ಫೇಕ್ ಫುಡ್ ಡೆಲಿವರಿ ಮಾಡಿ ಸಿಕ್ಕಿಬಿದ್ದ ಜೊಮ್ಯಾಟೊ ಬಾಯ್: ಸಿಸಿಟಿವಿ ವಿಡಿಯೋ ವೈರಲ್

ಬೆಂಗಳೂರು: ರಾಜಧಾನಿ ಬೆಂಗಳೂರು, ಕೊಲ್ಕತ್ತಾ, ಚೆನ್ನೈ, ಹೈದರಾಬಾದ್ ನಂತಹ ಮೆಟ್ರೋ ಮಹಾನಗರಗಳಲ್ಲಿ ಧಾವಂತದ ಬದುಕು ನಡೆಸುವವರೇ ಹೆಚ್ಚು. ಇವರಿಗೆ ಅಡುಗೆ ಮಾಡುವುದು ಬಿಡಿ, ತಿನ್ನಲು ಕೂಡ ಸಮಯ ಇರುವುದಿಲ್ಲ. ಹೀಗಾಗಿಯೇ ಇವರ ಸಹಾಯಕ್ಕೆಂದು ಫುಡ್ ಡೆಲಿವರಿ ಇ-ಕಾಮರ್ಸ್ ವೇದಿಕೆಗಳಾದ ಜೊಮ್ಯಾಟೊ, ಸ್ವಿಗ್ಗಿ ಇನ್ನಿತರ ಆಪ್‌ಗಳಿವೆ. ಅವುಗಳ ಮೂಲಕ ಇಷ್ಟದ ಆಹಾರ ತರಿಸಿಕೊಳ್ಳುತ್ತೇವೆ. ಹೀಗೆ ಇಲ್ಲೊಬ್ಬರು ಆನ್‌ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿದ ಡೆಲಿವರಿ ಬಾಯ್ ಫುಡ್ ಫೆಕ್ ಡೆಲಿವರಿ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಿಂದ ನೂತನ ಸ್ಕ್ಯಾಮ್‌ ವೊಂದು ಬಯಲಾಗಿದೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

ಇಲ್ಲೊಬ್ಬ ಜೊಮ್ಯಾಟೊ ಡೆಲಿವರಿ ಬಾಯ್ ಆನ್‌ಲೈನ್ ಫುಡ್ ಆರ್ಡರ್ ಮಾಡಿದ ಗ್ರಾಹಕನಿಗೆ ಮೋಸ ಮಾಡಿದ್ದಾನೆ. ಅದನ್ನು ಮನೆಯ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಇದು 'ಫೇಕ್ ಡೆಲಿವರಿ' ಎಂದು ಗ್ರಾಹಕ ಸಾಬೀತು ಮಾಡಿದ್ದಾರೆ. ಅದೆಷ್ಟೋ ಬಡವರು, ಮಧ್ಯಮ ವರ್ಗದ ಯುವಕರು ಫುಡ್ ಡೆಲಿವರಿ, ತರಕಾರಿ, ಬಟ್ಟೆ ಇನ್ನಿತರ ವಸ್ತುಗಳ ಡೆಲಿವರಿ ಮಾಡಿಕೊಂಡು, ರಾಪಿಡೋ ಓಡಿಸಿಕೊಂಡು ಜೀವನ ನಡೆಸುತ್ತಾರೆ. ಆದರೆ ಇಂಥಹ ಒಬ್ಬ ಡೆಲಿವರಿ ಬಾಯ್‌ ನಿಂದ ಇತರ ಪ್ರಾಮಾಣಿಕ ಡೆಲಿವರಿ ಬಾಯ್‌ಗಳನ್ನು ಕೆಟ್ಟವರಂತೆ ನೋಡುವಂತಾಗಿದೆ.

Fake Food Delivery

ವೈರಲ್ ವಿಡಿಯೋದಲ್ಲಿ ಕಾಣಿಸುವುದೇನು?

ಸಿಸಿಟಿವಿ ದೃಶ್ಯಗಳನ್ನು @AvmNews7 ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ 'ಜೊಮ್ಯಾಟೊ ಡೆಲಿವರಿ ಬಾಯ್ ಒಬ್ಬ ಮನೆ ಮುಂದೆ ಬಂತು ಡೆಲಿವರಿ ಪ್ಯಾಕೇಟ್ ಅನ್ನು ಇಡುತ್ತಾನೆ. ಮನೆ ಬಾಗಿಲು ಕಾಣುವಂತೆ ಮೊಬೈಲ್‌ನಲ್ಲಿ ಫೋಟೋ ಸೆರೆ ಹಿಡಿದುಕೊಳ್ಳುತ್ತಾನೆ' ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಷ್ಟೇ ಆಗಿದ್ದರೆ ಇದು ಕಾಮನ್ ಎನ್ನಬಹುದಿತ್ತು. ಆದರೆ 'ಈ ಡೆಲಿವರಿ ಬಾಯ್ ಪೋಟೋ ತೆಗೆದುಕೊಂಡ ಬಳಿಕ ಮರಳಿ ಆ ಆನ್‌ಲೈನ್ ಫುಡ್ ಆರ್ಡರ್ ಬಾಕ್ಸ್ ಅನ್ನು ಮರಳಿ ತೆಗೆದುಕೊಂಡು ಹೋಗುತ್ತಾನೆ' ಈ ನಕಲಿ ಡೆಲಿವರಿ ವಿಡಿಯೋ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Video: ಬಾಲ್ಕನಿಯಲ್ಲಿ ಟಾಯ್ಲೆಟ್ ಅಳವಡಿಸಿದ ಮನೆ ಮಾಲೀಕ; ನೋಡಿ ದಂಗಾದ ಯುವತಿಯರು, ವೈರಲ್
Video: ಬಾಲ್ಕನಿಯಲ್ಲಿ ಟಾಯ್ಲೆಟ್ ಅಳವಡಿಸಿದ ಮನೆ ಮಾಲೀಕ; ನೋಡಿ ದಂಗಾದ ಯುವತಿಯರು, ವೈರಲ್

