'NEET ಪೇಪರ್ ಲೀಕ್'ಗೆ ಬಲಿಯಾಯ್ತು 12 ಜೀವಗಳು: ಕರ್ನಾಟಕದ ಭಾಗ್ಯಶ್ರೀ, ಯೋಧನ ಪುತ್ರಿ ರಿಯಾ ಸೇರಿ ಹಲವರ ಆತ್ಮ*ಹತ್ಯೆ

ವೈದ್ಯಕೀಯ ಶಿಕ್ಷಣದ ಕನಸು ಹೊತ್ತು ಹಗಲಿರುಳು ಶ್ರಮಿಸುವ ವಿದ್ಯಾರ್ಥಿಗಳನ್ನು 'ನೀಟ್' ಮರುಪರೀಕ್ಷೆಯ ಒತ್ತಡವು ಅಕ್ಷರಶಃ ಬಲಿಪಡೆಯುತ್ತಿದೆ. ಇತ್ತೀಚೆಗಷ್ಟೇ ನೀಟ್ ಫಲಿತಾಂಶ ಹಾಗೂ ಮರುಪರೀಕ್ಷೆಯ ಗೊಂದಲಗಳ ನಡುವೆ ದೇಶಾದ್ಯಂತ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಈ ಬೆನ್ನಲ್ಲೇ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಪಿಯುಸಿಯಲ್ಲಿ ಶೇ. 97ರಷ್ಟು ಅಂಕ ಗಳಿಸಿದ್ದ ಕಾರ್ಗಿಲ್ ಯೋಧನ ಪುತ್ರಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ಈ ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಗೆ ಸಿಲುಕಿ ದೇಶಾದ್ಯಂತ ಇದುವರೆಗೆ ಬರೋಬ್ಬರಿ 12 ಅಮಾಯಕ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ನೀಟ್ ಪತ್ರಿಕೆ ಸೋರಿಕೆ ಮತ್ತು ಹೆಚ್ಚಾದ ಆತಂಕ

ದೇಶದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಲಕ್ಷಾಂತರ ವಿದ್ಯಾರ್ಥಿಗಳ ನಂಬಿಕೆಯನ್ನು ಸಂಪೂರ್ಣವಾಗಿ ಹುಸಿಗೊಳಿಸಿವೆ. ಹಗಲಿರುಳು ನಿದ್ದೆಗೆಟ್ಟು ಓದಿದರೂ, ಪತ್ರಿಕೆ ಸೋರಿಕೆಯಂತಹ ಅಕ್ರಮಗಳಿಂದಾಗಿ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಭಾವನೆ ಅವರಲ್ಲಿ ತೀವ್ರ ಖಿನ್ನತೆ ಮೂಡಿಸಿದೆ. ಪರೀಕ್ಷಾ ಪ್ರಾಧಿಕಾರದ ಲೋಪಗಳು ಹಾಗೂ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಂಡ ಪರಿಣಾಮವಾಗಿ ಕರ್ನಾಟಕ, ರಾಜಸ್ಥಾನ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

NEET 2026

ಕಾರ್ಗಿಲ್ ಯೋಧನ ಪುತ್ರಿ ರಿಯಾ ಕುಮಾರಿ ಆತ್ಮಹತ್ಯೆ

ಈ ಸರಣಿ ಆತ್ಮಹತ್ಯೆಗಳಲ್ಲಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದ 23 ವರ್ಷದ ರಿಯಾ ಕುಮಾರಿ ಥಾಪಾ ಅವರ ಸಾವು ಇಡೀ ದೇಶವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. 1999ರ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಮಾಜಿ ಯೋಧ ರಾಜೇಶ್ ಥಾಪಾ ಅವರ ಪುತ್ರಿಯಾಗಿದ್ದ ರಿಯಾ, ಇತ್ತೀಚೆಗಷ್ಟೇ ಪಿಯುಸಿಯಲ್ಲಿ ಶೇ. 97ರಷ್ಟು ಅಂಕ ಗಳಿಸಿ ಟಾಪರ್ ಆಗಿದ್ದಳು. ಆದರೆ ನೀಟ್ ಪರೀಕ್ಷೆಯ ಕಠಿಣತೆ ಮತ್ತು ಮರುಪರೀಕ್ಷೆಯ ಒತ್ತಡವನ್ನು ನಿಭಾಯಿಸಲಾಗದೆ ಆಕೆ ತನ್ನ ಕೋಣೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. "ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ, ನನ್ನ ಅಸಮರ್ಥತೆಯೇ ಈ ಸಾವಿಗೆ ಕಾರಣ" ಎಂದು ಆಕೆ ಬರೆದಿಟ್ಟಿದ್ದ ಡೆತ್‌ನೋಟ್ ಎಲ್ಲರ ಕರುಳು ಹಿಂಡುವಂತಿದೆ.

