CET ಕೌನ್ಸೆಲಿಂಗ್ ಇನ್ನೂ ಶುರುವಾಗಿಲ್ಲ, ಖಾಸಗಿ ಕಾಲೇಜು ಫೀ ಡೆಡ್‌ಲೈನ್ ಟೆನ್ಷನ್? ಗಾಬರಿ ಬೇಡ, ಕಾಲೇಜು ಆಯ್ಕೆ ಹೀಗಿರಲಿ

ಮೊದಲು ಸಿಇಟಿ ಫಲಿತಾಂಶ ಬರಲು ತಡವಾಯಿತು. ಅಂದುಕೊಂಡದ್ದಕ್ಕಿಂತ ಸುಮಾರು ಎರಡು ವಾರಗಳು ತಡವಾಗಿಯೇ ಫಲಿತಾಂಶ ಪ್ರಕಟವಾಯಿತು. ಸದ್ಯ ರಿಸಲ್ಟ್ ಬಂತೆಂದು ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟರೆ, ಇದೀಗ ಕೌನ್ಸೆಲಿಂಗ್ ಶುರುವಾಗುವ ಸೂಚನೆಯೇ ಇಲ್ಲ. ಉತ್ತೀರ್ಣರಾದ ಎಲ್ಲರಿಗೂ ಎಂಜನೀಯರಿಂಗ್ ಸೀಟು ಸಿಗುವುದು ಖಚಿತವಾದರೂ, ಯಾವ ಕಾಲೇಜು, ಯಾವ ಬ್ರ್ಯಾಂಚ್ ಎನ್ನೋ ಆತಂಕಕ್ಕೆ ಉತ್ತರ ಸಿಗಬೇಕಲ್ಲ?

ಇಷ್ಟರ ಮಧ್ಯೆ ಖಾಸಗಿ ಎಂಜಿನೀಯರಿಂಗ್ ಕಾಲೇಜುಗಳು ಸಿಕ್ಕಿರುವ ಸೀಟಿಗೆ ಫೀ ಕಟ್ಟಲು ಡೆಡ್‌ಲೈನ್ ನೀಡುತ್ತಿವೆ. ಹೇಗೋ ಫೀಸ್ ಕಟ್ಟಿ ಬಿಡೋಣ, ಆಮೇಲೆ ಮುಂದಿನದು ನೋಡಿಕೊಳ್ಳೋಣವೆಂದರೆ, ಹಲವು ಸಂಸ್ಥೆಗಳ ರೀಫಂಡ್ ಪಾಲಿಸಿಯೇ ಕ್ಲಿಷ್ಟ. ಕಷ್ಟಪಟ್ಟು ಕಟ್ಟಿದ ಫೀಸಲ್ಲಿ 5-10 ಶೇ. ಕಟ್ ಆದರೂ, ಮಧ್ಯಮ ವರ್ಗದವರಿಗೆ ತುಂಬಲಾಗದ ಹೊರೆ.

cet counselling

ಇಂಥ ಸಂದರ್ಭದಲ್ಲಿ ಪೋಷಕರು ಹೇಗಿರಬೇಕು?

ನಿಮ್ಮಿಷ್ಟದ ಕಾಲೇಜಲ್ಲಿ, ನೀವು ಕನಸು ಕಂಡ ವಿಷಯದಲ್ಲಿ ಸೀಟು ಸಿಕ್ಕಿದರೆ ಸರಿ. ಅಂತಿಮ ನಿರ್ಧಾರ ತೆಗೆದುಕೊಂಡು ಜೈ ಅನ್ನೋದು ಒಳ್ಳೇದು. ಆದರೆ, ದುಡುಕುವ ಅಗತ್ಯವಿಲ್ಲ. ಪ್ರತಿಷ್ಠಿತ ಕಾಲೇಜಿನಲ್ಲಿ ನಿಮ್ಮಿಷ್ಟದ ಬ್ರ್ಯಾಂಚಿಗೆ ಆಯ್ಕೆಯಾಗುವ ಸಾಧ್ಯತೆಗಳೂ ಇರುತ್ತವೆ. ಸಹನೆ ಬೇಕಷ್ಟೆ. ಒಂದಿಷ್ಟು ಸರಿಯಾದ ಮಾಹಿತಿ ಇದ್ದರೆ ಸಾಕು, ಒಳ್ಳೆಯ ಕಾಲೇಜು ಆಯ್ಕೆ ಮಾಡೋದು ಕಷ್ಟವೇನಲ್ಲ. ಹೇಗೆ ಅಂತೀರಾ? ಇಲ್ಲಿದೆ ನೋಡಿ.

