಸಿಕ್ ಇರಲಿದೆ. ಪ್ರಕಾಶ್‌ರ 100ನೇ ಚಿತ್ರ ಇದಾಗಿರೋದು ಮತ್ತೊಂದು ವಿಶೇಷ. ಒಟ್ನಲ್ಲಿ ಸೂರರೈ ಪೋಟ್ರು ಚಿತ್ರದ ಮೂಲಕ ಮೋಡಿ ಮಾಡಿದ್ದ ಸೂರ್ಯ, ಸುಧಾ, ಜಿವಿ ಪ್ರಕಾಶ್ ಮತ್ತೆ ಕೈಜೋಡಿಸಿದ್ದಾರೆ. ಹೀಗಾಗಿ ಸೂರ್ಯ ಅವರ ಅಭಿಮಾನಿಗಳು ಮತ್ತಷ್ಟು ಥ್ರಿಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+