Organ Donation Day 2023: ಆ.3ಕ್ಕೆ ರಾಜ್ಯಮಟ್ಟದ ಅಂಗಾಂಗ ದಿನಾಚರಣೆ, ಅಂಗಾಂಗಳಿಗಾಗಿ ನೋಂದಣಿ ಆದವರೆಷ್ಟು? ತಿಳಿಯಿರಿ

ಬೆಂಗಳೂರು, ಆಗಸ್ಟ್ 02: ರಾಜ್ಯದಲ್ಲಿ ಅಂಗಾಂಗ ಬೇಡಿಕೆಗಳು ಹೆಚ್ಚಾಗುತ್ತಿದ್ದು, ದಾನದ ಅಗತ್ಯತೆ ಹೆಚ್ಚಿದೆ. ಈ ಸಂಬಂಧ ಜನರಲ್ಲಿ ಜಾಗೃತಿ-ಅರಿವು ಮೂಡಿಸಲು ಮೂಡಿಸಲು ನಾಳೆ ಆಗಸ್ಟ್ 3 ರಂದು ಗುರುವಾರ ಆರೋಗ್ಯ ಇಲಾಖೆಯಿಂದ ಬೆಂಗಳೂರಿನಲ್ಲಿ 'ರಾಜ್ಯ ಮಟ್ಟದ ಅಂಗಾಂಗ ದಾನ ದಿನ' ಕಾರ್ಯಕ್ರಮ ನಡೆಯಲಿದೆ.

ಅಂಗ ದಾನದ ಬಗ್ಗೆ ಅರಿವು ಮೂಡಿಸಲು, ಅಂಗಾಂಗ ದಾನಕ್ಕೆ ಸಂಬಂಧಿಸಿದ ಮೂಢನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸರ್ಕಾರವು ಪ್ರಯತ್ನ ಪಡುತ್ತಲೆ ಇದೆ. ದೇಶದ ನಾಗರಿಕರನ್ನು ಅಂಗಾಂಗ ದಾನ ಮಾಡುವಂತೆ ಪ್ರೇರೇಪಿಸಲು ಮತ್ತು ಉತ್ತೇಜಿಸಲು ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಮಟ್ಟದಲ್ಲಿ ಕೈಗೊಳ್ಳಲಾಗಿದೆ.

State Level Organ Donation Day Celebration In Bengaluru On August 3rd Organ Donation Awareness

ಈ ಬಾರಿ 'ಜೀವನದಲ್ಲಿ ಅಂಗಾಂಗ ದಾನದ ಮೌಲ್ಯ' ಎಂಬ ಹೆಸರಿನಲ್ಲಿ 'ಜಾಗೃತಿ ಅಭಿಯಾನ' ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಕಾರ್ಯಕ್ರಮವು ಗುರುವಾರ ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. ಸಚಿವರು ಇನ್ನಿತರ ಮುಖಂಡರು ಭಾಗವಹಿಸಲಿದ್ದಾರೆ.

'ಮಾನವ ಅಂಗಗಳ ಕಸಿ ಕಾಯಿದೆ' ಸ್ಮರಣಾರ್ಥ ದಿನಾಚರಣೆ

1994ರ ಜುಲೈ 8ರಂದು "ಮಾನವ ಅಂಗಗಳ ಕಸಿ ಕಾಯಿದೆ" ಯನ್ನು ಜಾರಿಗೊಳಿಸಲಾಯಿತು. ಇದರ ಸ್ಮರಣಾರ್ಥ ಜುಲೈ 2023ರ ಜುಲೈ1-31ರ ತಿಂಗಳನ್ನು ಅಂಗದಾನ ಮಾಸವಾಗಿ ಮಾಹೆಯಾಗಿ ಆಚರಿಸಲಾಯಿತು. ಆಗಸ್ಟ್ 3ರಂದು ದೇಶದಲ್ಲಿ ಮೊದಲ ಬಾರಿಗೆ ನಡೆದ ಮರಣಾನಂತರ ಅಂಗದಾನ ಹಾಗೂ ಹೃದಯ ಕಸಿಚಿಕಿತ್ಸೆಯಯ ಜ್ಞಾಪಕರ್ಥವಾಗಿ 'ವಿಶ್ವ ಅಂಗಾಂಗ ದಿನ' ಆಚರಣೆ ಜಾರಿಗೆ ಬಂತು.

State Level Organ Donation Day Celebration In Bengaluru On August 3rd Organ Donation Awareness

ಅಂಗಾಂಗ ದಾನ ಪಡೆಯುವುದು, ನಿರ್ವಹಣೆ, ಅಂಗಾಂಗ ವೈಫಲ್ಯ ರೋಗಿಗಳ ನೋಂದಣಿ, ಚಿಕಿತ್ಸೆ ನಿರ್ವಹಣೆಯನ್ನು 'ಜೀವಸಾರ್ಥಕಥೆ ನೋಂದಾಯಿತ ಸೋಸೈಟಿ/ಸಂಸ್ಥೆ ನೋಡಿಕೊಳ್ಳುತ್ತಿದೆ. ಇಲ್ಲಿ ಸಾವಿರಾರು ಮಂದಿ ಅಂಗಾಂಗ ದಾನಕ್ಕಾಗಿ ಕಾಯುತ್ತಿದ್ದಾರೆ. ಆದರೆ ಬೇಡಿಕೆಯಷ್ಟು ಅಂಗಾಂಗಗಳು ಸಿಗದೇ ಪರದಾಡುವವರ ಸಂಖ್ಯೆ ಹೆಚ್ಚಿದೆ. ಈ ಕುರಿತು ಜೀವ ಸಾರ್ಥಕತೆಯಲ್ಲಿ ನೋಂದಾಯಿತರಾದವರ ವಿವರ ಈ ಕೆಳಗಿದೆ.

ಕರ್ನಾಟಕದಲ್ಲಿ ಅಂಗಾಂಗಗಳಿಗೆ ಕಾಯುತ್ತಿರುವವರ ಸಂಖ್ಯೆ

* ಮೂತ್ರ ಪಿಂಡಗಳು- 5288

* ಯಕೃತ್- 1686

* ಹೃದಯ- 161

* ಶ್ವಾಸಕೋಶಗಳು- 68

* ಹೃದಯ ಮತ್ತು ಶ್ವಾಸಕೋಶಗಳು- 28

* ಯಕೃತ್ ಮತ್ತು ಮೂತ್ರಪಿಂಡ- 45

* ಮೂತ್ರಪಿಂಡ ಮತ್ತು ಮೇದೋಜೀರಕ ಗ್ರಂಥಿ- 23

* ಹೃದಯ ಮತ್ತು ಮೂತ್ರಪಿಂಡ- 02

* ಸಣ್ಣ ಕರುಳು- 01

ಒಬ್ಬ ದಾನಿ ತನ್ನ ಅಂಗಾಂಗಗಳನ್ನು ಸಾವಿನ ನಂತರ ದಾನ ಮಾಡಿದರೆ ಅದರಿಂದ ಸುಮಾರು ಎಂಟು ಜೀವಗಳನ್ನು ಉಳಿಸಬಹುದಾಗಿದೆ. ಹೃದಯ, ಎರಡು ಮೂತ್ರಪಿಂಡಗಳು, ಪಿತ್ತಜನಕಾಂಗ, ಮೇದೋಜೀರಕ ಗ್ರಂಥಿ, ಸಣ್ಣ ಕರುಳು ಮತ್ತು ಶ್ವಾಸಕೋಶಗಳನ್ನು ದಾನ ಮಾಡಬಹುದು. ಅದೇ ದಾನಿ ಅಂಗಾಂಶಗಳಾದ ಚರ್ಮ, ಮೂಳೆಗಳು, ಅಸ್ಥಿರಜ್ಜುಗಳು, ಹೃದಯ ಕವಾಟಗಳು ಮತ್ತು ಕಣ್ಣುಗಳನ್ನು ದಾನ ಮಾಡಿದರೆ ಸುಮಾರು 50 ಮಂದಿಯ ಜೀವ ಉಳಿಸಬಹುದು.