ಮೊದಲು ಗಾಬರಿ ಬಿಡಿ, ಕೌನ್ಸೆಲಿಂಗ್‌ಗೆ ಕಾಯಿರಿ

CET ಕೌನ್ಸೆಲಿಂಗ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೆರಿಟ್ ಆಧಾರದ ಮೇಲೆ ಪಾರದರ್ಶಕವಾಗಿ ನಡೆಸುತ್ತದೆ. ಸಾಮಾನ್ಯವಾಗಿ ಸರ್ಕಾರಿ ಕೋಟಾ ಸೀಟುಗಳ ಫೀ, ಖಾಸಗಿ/ಮ್ಯಾನೇಜ್‌ಮೆಂಟ್ ಕೋಟಾಕ್ಕಿಂತ ತುಂಬಾ ಕಡಿಮೆ. ಹಾಗಾಗಿ ಡೆಡ್‌ಲೈನ್ ಒತ್ತಡಕ್ಕೆ ಸಿಲುಕಿ ಆತುರದಲ್ಲಿ ದೊಡ್ಡ ಮೊತ್ತ ಕಟ್ಟುವ ಮುನ್ನ, ಕೌನ್ಸೆಲಿಂಗ್‌ಗೆ ಕಾಯೋದೇ ಜಾಣತನ. ಅಪ್‌ಡೇಟ್ ಪಡೆಯಲು KEAದ ಅಧಿಕೃತ ವೆಬ್‌ಸೈಟ್ (cetonline.karnataka.gov.in) ಅನ್ನು ಆಗಾಗ ನೋಡ್ತಾ ಇರಿ.

ಸರಿಯಾದ ಕಾಲೇಜು ಆಯ್ಕೆ ಹೇಗೆ?

  • ಮಾನ್ಯತೆ: ಕಾಲೇಜು AICTE ಮಾನ್ಯತೆ ಮತ್ತು VTU ಅಫಿಲಿಯೇಶನ್ ಹೊಂದಿದೆಯಾ ನೋಡಿ. NBA/NAAC ಮಾನ್ಯತೆ ಇದ್ದರೆ ಇನ್ನೂ ಒಳ್ಳೆಯದು.
  • ಪ್ಲೇಸ್‌ಮೆಂಟ್: ಕಳೆದ 2-3 ವರ್ಷಗಳ ಪ್ಲೇಸ್‌ಮೆಂಟ್ ದಾಖಲೆ, ಯಾವ ಕಂಪನಿಗಳು ಬರ್ತವೆ, ಸರಾಸರಿ ಸ್ಯಾಲರಿ ಎಷ್ಟು ಕೇಳಿ ತಿಳಿಯಿರಿ.
  • ಫ್ಯಾಕಲ್ಟಿ ಮತ್ತು ಲ್ಯಾಬ್: ಅನುಭವಿ ಪ್ರಾಧ್ಯಾಪಕರು, ಸುಸಜ್ಜಿತ ಲ್ಯಾಬ್, ಲೈಬ್ರರಿ ಇದೆಯಾ ಗಮನಿಸಿ.
  • ಫೀ: ಒಟ್ಟು ಫೀ ಎಷ್ಟು, ಅದರಲ್ಲಿ ಏನೇನು ಸೇರಿದೆ ಸ್ಪಷ್ಟವಾಗಿ ಕೇಳಿ; CET ಕೋಟಾ ಫೀ ಜೊತೆ ಹೋಲಿಸಿ ನೋಡಿ.
  • ಲೊಕೇಶನ್: ಮನೆಯಿಂದ ದೂರ, ಹಾಸ್ಟೆಲ್ ಸೌಲಭ್ಯ, ಸಾರಿಗೆ — ಇವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಿ. ಆದರೆ, ಮನೆಗೆ ಹತ್ತಿರ ಎಂಬೊಂದೇ ಕಾರಣಕ್ಕೆ ಯಾವುದೇ ಮೂಲ ಸೌಕರ್ಯವೂ ಇಲ್ಲದ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬೇಡಿ.
  • ಬ್ರಾಂಚ್ vs ಕಾಲೇಜು: ಇಷ್ಟದ ಬ್ರಾಂಚ್ ಮುಖ್ಯವೋ, ಹೆಸರಾಂತ ಕಾಲೇಜು ಮುಖ್ಯವೋ — ಆದ್ಯತೆಯನ್ನು ಮೊದಲೇ ನಿರ್ಧರಿಸಿ.
  • ಹಳೆಯ ವಿದ್ಯಾರ್ಥಿಗಳ ಮಾತು: ಆ ಸಂಸ್ಥೆಯ ಹಳೆಯೇ ವಿದ್ಯಾರ್ಥಿಗಳು ಹಾಗೂ ಈಗ ಓದುತ್ತಿರುವವರ ಬಳಿ ನಿಜವಾದ ಅನುಭವ ಕೇಳಿ ತಿಳಿಯಿರಿ.

