ನಟ ಸೂರ್ಯ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದ ಹೈಕೋರ್ಟ್
ಚೆನ್ನೈ, ಆಗಸ್ಟ್ 12: ಜೈ ಭೀಮ್ ಚಿತ್ರದಲ್ಲಿ ವನ್ನಿಯಾರ್ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪದ ಮೇಲೆ ನಟ ಸೂರ್ಯ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.
ನಟ ಸೂರ್ಯ ಶಿವಕುಮಾರ್ ಹಾಗೂ ಅವರ ಪತ್ನಿ ನಟಿ ಜ್ಯೋತಿಕಾ, ಚಿತ್ರ ನಿರ್ದೇಶಕ ಟಿಜೆ ಜ್ಞಾನವೇಲ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಚೆನ್ನೈ ನಗರದ ವಕೀಲ, ರುದ್ರ ವನ್ನಿಯಾರ್ ಸೇನಾಕ್ಕೆ ಸೇರಿರುವ ಕೆ ಸಂತೋಷ್ ಎಂಬುವರು ಜೈ ಭೀಮ್ ಚಿತ್ರದಲ್ಲಿ ವನ್ನಿಯಾರ್ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ ಎಂದು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ನಂತರ ಸೈದಾಪೇಟ್ ನ್ಯಾಯಾಲಯದ ಆದೇಶದ ಮೇರೆಗೆ ನಗರ ಪೊಲೀಸರು ಸಂಬಂಧಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ವನ್ನಿಯಾರ್ ಸಮುದಾಯದ ಭಾವನೆಗೆ ಧಕ್ಕೆ ತರಲಾಗಿದೆ, ಸಮುದಾಯವನ್ನು ಕೀಳಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ವೆಲಚ್ಚೇರಿ ಪೊಲೀಸರು ಮೇ 17ರಂದು ಎಫ್ಐಆರ್ ದಾಖಲಿಸಿದ್ದರು.

ಆದರೆ, ಮದ್ರಾಸ್ ಹೈಕೋರ್ಟ್ ಜಸ್ಟೀಸ್ ಎನ್ ಸತೀಶ್ ಕುಮಾರ್ ಅವರು ಎಫ್ಐಆರ್ ರದ್ದುಗೊಳಿಸುವಂತೆ ಆದೇಶಿಸಿದ್ದಾರೆ. ಜಸ್ಟೀಸ್ ಕೆ ಚಂದ್ರು ಅವರ ಹೋರಾಟ ಹಾಗೂ ಪ್ರಕರಣಗಳ ಸತ್ಯ ಘಟನೆಗಳ ಆಧಾರದ ಮೇಲೆ ಚಿತ್ರದ ಕಥೆ ನಿರೂಪಿಸಲಾಗಿದೆ. ಚಂದ್ರು ಅವರು ವಕೀಲರಾಗಿದ್ದಾಗ ನಡೆದ ಘಟನೆಗಳಿಗೆ ಸಂಬಂಧಪಟ್ಟ ಪಾತ್ರಧಾರಿಗಳ ಹೆಸರುಗಳನ್ನು ಬದಲಾಯಿಸಲಾಗಿದೆ ಅಂದಿನ ಮಾಜಿ ಐಜಿಪಿ ಪೆರುಮಾಳ್ ಸ್ವಾಮಿ ಹೆಸರು ಪಾತ್ರ ಬದಲಾಗಿದೆ ಎಂದು ಚಿತ್ರ ತಂಡದ ಪರ ವಕೀಲರು ವಾದಿಸಿದ್ದರು.
ಜೈ ಭೀಮ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪತಾಳ್ ಮಕ್ಕಳ್ ಕಚ್ಚಿ (ಪಿಎಂಕೆ) ಯ ಅನ್ಬುಮಣಿ ರಾಮದಾಸ್ ಅವರು ಚಲನಚಿತ್ರವನ್ನು "ವನ್ನಿಯಾರ್ ಸಮುದಾಯದ ಮೇಲಿನ ಯೋಜಿತ ದಾಳಿ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಜೈ ಭೀಮ್ ಚಿತ್ರ ಒಟಿಟಿಯಲ್ಲಿ ಪ್ರದರ್ಶನ ಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದಲ್ಲದೆ, ಇತ್ತೀಚೆಗೆ ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಜನಸಾಮಾನ್ಯರಿಂದ ಹಿಡಿದು ವಿಮರ್ಶಕರಿಂದ 'ಜೈ ಭೀಮ್' ಚಿತ್ರ ವ್ಯಾಪಕ ಪ್ರಶಂಸೆಗೆ ಒಳಪಟ್ಟಿದೆ. ಸೂರ್ಯ, ಲಿಜೋಮೋಲ್ ಜೋಸ್, ಮಣಿಕಂಠನ್, ಪ್ರಕಾಶ್ ರಾಜ್, ರಾವ್ ರಮೇಶ್ ಅವರನ್ನು ಪ್ರಮುಖ ಪಾತ್ರಧಾರಿಗಳಾಗಿ ಕಾಣಬಹುದು. ಸಂವಿಧಾನ ಶ್ರೇಷ್ಠವಾದ ನ್ಯಾಯಾಂಗವನ್ನು ನಮಗೆ ನೀಡಿದೆ. ಆದ್ದರಿಂದಲೇ ಶ್ರೀಮಂತರು, ಮಧ್ಯಮವರ್ಗದವರು, ಬಡವರು ಯಾರೇ ಆಗಲಿ ನ್ಯಾಯ ಬಯಸಿದಾಗ ನ್ಯಾಯಾಲಯದ ಕಡೆಗೆ ನೋಡುತ್ತಾರೆ.