ಅಂಗಾಂಗಗಳ ಕೊರತೆ ನೀಗಿಸಲು ಸರ್ಕಾರ ಕೈಗೊಂಡ ಕ್ರಮ

* ನಿಮ್ಹಾನ್ಸ್ ಸೇರಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕಸಿ ಮಾಡದ ಮಾನವ ಅಂಗಾಂಗ ಹಿಂಪಡೆಯುವಿಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಅಂಗಾಂಗಳನ್ನು ಮಿದುಳು ನಿಷ್ಟ್ರೀಯಗೊಂಡ ವ್ಯಕ್ತಿಯ ಶರೀರದಿಂದ ಹೊರತೆಗೆದು ಕಸಿಕೇಂದ್ರಗಳಿಗೆ ಹಸ್ತಾಂತರಿಸಲಾಗುತ್ತದೆ.

* SOTTO/ ಜೀವಸಾರ್ಥಕತೆಯನ್ನು ಸ್ಥಳೀಯ ಉಪಯೋಗಕ್ಕಾಗಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ/ಧಾರವಾಡ, ಕಲಬುರಗಿ, ಮೈಸೂರು ಎಂದು 5 ವಲಯವನ್ನಾಗಿ ವಿಂಗಡಿಸಲಾಗಿದೆ.

* ಮೆದುಳು ನಿಷ್ಟ್ರೀಯ ಹೊಂದಿದ ರೋಗಿಗಳನ್ನು ಗುರುತಿಸಿ ಘೋಷಣೆ ಮಾಡುವ ಮತ್ತು ರೋಗಿಗಳ ಸಂಬಂಧಿಕರಿಗೆ ಅಂಗಾಂಗ ದಾನ ಮಾಡುವ ಕುರಿತು ಸಮಾಲೋಚನೆಗೆ ಸಂಬಂಧಿಸಿದಂತೆ ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ತರಬೇತಿ ನೀಡಲು Countinued Medical Ecucation/ಕಾರ್ಯಗಾರವನ್ನು ಮಾಡಲಾಗಿದೆ.

* ಅಂಗಾಂಗ ಕಸಿಗೆ ಯಾವುದೇ ವಯೋಮಿತಿ ಇರುವುದಿಲ್ಲ. STTO/ ಜೀವಸಾರ್ಥಕತೆಯು ನಿಪುಣ ವೈದ್ಯರುಗಳ ಸಲಹಾ ಸಮಿತಿಯೊಂದಿಗೆ ಚರ್ಚಿಸಿ ಅಂಗಾಂಗಳ ಗುಣಮಟ್ಟವನ್ನು ನಿರ್ಧರಿಸಿ ಅಂಗಾಂಗ ಕಸಿ ಮಾಡಲಾಗುತ್ತದೆ.

* ಎಲ್ಲ ಮಾಧ್ಯಮ, ಪೇಪರ್/ಎಲೆಕ್ಟ್ರಾನಿಕ್ ಮತ್ತು ಇತರೆ ಮಾಧ್ಯಮಗಳ ಮೂಲಕ ಜಾಹೀರಾತು ನೀಡಿ IEC ಚಟುವಟಿಕೆಗಳನ್ನು ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ.

* ಸರ್ಕಾರದ ವತಿಯಿಂದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಅಡಿಯಲ್ಲಿ ಬಡರೋಗಿಗಳಿಗೆ ಉಚಿತ ಅಂಗಾಂಗ ಕಸಿ ಮಾಡಲು ಸೌಲಭ್ಯವನ್ನು ಕಲ್ಪಿಸಲಾಗಿದೆ.

* ಸರ್ಕಾರಿ ಆಸ್ಪತ್ರೆಗಳಾದ ನೆಪ್ರೋ-ಯುರಾಲಜಿ ಸಂಸ್ಥೆ, ಬೆಂಗಳೂರು ಹಾಗೂ ಕರ್ನಾಟಕ ವೈದ್ಯಕೀಯ ಸಂಸ್ಥೆ ಕಿಮ್ಸ್, ಹುಬ್ಬಳ್ಳಿಯಲ್ಲಿ ಕಿಡ್ನಿ ಕಸಿ ಮಾಡಲಾಗುತ್ತಿದೆ.

* ಯಕೃತ್ ಕಸಿ ಸೌಲಭ್ಯವನ್ನು ಬೆಂಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ Institute of Gastro Entrology Science and Organ Transplant ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+