ಪ್ರಾಣ ಉಳಿಸುವ ಪವಿತ್ರ ಕಾರ್ಯಕ್ಕೆ ಅಭೂತಪೂರ್ವ ಬೆಂಬಲ: 5 ಲಕ್ಷ ಅಂಗಾಂಗ ದಾನಿಗಳಿಂದ ನೋಂದಣಿ

ನವದೆಹಲಿ: ಭಾರತದಲ್ಲಿ ಅಂಗಾಂಗ ದಾನದ ಜಾಗೃತಿ ಅಭಿಯಾನವು ಮಹತ್ವದ ಮೈಲಿಗಲ್ಲೊಂದನ್ನು ತಲುಪಿದೆ. ಇದರಿಂದ ಅಂಗಾಂಗ ಅಗತ್ಯ ಇರುವವರಿಗೆ ಹೊಸ ಭರವಸೆ ದೊರೆತಂತಾಗಿದೆ. ದೇಶಾದ್ಯಂತ ಒಟ್ಟು 5 ಲಕ್ಷಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತರಾಗಿ ಅಂಗಾಂಗ ದಾನ ಮಾಡುವುದಾಗಿ ನಿರ್ಧರಿಸಿದ್ದಾರೆ. ಪ್ರಾಣ ಉಳಿಸುವ ಈ ಪವಿತ್ರ ಕಾರ್ಯಕ್ಕೆ ಸಾರ್ವಜನಿಕರು ತೋರುತ್ತಿರುವ ಆಸಕ್ತಿಯು ದೇಶದಲ್ಲಿ ಹೆಚ್ಚುತ್ತಿರುವ ಮಾನವೀಯತೆ ಮತ್ತು ಸಾಮೂಹಿಕ ಜವಾಬ್ದಾರಿಗೆ ಸಾಕ್ಷಿಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಮತ್ತು ಕಸಿ ಪ್ರಕ್ರಿಯೆಗಾಗಿ ಕಾಯುತ್ತಿರುವ ಲಕ್ಷಾಂತರ ರೋಗಿಗಳಿಗೆ ಈ ಅಭಿಯಾನವು ಹೊಸ ಆಶಾಕಿರಣ ಮೂಡಿಸಿದೆ. ಸುರಕ್ಷಿತ ಹಾಗೂ ಪಾರದರ್ಶಕ ವ್ಯವಸ್ಥೆಯ ಮೂಲಕ ಸ್ವಯಂಪ್ರೇರಿತ ದಾನವನ್ನು ಉತ್ತೇಜಿಸಲು ಭಾರತ ಸರ್ಕಾರವು ದೇಶಾದ್ಯಂತ ನಿರಂತರ ಪ್ರಯತ್ನ ನಡೆಸುತ್ತಿದೆ. ಸಮಾಜದಲ್ಲಿ ನೆಲೆಸಿರುವ ಮೂಢನಂಬಿಕೆಗಳನ್ನು ತೊಡೆದುಹಾಕಲು ಈ ಮೈಲಿಗಲ್ಲು ನೆರವಾಗಲಿದೆ.

5 Lakh Organ Donation

ದಾನಿಗಳ ಆಧಾರ್ ಆಧಾರಿತ ಪೋರ್ಟಲ್‌ನಿಂದ ಸರಳ ನೋಂದಣಿ

ಈ ಐತಿಹಾಸಿಕ ಸಾಧನೆಗೆ ಕೇಂದ್ರ ಸರ್ಕಾರದ ಆಧಾರ್ ಆಧಾರಿತ ಅಂಗಾಂಗ ದಾನ ನೋಂದಣಿ ಪೋರ್ಟಲ್ (notto.abdm.gov.in) ಪ್ರಮುಖ ಕೊಡುಗೆ ನೀಡಿದೆ. ಈ ಅತ್ಯಾಧುನಿಕ ವೆಬ್‌ಸೈಟ್ ಮೂಲಕ ದೇಶದ ಅಂಗಾಂಗ ದಾನಿಗಳು ಅತ್ಯಂತ ಸುಲಭವಾಗಿ, ಸುರಕ್ಷಿತವಾಗಿ ಮತ್ತು ಪಾರದರ್ಶಕವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಡಿಜಿಟಲ್ ತಂತ್ರಜ್ಞಾನವು ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿದ್ದು, ಸಾರ್ವಜನಿಕ ವೈದ್ಯಕೀಯ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ಯಾರು ಬೇಕಾದರೂ ಸ್ವಯಂ ಇಚ್ಛೆಯಿಂದ ಅಂಗಾಂಗ ದಾನ ನೀಡಲು ಆಸಕ್ತಿ ಇರುವವರು ಇದರಲ್ಲಿ ನೋಂದಣಿ ಮಾಡಿಕೊಳ್ಳಬಹುದು.

