'ತಮಿಳಗ ವೆಟ್ರಿ ಕಳಗಂ' ಪಕ್ಷ ಘೋಷಿಸಿದ ಇಳಯ ದಳಪತಿ ವಿಜಯ್!
ಕರ್ನಾಟಕದ ಸಹೋದರ ರಾಜ್ಯ ತಮಿಳುನಾಡಲ್ಲಿ ಇಂದು ರಾಜಕೀಯ ಬಿರುಗಾಳಿ ಎದ್ದಿದೆ. ನಟ ವಿಜಯ್ ಅವರು ತಮ್ಮ ರಾಜಕೀಯ ಪಕ್ಷದ ಹೆಸರನ್ನು ಘೋಷಿಸುವ ಮೂಲಕ ಈಗ ಸುನಾಮಿ ಎಬ್ಬಿಸಿದ್ದಾರೆ. ಹಾಗಾದರೆ ವಿಜಯ್ ಅವರ ಹೊಸ ಪಕ್ಷದ ಹೆಸರಿನ ಅರ್ಥ ಏನು ಗೊತ್ತೆ? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯೋಣ ಬನ್ನಿ.
ಅಂದಹಾಗೆ ಹೊಸ ರಾಜಕೀಯ ಪಕ್ಷ ಸ್ಥಾಪಿಸಿವುದಾಗಿ ತಮಿಳು ನಟ ವಿಜಯ್ ಅವರು ಘೋಷಿಸಿ ಇಡೀ ದೇಶದ ಗಮನ ಸೆಳೆದಿದ್ದರು. ಈಗ ತಮ್ಮ ಪಕ್ಷಕ್ಕೆ ವಿಜಯ್ ಅವರು 'ತಮಿಳಗ ವೆಟ್ರಿ ಕಳಗಂ' ಎಂದು ನಾಮಕರಣ ಮಾಡಿದ್ದು. ಈ ಮೂಲಕ ತಮಿಳುನಾಡಿನ ವಿಧಾನಸಭೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ವಿಜಯ್ ಅವರ ಪಕ್ಷ ಅಖಾಡ ಪ್ರವೇಶ ಮಾಡಲಿದೆ. ಹಾಗಾದ್ರೆ ಈ ಹೆಸರಿನ ಅರ್ಥ ಏನು? ಮುಂದೆ ಓದಿ.

ವಿಜಯ್ ಪಕ್ಷದ ಅರ್ಥ ಇಲ್ಲಿದೆ
ಅಂದಹಾಗೆ 'ತಮಿಳಗ ವೆಟ್ರಿ ಕಳಗಂ' ಅಂದ್ರೆ 'ತಮಿಳುನಾಡು ವಿಜಯ ಪಕ್ಷ' (Tamil Nadu Victory Party) ಎಂಬ ಅರ್ಥವು ಬರುತ್ತದೆ. ಹಾಗೇ ಇದೇ ವೇಳೆ ವಿಜಯ್ ಅವರು ತಮ್ಮ ಪಕ್ಷದ ಹೆಸರನ್ನು ಘೋಷಿಸಿ, ರಾಜಕೀಯವು ಮತ್ತೊಂದು ಮನರಂಜನಾ ತಾಣವಲ್ಲ.
ಪವಿತ್ರ ಸಾಮಾಜಿಕ ಸೇವೆ ಅಂತಾ ಹೇಳಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆಗೆ ಮೊದಲೇ, ಕಾಲಿವುಡ್ ಸ್ಟಾರ್ ವಿಜಯ್ ಅವರು ಹಲ್‌ಚಲ್ ಎಬ್ಬಿಸಿದ್ದಾರೆ. ಹಾಗಾದರೆ ವಿಜಯ್ ಅವರ ಪಕ್ಷ ಲೋಕಸಭೆಗೂ ಸ್ಪರ್ಧೆ ಮಾಡುತ್ತಾ?

ಲೋಕಸಭೆಯಲ್ಲಿ ವಿಜಯ್ ಹವಾ?
ಅಂದಹಾಗೆ ಇನ್ನೇನು ಕೆಲವೇ ದಿನದಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಆದ್ರೆ ವಿಜಯ್ ಅವರು ಇದೇ ಸಮಯದಲ್ಲಿ ಹೊಸ ತಲ್ಲಣ ಎಬ್ಬಿಸಿದ್ದಾರೆ. ತಮ್ಮ ರಾಜಕೀಯ ಪಕ್ಷ ಹೆಸರು ಘೋಷಣೆ ಮೂಲಕ ಸಂಚಲನಕ್ಕೆ ಕಾರಣವಾಗಿದ್ದಾರೆ. ಆದರೂ ಅವರು ಲೋಕಸಭೆ ವೇಳೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎನ್ನಲಾಗಿದೆ. ತಮ್ಮ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಯಾವ ಪಕ್ಷವನ್ನೂ ನಾವು ಬೆಂಬಲಿಸುತ್ತಿಲ್ಲ.
ವಿಜಯ್ ತಮಿಳುನಾಡು ಸಿಎಂ ಆಗ್ತಾರಾ?
ಈಗಾಗಲೇ ಒಪ್ಪಿಕೊಂಡ ಸಿನಿಮಾಗಳ ಕೆಲಸವನ್ನು ಮುಗಿಸಿದ ಬಳಿಕ, ಸಂಪೂರ್ಣವಾಗಿ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾರೆ ವಿಜಯ್. ಇದು ತಮಿಳುನಾಡು ರಾಜಕೀಯ ಮಾತ್ರವಲ್ಲ, ಇಡೀ ಭಾರತದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. ವಿಜಯ್ ಅವರ ಫ್ಯಾನ್ಸ್‌ಗೆ ಕೂಡ ಈ ಸುದ್ದಿ ಖುಷಿ ಕೊಟ್ಟಿದೆ. ಆದರೆ ಮುಂದೆ ಏನೆಲ್ಲಾ ಬದಲಾವಣೆ ಆಗುತ್ತೆ? ಇದೇ ಹವಾ ಎದ್ದು ಮುಂದೆ ನಟ ವಿಜಯ್ ಅವರು ತಮಿಳುನಾಡಿಗೆ ಸಿಎಂ ಆಗುತ್ತಾರಾ? ಕಾದು ನೋಡಬೇಕಿದೆ.












Click it and Unblock the Notifications