ಅಕಸ್ಮಾತ್ ಖಾಸಗೀ ಕಾಲೇಜು ಫೀ ಕಟ್ಟುವುದಾದರೆ?

ಆತುರ ಬೇಡ. ಫೀ ಕಟ್ಟುವ ಮುನ್ನ — ಮರುಪಾವತಿ (refund) ನಿಯಮ ಏನು, ಡೆಡ್‌ಲೈನ್ ನಿಜವಾಗಿ ಅಂತಿಮವೋ, ಸೀಟು ಬ್ಲಾಕ್ ಮಾಡಲು ಎಷ್ಟು ಸಾಕು — ಇದನ್ನೆಲ್ಲ ಲಿಖಿತವಾಗಿ ಕೇಳಿ ಪಡೆಯಿರಿ. ಒತ್ತಡ ಹೇರಿ, ಆತುರದಲ್ಲಿ ದುಡ್ಡು ಕಟ್ಟಿಸಿಕೊಳ್ಳುವ ಕಾಲೇಜುಗಳ ಬಗ್ಗೆ ಸ್ವಲ್ಪ ಎಚ್ಚರ ಇರಲಿ. ಅದರಲ್ಲೂ ಹೆಚ್ಚು ಪ್ರತಿಷ್ಠಿತವಲ್ಲದ ಕಾಲೇಜುಗಳ ಬಗ್ಗೆ ತುಸು ಹೆಚ್ಚಿಗೆ ಎಚ್ಚರವಿರಲಿ.

ಯಾವ ಕಾಲೇಜು ಸೇರಿದರೂ, ಕೊನೆಗೆ ಮಗುವಿನ ಆಸಕ್ತಿ ಮತ್ತು ಶ್ರಮವೇ ಭವಿಷ್ಯವನ್ನು ರೂಪಿಸೋದು. ಹಾಗಾಗಿ ಗಾಬರಿ ಬಿಟ್ಟು, ಸರಿಯಾಗಿ ವಿಚಾರಿಸಿ, ತಾಳ್ಮೆಯಿಂದ ನಿರ್ಧಾರ ಮಾಡಿ. ಎಲ್ಲ ಒಳ್ಳೆಯದಾಗುತ್ತೆ.

ಸಿಇಟಿ ಬಗ್ಗೆ ಒಂದಿಷ್ಟು

ಕಳೆದ ವರ್ಷ ಒಟ್ಟು 2,75,677 ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ-2025) ಗೆ ಅರ್ಹತೆ ಪಡೆದಿದ್ದು, 2.74 ಲಕ್ಷ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿದ್ದರು.

ಈ ವರ್ಷ ಒಟ್ಟು 3.09 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟು 2.92 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಕೌನ್ಸೆಲಿಂಗ್‌ಗೆ ಅರ್ಹತೆ ಪಡೆದಿದ್ದಾರೆ. ಈ ಪೈಕಿ ಇಂಜಿನಿಯರಿಂಗ್ ಕೋರ್ಸು ಪ್ರವೇಶಕ್ಕೆ 2,82,603 ವಿದ್ಯಾರ್ಥಿಗಳಿದ್ದಾರೆ.

