ಬೆಂಗಳೂರಲ್ಲಿ ನವೋದ್ಯಮಿಗಳಿಗೆ ಕಹಿ ಅನುಭವ, ಜಾಗ ಪಡೆಯೋದೇ ಕಷ್ಟ: ಪಿಕ್ಸೆಲ್ ಸಂಸ್ಥಾಪಕ ಟೀಕೆ ವೈರಲ್

Viral Post: ಬೆಂಗಳೂರಿನ ಜನಸಂಖ್ಯೆ ವಿಸ್ತರಣೆ ಆದಂತೆ, ಭೌಗೋಳಿಕವಗಿಯು ವಿಸ್ತರಣೆ ಆಗುತ್ತಿದೆ. ಐಟಿ ಕೇಂದ್ರಕ್ಕೆ ಅಪಾರ ಕೈಗಾರಿಕಾ ಹೂಡಿಕೆಗಳು ಬರುತ್ತಲೇ ಇವೆ. ಇದರ ನಡುವೆ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಮಧ್ಯ ವಿವಾದ ಹುಟ್ಟುಹಾಕುವಂತೆ, ಬೆಂಗಳೂರಿನ ರಿಯಲ್ ಎಸ್ಟೇಟ್ ಕುರಿತು 'ಪಿಕ್ಸೆಲ್' (Pixxel) ಸಹ-ಸ್ಥಾಪಕ ಕ್ಷಿತಿಜ್ ಖಂಡೇಲ್ವಾಲ್ ಅವರ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಅವರ ಎಕ್ಸ್‌ ಪೋಸ್ಟ್‌ಗೆ ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ರಿಪ್ಲೈ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಕೃತಕ ಉಪಗ್ರಹಗಳನ್ನು ತಯಾರಿಸುವುದಕ್ಕಿಂತ ಇಲ್ಲಿ ಯೋಗ್ಯವಾದ ಜಾಗವನ್ನು ಪಡೆದುಕೊಳ್ಳುವುದು ಅತ್ಯಂತ ಕಷ್ಟಕರವಾಗಿದೆ ಕ್ಷಿತಿಜ್ ಖಂಡೇಲ್ವಾಲ್ ಹೇಳಿದ್ದರು. ಇತ್ತೀಚೆಗೆ ಆಂಧ್ರಪ್ರದೇಶದ ಅಮರಾವತಿಯಲ್ಲಿ ನಡೆದ ಕೈಗಾರಿಕಾ ಶೃಂಗಸಭೆಯಲ್ಲಿ ಕರ್ನಾಟಕ ರಾಜಧಾನಿ ಸಿಲಿಕಾನ್ ಸಿಟಿ ಕುರಿತು ಹೇಳಿದ್ದರು. ಇಲ್ಲಿ ಸಿಟಿಯ ರಿಯಲ್ ಎಸ್ಟೇಟ್ ಹಾಗೂ ಮೂಲಸೌಕರ್ಯದ ಅನಿಶ್ಚಿತತೆ ಕಾಡುತ್ತಿದೆ ಎಂದು ನಕಾರಾತ್ಮಕವಾಗಿ ಬಿಂಬಿಸಿದ್ದಾರೆ.

Criticizes Bengaluru Real Estate

ದೇಶದ ಹವಾಮಾನ ವೈಪರೀತ್ಯ ಹಾಗೂ ಕೃಷಿ ಕ್ಷೇತ್ರಕ್ಕೆ ಅಗತ್ಯವಾದ 'ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್' ಉಪಗ್ರಹಗಳನ್ನು ಸಿದ್ಧಪಡಿಸುವ ಪಿಕ್ಸೆಲ್ ಸಂಸ್ಥೆಗೆ ಅತ್ಯಂತ ಹೈಟೆಕ್ ಪ್ರಯೋಗಾಲಯಗಳ ಅವಶ್ಯಕತೆ ಇದೆ. ಬೆಂಗಳೂರಲ್ಲೇನು ಐಟಿ ಕಂಪನಿಗಳಿಗೆ ಹೆಚ್ಚಿನ ಉತ್ತೇಜನವಿದೆ. ಆದರೆ ವಾಣಿಜ್ಯಾತ್ಮಕವಾಗಿ ಭೂಮಿಯ ಬೆಲೆ ಗಗನಕ್ಕೇರಿದೆ. ಸರ್ಕಾರಿ ಭೂ ಹಂಚಿಕೆಯ ವರ್ಷಗಟ್ಟಲೆ ವಿಳಂಬವಾಗುತ್ತವೆ ಎಂದು ಇಲ್ಲಿನ ಆಡಳಿತ ಕುರಿತು ವ್ಯಂಗ್ಯವಾಡಿದ್ದಾರೆ. ಇತ್ತ ಅವರ ಮಾತಿಗೆ ಜೈ ಎಂದ ಕೆಲವರು ಆಂಧ್ರ ಪ್ರದೇಶದಲ್ಲಿನ ಅವಕಾಶ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ. ಮತ್ತೆ ಕೆಲವರು ಇವರ ಹೇಳಿಕೆ ಟಾಂಟ್ ಕೊಟ್ಟಿದ್ದಾರೆ.

ರಸ್ತೆ ಗುಂಡಿ ಮುಚ್ಚೋದು ರಾಕೆಟ್ ಸೈನ್ಸಾ? ಜಿಬಿಎ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ತರಾಟೆ: ಬದಲಾಗುತ್ತಾ ನಗರದ ಚಿತ್ರಣ?
ರಸ್ತೆ ಗುಂಡಿ ಮುಚ್ಚೋದು ರಾಕೆಟ್ ಸೈನ್ಸಾ? ಜಿಬಿಎ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ತರಾಟೆ: ಬದಲಾಗುತ್ತಾ ನಗರದ ಚಿತ್ರಣ?

ಕಾರ್ಖಾನೆ ಸ್ಥಾಪನೆಗೂ ಮುನ್ನ ಕಹಿ ಅನುಭವ

ದೇಶದ ಅತಿ ದೊಡ್ಡ ಖಾಸಗಿ ಉಪಗ್ರಹ ಜೋಡಣಾ ಘಟಕವಾದ 'ಮೆಗಾಪಿಕ್ಸೆಲ್' ಅನ್ನು ಬೆಂಗಳೂರಿನಲ್ಲೇ ಆರಂಭಿಸಲು ಕಳೆದ ವರ್ಷವಷ್ಟೇ ನಾವು ಸಾಕಷ್ಟು ಹೋರಾಟ ನಡೆಸಿದೆವು. ಆದರೆ ಜಾಗ ಹುಡುಕುವುದೇ ಕಷ್ಟವಾಯಿತು. ಇದರೊಂದಿಗೆ ಆಡಳಿತಾತ್ಮಕ ವಿಳಂಬಗಳ ಕಹಿ ಅನುಭವ ಎದುರಿಸಿದ್ದೇವೆ ಎಂದು ಅವರು ತಮ್ಮ ಕಹಿ ಅನುಭವ ಹಂಚಿಕೊಂಡರು.

ಉದ್ದೇಶಿತ ಉಪಗ್ರಹ ಕಾರ್ಖಾನೆ ಯಲ್ಲಿ ಉಪಗ್ರಹ ತಯಾರಿಕೆಗೆ ಬೇಕಾದ ದೊಡ್ಡ ಗಾತ್ರದ ಯಂತ್ರೋಪಕರಣಗಳು, ಆಪ್ಟಿಕಲ್ ಲ್ಯಾಬ್‌ಗಳು ಮತ್ತು ನಿರಂತರ ವಿದ್ಯುತ್ ಇಲಾಖೆಯ ವಿಶೇಷ ಮೂಲಸೌಕರ್ಯಗಳ ಸೇರಿದಂತೆ ಅನೇಕ ಸೌಲಭ್ಯಗಳು ಬೇಕಾಗುತ್ತವೆ. ಐಟಿ/ಸಾಫ್ಟ್‌ವೇರ್ ಕಂಪನಿಗಳಿಗೆ ಕೇವಲ ಇಂಟರ್‌ನೆಟ್ ಮತ್ತು ಕಂಪ್ಯೂಟರ್ ಇದ್ದರೆ ಸಾಕಷ್ಟು ಎಂದು ಬೆಂಗಳೂರಿನ ಐಟಿ ಕಂಪನಿಗಳ ಕುರಿತು ಅವಹೇಳನ ರೀತಿಯಲ್ಲಿ ಮಾತನಾಡಿದ್ದಾರೆ.

ಕರ್ನಾಟಕಕ್ಕಿಂತ ನೆರೆ ರಾಜ್ಯಗಳು ಬೆಸ್ಟ್

ಕರ್ನಾಟಕದ ಆಡಳಿತದಲ್ಲಿ ವಿಳಂಬ, ಜಾಗ ಸಮಸ್ಯೆ ಇನ್ನಿತರ ಅನಾನುಕೂಲತೆಗಳ ಲಾಭ ಬೇರೆ ರಾಜ್ಯಗಳಿಗೆ ಹೋಗುತ್ತದೆ. ಅಂದರೆ ಬಂಡವಾಳ ಹೂಡಿಕೆ, ಕೈಗಾರಿಕೆ ಸ್ಥಾಪನೆಗಳಂತ ಪ್ರಯೋಜನ ಕರ್ನಾಟಕದ ನೆರೆಯ ರಾಜ್ಯಗಳಿಗೆ ಸಿಗುತ್ತದೆ. ಆಂಧ್ರಪ್ರದೇಶವು ಏಕಗವಾಕ್ಷಿ ಅನುಮೋದನೆ ಮೂಲಕ ಕೆಲವೇ ವಾರಗಳಲ್ಲಿ ಭೂಮಿ ನೀಡುವ ಭರವಸೆ ನೀಡುತ್ತಿದೆ. ಇನ್ನೂ ತಮಿಳುನಾಡಿನ ಹೊಸೂರು ಎಲೆಕ್ಟ್ರಿಕ್ ವಾಹನಗಳ ಹಬ್ ಆಗಿ ಪರಿವರ್ತನೆಯಾಗಲಿದೆ. ಇನ್ನೊಂದೆಡೆ ತೆಲಂಗಾಣದ ಹೈದರಾಬಾದ್ ಈಗಾಗಲೇ ಅಂತರಿಕ್ಷ ತಂತ್ರಜ್ಞಾನಕ್ಕಾಗಿ ವಿಶೇಷ ಕೈಗಾರಿಕಾ ಹಬ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಕರ್ನಾಟಕ ಬಿಟ್ಟು ಉಳಿದ ರಾಜ್ಯಗಳು ಉತ್ತಮ ಎಂದ ಅವರು, ಅಲ್ಲಿನ ಆಡಳಿತ, ಬಂಡವಾಳ ಹೂಡಿಕೆದಾರರಿಗೆ ನೀಡುವ ಅವಕಾಶವನ್ನು ವಿವರಿಸಿದರು.

ಕರ್ನಾಟಕ ಐಟಿ ಕ್ಷೇತ್ರಕ್ಕೆ ಸಿಮೀತವಾಗಬಾರದು

ಬೆಂಗಳೂರು ಸೇರಿದಂತೆ ಕರ್ನಾಟಕವು ಕೇವಲ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಸೀಮಿತವಾಗಬಾರದು. ರೋಬೋಟಿಕ್ಸ್, ಎಲೆಕ್ಟ್ರಿಕ್ ವಾಹನ ಹಾಗೂ ಡೀಪ್-ಟೆಕ್ ನವೋದ್ಯಮಗಳು ಬೆಳೆಯಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ರಫ್ತು ಮತ್ತು ಮೌಲ್ಯವರ್ಧನೆ ವಲಯದಲ್ಲಿ ಕರ್ನಾಟಕಕ್ಕೆ ಹಿನ್ನಡೆ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ. ಕರ್ನಾಟಕ ಬ್ರ್ಯಾಂಡ್ ಉಳಿಸಿಕೊಳ್ಳಲು ಭೂ ಸುಧಾರಣೆ ಹಾಗೂ ತಕ್ಷಣದ ಮೂಲಸೌಕರ್ಯ ಒದಗಿಸುವುದು ಇಂದಿನ ಅನಿವಾರ್ಯಯವಾಗಿದೆ ಅಂತಲೂ ತಜ್ಞರು ಎಚ್ಚರಿಸುತ್ತಿದ್ದಾರೆ.

ಈ ಹಿಂದೆ ಎಐ ಡೇಟಾ ಸೆಂಟರ್ ರಾಜ್ಯಕ್ಕೆ ಕೈ ತಪ್ಪಿ ಆಂಧ್ರದ ವಿಶಾಖಪಟ್ಟಣಂಗೆ ಹೋದಾಗಲೂ ಒಂದಷ್ಟು ರಾಜಕೀಯ ಆರೋಪಗಳು ಕೇಳಿ ಬಂದವು. ಕರ್ನಾಟಕಕ್ಕೆ ಎಐ ಡೇಟಾ ಸೆಂಟರ್ ಆಗಮಿಸಿದ್ದರೆ ಆಗುತ್ತಿದ್ದ ಲಾಭ, ಕೈ ತಪ್ಪಿದ್ದಕ್ಕಾಗಿ ಉಂಟಾದ ನಷ್ಟಗಳ ಲೆಕ್ಕಾಚಾರ ಹಾಕಲಾಗಿತ್ತು.

ಸಚಿವ ಎಂಬಿ ಪಾಟೀಲ್ ರಿಪ್ಲೈ

ಖಂಡೇಲ್ವಾಲ್ ಅವರು ಬೆಂಗಳೂರಿನ ಬಗ್ಗೆ ತಮಗಾದ ಅನುಭವವನ್ನು ಹಂಚಿಕೊಂಡು ಎಕ್ಸ್ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ರಾಜ್ಯ ಕೈಗಾರಿಕೆ ಸಚಿವ ಕಾಮೆಂಟ್ ಮಾಡಿದ್ದು, ಕೈಗಾರಿಕೆ ಕಚೇರಿ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ ಎಂದು ಅಗತ್ಯ ಸಹಕಾರದ ಭರವಸೆ ನೀಡಿದ್ದಾರೆ. ಇದಕ್ಕೆ ಖಂಡೇಲ್ವಾಲ್ ಮರು ಪ್ರತಿಕ್ರಿಯಿಸಿ ಧನ್ಯವಾದ ತಿಳಿಸಿದ್ದಾರೆ, ಸಹಕಾರಕ್ಕೆ ಎದುರು ನೋಡುತ್ತಿರುತ್ತೇನೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+