Organ Donation Day 2023: ಆ.3ಕ್ಕೆ ರಾಜ್ಯಮಟ್ಟದ ಅಂಗಾಂಗ ದಿನಾಚರಣೆ, ಅಂಗಾಂಗಳಿಗಾಗಿ ನೋಂದಣಿ ಆದವರೆಷ್ಟು? ತಿಳಿಯಿರಿ
Organ Donation Day 2023: ಆ.3ಕ್ಕೆ ರಾಜ್ಯಮಟ್ಟದ ಅಂಗಾಂಗ ದಿನಾಚರಣೆ, ಅಂಗಾಂಗಳಿಗಾಗಿ ನೋಂದಣಿ ಆದವರೆಷ್ಟು? ತಿಳಿಯಿರಿ

ದೇಶದಲ್ಲಿ ಅಂಗಾಂಗ ದಾನದ ಪ್ರಮಾಣ ಹೆಚ್ಚಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೊಡುಗೆಯೂ ಅಪಾರವಾಗಿದೆ. ಏಕೆಂದರೆ ಅವರು ತಮ್ಮ ಜನಪ್ರಿಯ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಜಾಗೃತಿ ಮೂಡಿಸಿ, ಜನರನ್ನು ಈ ಪವಿತ್ರ ಕಾರ್ಯಕ್ಕೆ ಪ್ರೇರೇಪಿಸಿದ್ದಾರೆ. ಪ್ರಧಾನಿಯವರ ಕರೆಗೆ ಸ್ಪಂದಿಸಿದ ಲಕ್ಷಾಂತರ ನಾಗರಿಕರು ಇಂದು ಸ್ವಯಂಪ್ರೇರಿತರಾಗಿ ಮುಂದೆ ಬಂದು ಅಂಗಾಂಗ ದಾನದ ಮಹತ್ವವನ್ನು ಸಾರುತ್ತಿದ್ದಾರೆ.

ವೈದ್ಯಕೀಯ ವಲಯದಿಂದ ನಿರಂತರ ಶ್ರಮ

ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ (NOTTO) ನಿರ್ದೇಶಕರಾದ ಡಾ. ಅನಿಲ್ ಕುಮಾರ್ ಅವರು ಈ ಹೆಮ್ಮೆಯ ಸಾಧನೆಗಾಗಿ ದೇಶದ ನಾಗರಿಕರು, ವೈದ್ಯಕೀಯ ಸಿಬ್ಬಂದಿ, ಸರ್ಕಾರೇತರ ಸಂಸ್ಥೆಗಳು ಹಾಗೂ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ದಾರೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿರಂತರ ನೇರ ಸಹಕಾರದಿಂದಾಗಿ ಈ ಪ್ರಮುಖ ಮೈಲಿಗಲ್ಲನ್ನು ತಲುಪಲು ಸಾಧ್ಯವಾಗಿದೆ ಎಂದು ಅವರು ಪ್ರಶಂಸಿಸಿದ್ದಾರೆ.

ಅಂಗಾಂಗಗಳ ಬೇಡಿಕೆ ಮತ್ತು ಲಭ್ಯತೆಯ ನಡುವಿನ ದೊಡ್ಡ ಕಂದರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ. ಭವಿಷ್ಯದಲ್ಲಿ ದೇಶಾದ್ಯಂತ ಕಸಿ ಪ್ರಕ್ರಿಯೆಗಳು ಅತ್ಯಂತ ನೈತಿಕವಾಗಿ, ರೋಗಿ ಕೇಂದ್ರಿತವಾಗಿ ಹಾಗೂ ಯಾವುದೇ ಜನಸಾಮಾನ್ಯರಿಗೂ ತಾರತಮ್ಯವಿಲ್ಲದಂತೆ ಕೈಗೆಟುಕುವ ದರದಲ್ಲಿ ಸಿಗುವಂತೆ ಆರೋಗ್ಯ ಮೂಲಸೌಕರ್ಯಗಳನ್ನು ನಿರಂತರವಾಗಿ ಬಲಪಡಿಸಲಾಗುತ್ತಿದೆ.

ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಇಂತಹ ಜನಜಾಗೃತಿ ಅಭಿಯಾನಗಳು ಅತ್ಯಂತ ಮಹತ್ವದ ಸ್ವರೂಪ ಪಡೆದುಕೊಂಡಿವೆ. ಜನರ ಈ ಸಾಮೂಹಿಕ ಹಿತಾಸಕ್ತಿ ಮತ್ತು ದಯಾಗುಣವು ಮುಂಬರುವ ದಿನಗಳಲ್ಲಿ ಸಾವಿರಾರು ಜೀವಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜೊತೆಗೆ ಮುಂಬರುವ ತಲೆಮಾರಿಗೆ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಈ ಕೊಡುಗೆ ಪ್ರೇರಕಶಕ್ತಿಯಾಗಲಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+