Jai Bhim Movie Review: 'ಜೈ ಭೀಮ್' ಪ್ರಭಾವಶಾಲಿ ಎಮೋಷನಲ್ ಕೋರ್ಟ್ ಡ್ರಾಮಾ
ನ್ಯಾಯಾಲಯದ ಮುಂದೆ ಎಲ್ಲರೂ ಸರಿಸಮಾನರು. ಸಂವಿಧಾನ ಎಲ್ಲರಿಗೂ ನ್ಯಾಯದ ಹಕ್ಕನ್ನು ನೀಡಿದೆ ಮತ್ತು ಇದುನ್ಯಾಯಾಲಯಗಳಿಂದ ರಕ್ಷಿಸಲ್ಪಟ್ಟಿದೆ. 'ಜೈ ಭೀಮ್' ತಮಿಳುನಾಡಿನ ಕಡಲೂರಿನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರ. ಈ ಚಿತ್ರವನ್ನು ಜ್ಞಾನವೇಲ್ ನಿರ್ದೇಶಿಸಿದ್ದಾರೆ.
ಈ ಚಿತ್ರದಲ್ಲಿ ಬರುವ ಘಟನಾವಳಿಗಳು 1993 ರಲ್ಲಿ ಸಮಯದಲ್ಲಿ ನಡೆದದ್ದು ಆಗಿದೆ. 'ಇರುಳ' ಅಥವಾ 'ಇರುಳಿಗ'ಮಧ್ಯ ತಮಿಳುನಾಡು ಪ್ರಾಂತದಲ್ಲಿ ನ ಒಂದು ಆದಿವಾಸಿ ಸಮುದಾಯ.ಈ ಸಮುದಾಯಕ್ಕೆ ಸೇರಿದ ಹೆಣ್ಣುಮಗಳೊಬ್ಬಳು ನ್ಯಾಯಕ್ಕಾಗಿ ಹೋರಾಟ ಮಾಡಿ ಪರಿ ಅದ್ಭುತ. ಆ ಘಟನಾವಳಿಗಳ ಒಟ್ಟು ಚಿತ್ರಣವೇ ಜೈ ಭೀಮ್.

'ಜೈಭೀಮ್' ಮೊದಲಾರ್ಧ ಆದಿವಾಸಿಗಳ ಬದುಕು ಭಾವನೆಯನ್ನು ನಮ್ಮ ಕಣ್ಣೆದುರು ತೆರೆದಿಡುತ್ತದೆ. ಇನ್ನು ದ್ವಿತೀಯಾರ್ಧದಲ್ಲಿ ಇಡೀ ಚಿತ್ರ ನ್ಯಾಯಾಲಯದೊಳಗೆ ನಡೆಯುತ್ತದೆ. ಪೊಲೀಸ್ ವ್ಯವಸ್ಥೆ ಸಮಾಜ ಮತ್ತು ಬಡವರು ವಿಶೇಷವಾಗಿ ಆದಿವಾಸಿಗಳು ಮತ್ತು ದಲಿತರಿಗೆ ಇಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಎಳೆಎಳೆಯಾಗಿ ಚಿತ್ರ ಬಿಡಿಸಿ ನಮ್ಮ ಮುಂದೆ ಇಡುತ್ತದೆ.
ಜೊತೆಗೆ ಇದೇ ಸಿನಿಮಾದಲ್ಲಿ ಪ್ರಕಾಶ್ ರೈ ನಟಿಸಿರುವ ದೃಶ್ಯವೊಂದಕ್ಕೂ ತೀವ್ರ ಆಕ್ಷೇಪ ಎದುರಾಗಿತ್ತು. ಪೊಲೀಸ್ ಅಧಿಕಾರಿ ಹಾಗೂ ವಿಶೇಷ ತನಿಖಾಧಿಕಾರಿ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ರೈ ದೃಶ್ಯವೊಂದರಲ್ಲಿ ಒಬ್ಬ ಮಾರ್ವಾಡಿ ವ್ಯಕ್ತಿಯ ವಿಚಾರಣೆ ಮಾಡುತ್ತಿರುತ್ತಾರೆ. ಆ ವ್ಯಕ್ತಿ ಹಿಂದಿಯಲ್ಲಿ ಮಾತು ಆರಂಭಿಸುತ್ತಾನೆ, ಆಗ ಪ್ರಕಾಶ್ ರೈ ಆತನ ಕಪಾಳಕ್ಕೆ ಭಾರಿಸಿ, ತಮಿಳಿನಲ್ಲಿ ಮಾತನಾಡು ಎನ್ನುತ್ತಾರೆ. ಈ ದೃಶ್ಯವೂ ವಿವಾದಕ್ಕೆ ಕಾರಣವಾಗಿತ್ತು. ತನ್ನಿಷ್ಟ ಭಾಷೆ ಮಾತನಾಡಿದ್ದಕ್ಕೆ ಕಪಾಳಕ್ಕೆ ಹೊಡೆಯುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಎದ್ದಿತ್ತು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications