Silk Smitha: ಸಿಲ್ಕ್ ಸ್ಮಿತಾ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆದಿತ್ತಾ?
ಒಂದು ಕಾಲದಲ್ಲಿ ಸಿಲ್ಕ್ ಸ್ಮಿತಾ ಇಲ್ಲದ ಸಿನಿಮಾಗಳೇ ರಿಲೀಸ್ ಆಗುತ್ತಿರಲಿಲ್ಲ. ಕೊನೇ ಪಕ್ಷ ಒಂದೇ ಒಂದು ಹಾಡಿಗಾದರೂ ಸಿಲ್ಕ್ ಸ್ಮಿತಾ ಎಂಟ್ರಿ ಕೊಟ್ಟು ಹೋಗುತ್ತಿದ್ದರು. ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಿಲ್ಕ್ ಸ್ಮಿತಾ ಅಬ್ಬರಿಸಿದ್ರು. ಈ ರೀತಿ ಹೆಸರು ಮಾಡಿದ್ದ ನಟಿ ಮಾತ್ರ ದುರಂತ ಸಾವು ಕಂಡರು. ಆದರೆ ಇದೀಗ ಸ್ಫೋಟಕ ಆರೋಪ ಕೇಳಿ ಬಂದಿದ್ದು, ಸಿಲ್ಕ್ ಸ್ಮಿತಾ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆದಿತ್ತಾ? ಎಂಬ ಪ್ರಶ್ನೆ ಮೂಡಿದೆ.
ಹೌದು, ಸುಮಾರು 360ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಸಂಚಲನ ಸೃಷ್ಟಿಸಿದ್ದ ಸಿಲ್ಕ್ ಸ್ಮಿತಾ ಅಂದರೆ ಬೇರೆ ಲೆವೆಲ್ ಕ್ರೇಜ್ ಇತ್ತು. ಹಳೆಯ ಸಿನಿಮಾಗಳಲ್ಲಿ ಸಿಲ್ಕ್ ಸ್ಮಿತಾ ಅಬ್ಬರ ನೋಡಿದರೆ, ಆ ಸಿನಿಮಾಗಳಲ್ಲಿ ನಾಯಕಿ ಪಾತ್ರ ಮಾಡಿದವರೇ ಡಲ್ ಆಗುತ್ತಿದ್ದರು. ಹೀಗೆ ಬಹುಬೇಡಿಕೆಯ ನಟಿ ಸಿಲ್ಕ್ ಸ್ಮಿತಾಗೆ ದೊಡ್ಡ ಗಂಡಾಂತರ ಕಾದಿತ್ತು. 1996ರಲ್ಲಿ ಅವರು ಮೃತಪಟ್ಟಿದ್ದರು. ಹೀಗೆ ಸಿಲ್ಕ್ ಸ್ಮಿತಾ ಮೃತಪಟ್ಟ ನಂತರ ಅವರ ಶವದ ಜೊತೆಗೆ ಲೈಂಗಿಕ ಕ್ರಿಯೆ ನಡೆದಿತ್ತಾ? ಹಾಗಾದ್ರೆ ತಮಿಳು ಸಿನಿಮಾ ಪತ್ರಕರ್ತ ಹೇಳಿದ್ದೇನು?

ಶವದ ಜೊತೆಗೆ ಲೈಂಗಿಕ ಕ್ರಿಯೆ?
ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗ ಆಳಿದ್ದ ಜನಪ್ರಿಯ ಮಾದಕ ನಟಿ ಸಿಲ್ಕ್ ಸ್ಮಿತಾ ಸತ್ತಾಗ ಅವರ ಶವದ ಜೊತೆಗೆ ಸೆಕ್ಸ್ ಮಾಡಿರಬಹುದು ಎಂದು ತಮಿಳು ಹಿರಿಯ ನಟ ಹಾಗೂ ಸಿನಿಮಾ ಪತ್ರಕರ್ತ ಬೈಲ್ವಾನ್ ರಂಗನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಪದೇ ಪದೆ ವಿವಾದಾತ್ಮಕ ಮಾತುಗಳ ಮೂಲಕವೇ ಸದ್ದು ಮಾಡುವ ಬೈಲ್ವಾನ್ ರಂಗನಾಥ್ ಅನೇಕ ಬಾರಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗೆ ಈ ಹಿಂದೆಯೇ ಸಿಲ್ಕ್ ಸ್ಮಿತಾ ಅವರ ಬಗ್ಗೆ ಬೈಲ್ವಾನ್ ರಂಗನಾಥ್ ಸಂದರ್ಶನ ಒಂದರಲ್ಲಿ ನೀಡಿದ್ದ ಹೇಳಿಕೆ ಈಗ ವೈರಲ್ ಆಗುತ್ತಿದೆ.
ಸಿಲ್ಕ್ ಸ್ಮಿತಾ ಬಗ್ಗೆ ಹೇಳಿದ್ದೇನು?
ಈ ಸಂದರ್ಶನದಲ್ಲಿ ಮಾತನಾಡಿರುವ ಬೈಲ್ವಾನ್ ರಂಗನಾಥ್, ಈ ಹಿಂದೆ ಶವಾಗಾರ ಹೇಗೆ ಇರುತ್ತಿದ್ದವು ಎಂದು ವಿವರಿಸುತ್ತಾ ಸ್ಮಿತಾ ಅವರ ವಿಚಾರ ಮಾತನಾಡಿದ್ದಾರೆ. 'ಶವಾಗಾರದ ನೌಕರರು ಸಾಮಾನ್ಯವಾಗಿ ಮದ್ಯ ಸೇವಿಸಿ ಕೆಲಸ ಮಾಡುತ್ತಿದ್ದರು. ಶವಾಗಾರಗಳಲ್ಲಿ ನಿಲ್ಲಲೂ ಆಗದ ಸ್ಥಿತಿ ಆಗ ಇರುತ್ತಿತ್ತು, ಈಗಿನ ರೀತಿ ಶವಾಗಾರಗಳು ಹಿಂದಿನ ಕಾಲದಲ್ಲಿ ಸ್ವಚ್ಛವಾಗಿ ಇರುತ್ತಿರಲಿಲ್ಲ. ಹಾಗೇ ಆಸ್ಪತ್ರೆಯಲ್ಲಿ ಹೆಚ್ಚು ದುರ್ವಾಸನೆ ಬೀರುವ ಸ್ಥಳ ಕೂಡ ಶವಾಗಾರ ಆಗಿರುತ್ತಿತ್ತು. ಅಲ್ಲದೆ ಅಲ್ಲಿನ ಕೆಲಸಗಾರರಿಗೆ ಮೈಮೇಲೆ ಅರಿವೆ ಇರುತ್ತಿರಲಿಲ್ಲ. ಅಲ್ಲಿ ಕೆಲಸ ಶುರುವಾಗುತ್ತಲೇ ಕುಡಿದ ಅಮಲಿನಲ್ಲಿ ತೆಲಾಡುತ್ತಿರುತ್ತಾರೆ' ಎಂದು ಆರೋಪಿಸಿದ್ದಾರೆ. ಇದೇ ವೇಳೆ ಸಿಲ್ಕ್ ಸ್ಮಿತಾ ಮೃತಪಟ್ಟ ವಿಚಾರ ಪ್ರಸ್ತಾಪಿಸಿದ್ದಾರೆ.

ಶವದ ಮೇಲೆ ಅತ್ಯಾಚಾರ ನಡೆದಿತ್ತಾ?
'ಪರಿಸ್ಥಿತಿ ಹೀಗಿದ್ದಾಗ ಸಿಲ್ಕ್ ಸ್ಮಿತಾ ಅವರ ಕಣ್ಮನ ಸೆಳೆಯುವ ಸೌಂದರ್ಯ ಕಂಡು ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹೇಗೆ ತಾನೇ ಸುಮ್ಮನಿರುತ್ತಾರೆ? ಅವರು ಅರಿವೇ ಇಲ್ಲದೆ ಆಕೆ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರಬಹುದು ಅಥವಾ ಆ ಅವಕಾಶ ಹೆಚ್ಚಿವೆ' ಎಂದಿದ್ದಾರೆ. ಇದೇ ಹೇಳಿಕೆ ವೈರಲ್ ಅಗುತ್ತಿದೆ. ಅಲ್ಲದೆ 'ಪತ್ರಕರ್ತನಾಗಿ ಕೆಲಸ ಮಾಡುವಾಗ ಸ್ವತಃ ನಾನೇ ಶವ ಪರೀಕ್ಷೆ ನಡೆದ ಸ್ಥಳಕ್ಕೆ ಹೋಗಿ ನೋಡಿದ್ದೆ. ಅಲ್ಲಿ ನನಗೆ ಐದು ಸೆಕೆಂಡುಗಳಿಗಿಂತ ಹೆಚ್ಚು ಹೊತ್ತು ನಿಂತುಕೊಳ್ಳಲಾಗಲಿಲ್ಲ' ಎಂದು ಬೈಲ್ವಾನ್ ರಂಗನಾಥ್ ಹೇಳಿರುವ ಮಾತಿನ ಬಗ್ಗೆ ಚರ್ಚೆ ಶುರುವಾಗಿದೆ.
ಒಟ್ನಲ್ಲಿ ಬೈಲ್ವಾನ್ ರಂಗನಾಥ್ ಹೇಳಿಕೆ ವೈರಲ್ ಆಗುತ್ತಿದ್ದು ಚರ್ಚೆ ಹುಟ್ಟುಹಾಕಿದೆ. ಈ ವೇಳೆ ಸಿಲ್ಕ್ ಸ್ಮಿತಾ ಅಭಿಮಾನಿಗಳಿಗೆ ಈ ಹೇಳಿಕೆ ಶಾಕ್ ಕೊಟ್ಟಿದೆ. ಈ ಹಿಂದೆ ಕೂಡ ಇದೇ ರೀತಿ ಹೇಳಿಕೆ ಬಂದಿದ್ದರಿಂದ ಬೈಲ್ವಾನ್ ರಂಗನಾಥ್ ಅವರು ಚರ್ಚೆಯಲ್ಲಿ ಇದ್ದರು. ಈಗ ದುರಂತ ಅಂತ್ಯ ಕಂಡಿದ್ದ ನಟಿ ಸಿಲ್ಕ್ ಸ್ಮಿತಾ ಅವರ ವಿಚಾರ ಕೂಡ ಮತ್ತೊಮ್ಮೆ ಚರ್ಚೆಗೆ ಬಂದಿರುವುದು ದುರಂತವೇ ಸರಿ.












Click it and Unblock the Notifications