ಧನುಷ್ ಜೊತೆ ನಟಿಸಿದ್ದ ನಟ ಶ್ರೀವಾಸ್ತವ್ ಆತ್ಮಹತ್ಯೆಗೆ ಶರಣು
ಚೆನ್ನೈ, ಫೆಬ್ರವರಿ 07: ನಟ ಧನುಷ್ ಜೊತೆ ಎನ್ನೈ ನೋಕಿ ಪಾಯಂ ಥೋಟ್ಟ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಯುವ ನಟ ಶ್ರೀವಾಸ್ತವ್ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀವಾಸ್ತವ್ ಅವರು ಗುರುವಾರದಂದು ತಮ್ಮ ತಂದೆಯ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದು, ಶುಕ್ರವಾರದಂದು ನೇಣು ಬಿದಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಲ್ಲಾಮೈ ಥರಯೋ ನಟ ಶ್ರೀವಾಸ್ತವ್ ಅವರು ಬುಧವಾರದಂದು ಮನೆಯವರಿಗೆ ಶೂಟಿಂಗ್ ಇದೆ ಎಂದು ಹೇಳಿ ಪೆರಂಬೂರು ಎಂಬಲ್ಲಿ ತಮ್ಮ ತಂದೆ ಕಚೇರಿ ಕಮ್ ಮನೆಗೆ ತೆರಳಿದ್ದಾರೆ. ಮನೆಯವರಿಗೆ ಅನುಮಾನ ಬಂದು ವಿಚಾರಿಸಿದಾಗ ಯಾವುದೇ ಶೂಟಿಂಗ್ ನಿಗದಿಯಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಎನ್ನೈ ನೋಕಿ ಪಾಯಂ ಥೋಟ್ಟ ಚಿತ್ರದಲ್ಲಿ ಶ್ರೀವಾಸ್ತವ್ ನಟಿಸಿದ್ದರು. ಕೆಲ ಸಮಯದಿಂದ ಮಾನಸಿಕ ಸಮಸ್ಯೆಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಆಪ್ತರಿಂದ ತಿಳಿದು ಬಂದಿದೆ. ಇತ್ತೀಚೆಗೆ ಡಿಜಿಟಲ್ ವೆಬ್ ಸರಣಿ ವಲ್ಲಾಮೈ ಥರಯೋದಲ್ಲಿ ನಟಿಸಿ, ಜನಪ್ರಿಯತೆ ಗಳಿಸಿದ್ದರು.
ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]












Click it and Unblock the Notifications