ಡೆಲಿವರಿ ಬಾಯ್ ಆನ್‌ಲೈನ್ ಆರ್ಡರ್ ಮಾಡಿದವರಿಗೆ ಫುಡ್ ಡೆಲಿವರಿ ಮಾಡಿದ್ದಾಗಿ ಗ್ರಾಹಕರಿಗೆ ಜೊತೆಗೆ ಜೊಮ್ಯಾಟೊ ಕಂಪನಿಗೆ ವಂಚಿಸಿದ್ದಾನೆ. ಆಪ್‌ನಲ್ಲಿ ಡೆಲಿವರಿ ಕೊಟ್ಟಿರುವುದಕ್ಕೆ ಸಾಕ್ಷಿ ತೋರಿಸಲು, ಫೋಟೋ ಅಪ್ಲೋಡ್ ಮಾಡಲು ಮನೆ ಬಾಗಿಲ ಬಳಿ ಫುಡ್ ಪ್ಯಾಕೇಟ್ ಇಟ್ಟು ಫೋಟೋ ತೆಗೆದು ಬಳಿಕ ತನ್ನೊಂದಿಗೆ ಆರ್ಡರ್ ಮರಳಿ ತೆಗೆದುಕೊಂಡು ಹೋಗಿದ್ದನ್ನು ಗ್ರಾಹಕ ಸಿಸಿಟಿವಿಯಲ್ಲಿ ನೋಡಿ ದಂಗಾಗಿದ್ದಾರೆ. ಈ ಘಟನೆ ಕೊಲ್ಕತ್ತದಲ್ಲಿ ನಡೆದಿದೆ.

ಅಕ್ರಮ ತಡೆಗೆ ನೆಟ್ಟಿಗರ ಆಗ್ರಹ, ಜೊಮ್ಯಾಟೊಗೆ ವಿಡಿಯೋ ರವಾನೆ

ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಡೆಲಿವರಿ ಬಾಯ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 'ಡೆಲಿವರಿಗೆ ಕೋಡ್ ಕಡ್ಡಾಯಗೊಳಿಸುವ ಮೂಲಕ ಇಂತಹ ಅಕ್ರಮ ತಡೆಗಟ್ಟಿ' ಎಂದು ಬಳಕೆದಾರರು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ಈ ರೀತಿಯ ಘಟನೆಗಳು ಅನೇಕ ಕಡೆಗಳಲ್ಲಿ ನಡೆಯುತ್ತಿವೆ' ಎಂದು ಮತ್ತೊಬ್ಬರು ತಿಳಿಸಿದ್ದಾರೆ. 'ಗ್ರಾಹಕರು ಆರ್ಡರ್ ಸ್ವೀಕರಿಸದಿದ್ದಾಗ ನೀವು ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದರೆ ಒಂದು ದಿನದೊಳಗೆ ನಿಮ್ಮ ಆರ್ಡರ್ ಹಣ ವಾಪಾಸ್ ಸಿಗುತ್ತದೆ' ಎಂದು ಇನ್ನೊಬ್ಬರು ಕಾಮೆಂಟ್ ಮೂಲಕ ಸಲಹೆ ನೀಡಿದ್ದಾರೆ. ಹೀಗೆ ಅನೇಕರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಡೆಲಿವರಿ ಬಾಯ್ ನಡೆಯನ್ನು ಖಂಡಿಸಿದ್ದಾರೆ.

ಸದ್ಯ ಆರ್ಡರ್ ಸ್ವೀಕರಿಸದೇ ಗ್ರಾಹಕರು ಸಿಸಿಟಿವಿ ವೀಡಿಯೊ ಸಾಕ್ಷ್ಯವನ್ನು ಜೊಮಾಟೊಗೆ ಸಲ್ಲಿಸಿದ್ದಾರೆ. ಸಂಪೂರ್ಣ ತನಿಖೆ ನಡೆಸಿ ತಮಗೆ ಹಣ ಮರುಪಾವತಿ ಮಾಡಬೇಕು ಹಾಗೂ ನಕಲಿ ಡೆಲಿವರಿ ನೀಡಿದ ಡೆಲಿವರಿ ಬಾಯ್ ಇವರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಸದ್ಯ ಜೊಮ್ಯಾಟೊದಿಂದ ಮರಳಿ ಪ್ರತಿಕ್ರಿಯೆಗೆ ಗ್ರಾಹಕ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+