2025-26ನೇ ಸಾಲಿನಲ್ಲಿ ಆರಂಭದಲ್ಲಿ ಕೆಇಎ ಮೂಲಕ ಭರ್ತಿಗೆ 72,506 ಸೀಟುಗಳು ಲಭ್ಯವಾಗಿದ್ದರೂ ಪ್ರಕ್ರಿಯೆ ಮುಗಿಯುವಷ್ಟರಲ್ಲಿ 85,020 ಸೀಟುಗಳು ಲಭ್ಯವಾಗಿದ್ದವು. ಆದರೆ, ಈ ಬಾರಿ ಏನಾಗಲಿದೆ ಎಂದು ತಿಳಿಯಬೇಕಿದೆ.

CET ಕೌನ್ಸೆಲಿಂಗ್ ಯಾರು ನಡೆಸುತ್ತಾರೆ?
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೆರಿಟ್ ಆಧಾರದ ಮೇಲೆ ಆನ್‌ಲೈನ್ ಕೌನ್ಸೆಲಿಂಗ್ ನಡೆಸುತ್ತದೆ.
ಖಾಸಗಿ ಕಾಲೇಜಿನ ಡೆಡ್‌ಲೈನ್‌ಗೆ ಈಗಲೇ ಫೀ ಕಟ್ಟಬೇಕಾ?
ಆತುರ ಬೇಡ. ಕೌನ್ಸೆಲಿಂಗ್‌ಗೆ ಕಾಯಿರಿ, ಮತ್ತು ಫೀ ಕಟ್ಟುವ ಮುನ್ನ ಮರುಪಾವತಿ (refund) ನಿಯಮವನ್ನು ಲಿಖಿತವಾಗಿ ಕೇಳಿ ಪಡೆಯಿರಿ.
ಒಳ್ಳೆಯ ಎಂಜಿನಿಯರಿಂಗ್ ಕಾಲೇಜು ಹೇಗೆ ಗುರುತಿಸೋದು?
AICTE ಮಾನ್ಯತೆ, VTU ಅಫಿಲಿಯೇಶನ್, NBA/NAAC ಮಾನ್ಯತೆ, ಪ್ಲೇಸ್‌ಮೆಂಟ್ ದಾಖಲೆ, ಫ್ಯಾಕಲ್ಟಿ ಮತ್ತು ಲ್ಯಾಬ್ ಸೌಲಭ್ಯ ನೋಡಿ ನಿರ್ಧರಿಸಿ.
ಬ್ರಾಂಚ್ ಮುಖ್ಯವೋ, ಕಾಲೇಜು ಮುಖ್ಯವೋ?
ಮೊದಲ ಆದ್ಯತೆ ವಿದ್ಯಾರ್ಥಿಯ ಆಸಕ್ತಿ ಇರೋ ಬ್ರಾಂಚ್‌ಗೆ ಇರಲಿ; ಜೊತೆಗೆ ಕಾಲೇಜಿನ ಪ್ಲೇಸ್‌ಮೆಂಟ್ ಮತ್ತು ಮಾನ್ಯತೆಯನ್ನೂ ಗಮನಿಸಿ.
CET ಸೀಟು ಮತ್ತು ಮ್ಯಾನೇಜ್‌ಮೆಂಟ್ ಸೀಟು ಫೀ ವ್ಯತ್ಯಾಸ ಎಷ್ಟು?
ಸಾಮಾನ್ಯವಾಗಿ CET/ಸರ್ಕಾರಿ ಕೋಟಾ ಫೀ ಗಣನೀಯವಾಗಿ ಕಡಿಮೆ; ಮ್ಯಾನೇಜ್‌ಮೆಂಟ್ ಕೋಟಾ ಫೀ ಹೆಚ್ಚು ದುಬಾರಿಯಾಗಿರುತ್ತದೆ.
ಸರಿಯಾದ ತಾರೀಖು ಮತ್ತು ನಿಯಮಗಳ ಮಾಹಿತಿ ಎಲ್ಲಿ ಸಿಗುತ್ತೆ?
KEAದ ಅಧಿಕೃತ ವೆಬ್‌ಸೈಟ್ (cetonline.karnataka.gov.in) ಮತ್ತು ಸಂಬಂಧಿತ ಕಾಲೇಜುಗಳ ಅಧಿಕೃತ ಮಾಹಿತಿಯನ್ನೇ ನಂಬಿ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+