NEET ಮರು ಪರೀಕ್ಷೆಗೆ ಕೇಂದ್ರದ ಹೈಟೆಕ್ ಭದ್ರತೆ: ಇದು ಮಿಲಿಟರಿ ಆಪರೇಷನ್ನಾ? ಬಿಜೆಪಿ ವಿರುದ್ಧ ಅಣ್ಣಾಮಲೈ ವಾಗ್ದಾಳಿ
NEET ಮರು ಪರೀಕ್ಷೆಗೆ ಕೇಂದ್ರದ ಹೈಟೆಕ್ ಭದ್ರತೆ: ಇದು ಮಿಲಿಟರಿ ಆಪರೇಷನ್ನಾ? ಬಿಜೆಪಿ ವಿರುದ್ಧ ಅಣ್ಣಾಮಲೈ ವಾಗ್ದಾಳಿ

ನೀಟ್ ಒತ್ತಡಕ್ಕೆ ಬಲಿಯಾದ 12 ವಿದ್ಯಾರ್ಥಿಗಳ ವಿವರ

ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವ್ಯವಸ್ಥೆಯ ಮೇಲಿನ ಗೊಂದಲಗಳಿಂದಾಗಿ ತೀವ್ರ ಹತಾಶೆಗೊಂಡು ಪ್ರಾಣ ಬಿಟ್ಟ 12 ದುರ್ದೈವಿ ವಿದ್ಯಾರ್ಥಿಗಳ ಪಟ್ಟಿ ಈ ಕೆಳಗಿನಂತಿದೆ:

1. ಪ್ರದೀಪ್ ಮೇಘವಾಲ್ - ರಾಜಸ್ಥಾನ

2. ಅಂಶಿಕಾ ಪಾಂಡೆ - ದೆಹಲಿ

3. ರಿತಿಕ್ ಮಿಶ್ರಾ - ಉತ್ತರ ಪ್ರದೇಶ

4. ಸಿದ್ಧಾರ್ಥ್ ಹೆಗ್ಡೆ - ಗೋವಾ

5. ಭಾಗ್ಯಶ್ರೀ - ಕರ್ನಾಟಕ

6. ಅಂಕಿತಾ ಚತುರ್ವೇದಿ - ಮಧ್ಯಪ್ರದೇಶ

7. ಉಮೇಶ್ ಮಾಲಿ - ರಾಜಸ್ಥಾನ

8. ರೇಣು ಮೀನಾ - ರಾಜಸ್ಥಾನ

9. ರಿಯಾ ಕುಮಾರಿ ಥಾಪಾ - ಉತ್ತರಾಖಂಡ

10. ಶಿವಾನಿ ಯಾದವ್ - ಉತ್ತರ ಪ್ರದೇಶ

11. ಅನುಕೀರ್ತನಾ - ತಮಿಳುನಾಡು

12. ಕಹಾನ್ ಪಟೇಲ್ - ಗುಜರಾತ್

ಇವರಲ್ಲಿ ಕರ್ನಾಟಕದ ವಿದ್ಯಾರ್ಥಿನಿ ಭಾಗ್ಯಶ್ರೀ ಕೂಡ ಸೇರಿರುವುದು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ. ಅತಿ ಹೆಚ್ಚು ಪ್ರಕರಣಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತಾಣವಾದ ರಾಜಸ್ಥಾನ ಹಾಗೂ ಉತ್ತರ ಪ್ರದೇಶದಲ್ಲಿ ವರದಿಯಾಗಿವೆ. ಒಂದೆಡೆ ಪೋಷಕರ ವಿಪರೀತ ನಿರೀಕ್ಷೆ, ಮತ್ತೊಂದೆಡೆ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳು ಈ ಎಳೆಯ ಜೀವಗಳನ್ನು ಬಲಿತೆಗೆದುಕೊಳ್ಳುತ್ತಿವೆ.

 NEET ಪೇಪರ್ ಲೀಕ್ ಎಫೆಕ್ಟ್: ಮರುಪರೀಕ್ಷೆ ಪ್ರಶ್ನೆಪತ್ರಿಕೆ ಸಾಗಿಸಲು ಬಂತು ವಾಯುಪಡೆ ಹೆಲಿಕಾಪ್ಟರ್
NEET ಪೇಪರ್ ಲೀಕ್ ಎಫೆಕ್ಟ್: ಮರುಪರೀಕ್ಷೆ ಪ್ರಶ್ನೆಪತ್ರಿಕೆ ಸಾಗಿಸಲು ಬಂತು ವಾಯುಪಡೆ ಹೆಲಿಕಾಪ್ಟರ್

ಕೇವಲ ವೈದ್ಯಕೀಯ ಸೀಟುಗಳೇ ಜೀವನದ ಅಂತಿಮ ಗುರಿಯಲ್ಲ, ವೈದ್ಯಕೀಯ ಕ್ಷೇತ್ರವನ್ನು ಹೊರತುಪಡಿಸಿ ಸಾಧನೆ ಮಾಡಲು ನೂರಾರು ಅವಕಾಶಗಳಿವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ತುರ್ತು ಅಗತ್ಯವಿದೆ. ಸರ್ಕಾರವು ತಕ್ಷಣವೇ ಪರೀಕ್ಷಾ ಅಕ್ರಮಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟಿ, ವಿದ್ಯಾರ್ಥಿಗಳಲ್ಲಿನ ಆತಂಕ ನಿವಾರಿಸಲು ಸೂಕ್ತ ಆಪ್ತಸಮಾಲೋಚನೆ ಒದಗಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+