• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೆಟ್ರೋಲ್, ಡೀಸೆಲ್, ವಿಮಾನ ಇಂಧನ ಎಲ್ಲವೂ ದುಬಾರಿ!

|

ಬೆಂಗಳೂರು, ಜೂನ್ 16: ಭಾರತದಲ್ಲಿ ಸತತವಾಗಿ 10 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಜೂನ್ 7ರಿಂದ ಇಂದಿನ ತನಕ ಸುಮಾರು 6 ರು ನಷ್ಟು ಏರಿಕೆ ಕಂಡು ಬಂದಿದೆ. ನವದೆಹಲಿಯಲ್ಲಿಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 76.73 ರು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 75.19 ರು ನಷ್ಟಿದೆ.

   ರೈತರ ಪಾಲಿಗೆ ಉತ್ತಮ ಫಸಲನ್ನು ನೀಡಲಿದೆ 2020 | Oneindia Kannada

   ಮಂಗಳವಾರ (ಜೂನ್ 16) ಬೆಳಗ್ಗೆ ಮತ್ತೊಮ್ಮೆ ತೈಲ ಬೆಲೆ ಏರಿಕೆ ಮಾಡಲಾಗಿದೆ. ಪೆಟ್ರೋಲ್ ದರದಲ್ಲಿ 47 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ ದರಲ್ಲಿ 57 ಪ್ರತಿ ಲೀಟರ್ ನಂತೆ ಹೆಚ್ಚಳವಾಗಿದೆ. ಒಟ್ಟಾರೆ ಕಳೆದ 10 ದಿನಗಳಲ್ಲಿ ಪೆಟ್ರೋಲ್ ದರದಲ್ಲಿ 5.47 ರು ಹೆಚ್ಚಳವಾಗಿದ್ದರೆ, ಡೀಸೆಲ್ ದರಲ್ಲಿ 5.80 ರು ಹೆಚ್ಚಳವಾಗಿದೆ.

   ಸತತ 9ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

   ಸುಮಾರು 82 ದಿನಗಳ ಕಾಲ ಬೆಲೆ ಏರಿಕೆಗೆ ಬ್ರೇಕ್ ಹಾಕಲಾಗಿತ್ತು. ಜೂನ್ 7ರಿಂದ ಮತ್ತೆ ಏರಿಕೆ ಶುರುವಾಗಿದೆ. ಜೊತೆಗೆ ಅಬಕಾರಿ ಸುಂಕ ಹೆಚ್ಚಳ, ಆಯಾ ರಾಜ್ಯಗಳಲ್ಲಿನ ಪ್ರತ್ಯೇಕ ವ್ಯಾಟ್ ದರ ಎಲ್ಲವೂ ಸೇರಿ ತೈಲ ಬೆಲೆ ಇನ್ನಷ್ಟು ಹೆಚ್ಚಳವಾಗಿದೆ.

   ಭಾರತದ ಇಂಧನ ಮಾರುಕಟ್ಟೆಯಲ್ಲಿ ಶೇ 90ರಷ್ಟು ಪಾಲನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಹೊಂದಿವೆ ಹಾಗೂ ತೈಲ ದರ ನಿಗದಿಯನ್ನು ನಿರ್ಧರಿಸುತ್ತಾ ಬಂದಿವೆ.

   ವಿಮಾನಯಾನ ಟರ್ಬೈನ್ ಇಂಧನ(ಎಟಿಎಫ್) ದರ

   ವಿಮಾನಯಾನ ಟರ್ಬೈನ್ ಇಂಧನ(ಎಟಿಎಫ್) ದರ

   ಇದೇ ವೇಳೆ ವಿಮಾನಯಾನ ಟರ್ಬೈನ್ ಇಂಧನ(ಎಟಿಎಫ್) ದರ ಕೂಡಾ ಹೆಚ್ಚಳವಾಗಿದೆ. ಜೂನ್ 16ರಿಂದ ಮೆಟ್ರೋ ನಗರಗಳಲ್ಲಿ ದರ ಹೆಚ್ಚಳ ಜಾರಿಗೆ ಬರಲಿದೆ. ಜೂನ್ 1ರ ನಂತರ ಇದೇ ಮೊದಲ ಬಾರಿಗೆ ಎಟಿಎಫ್ ದರ ಹೆಚ್ಚಳ ಮಾಡಲಾಗುತ್ತಿದೆ. ಇದರಿಂದ ವಿಮಾನಯಾನ ಪ್ರಯಾಣ ದರ ಕೂಡಾ ಏರಿಕೆಯಾಗುವ ಸಾಧ್ಯತೆಯಿದೆ.

   * ದೆಹಲಿಯಲ್ಲಿ ಎಟಿಎಫ್ ಪ್ರತಿ ಕಿಲೋ ಲೀಟರ್ ಗೆ 39,069.87 ರು,

   * ಕೋಲ್ಕತಾದಲ್ಲಿ Rs 44,024.10/ಕಿಲೋ ಲೀಟರ್

   * ಮುಂಬೈನಲ್ಲಿ Rs 38,565.06/ಕಿಲೋ ಲೀಟರ್

   * ಚೆನ್ನೈನಲ್ಲಿRs 40,239.63/ಕಿಲೋ ಲೀಟರ್

   5 ದಿನಗಳಲ್ಲಿ ನವದೆಹಲಿ ದರ ತುಲನೆ

   5 ದಿನಗಳಲ್ಲಿ ನವದೆಹಲಿ ದರ ತುಲನೆ

   ಪೆಟ್ರೋಲ್ ದರ ರು ಗಳಲ್ಲಿ (ಏರಿಕೆ ಪ್ರಮಾಣ)

   • ಜೂನ್ 16: 76.73 ರು (47 ಪೈಸೆ ಏರಿಕೆ)
   • ಜೂನ್ 15: 76.26 ರು (48 ಪೈಸೆ)
   • ಜೂನ್ 14: 75.78 ರು (62 ಪೈಸೆ)
   • ಜೂನ್ 13: 75.16 ರು (59 ಪೈಸೆ)
   • ಜೂನ್ 12: 74.57 ರು (57 ಪೈಸೆ)

   ***

   ಡೀಸೆಲ್ ದರ ರು ಗಳಲ್ಲಿ (ಏರಿಕೆ ಪ್ರಮಾಣ)

   • ಜೂನ್ 16: 75.19 ರು (57 ಪೈಸೆ ಏರಿಕೆ)
   • ಜೂನ್ 15: 74.62 ರು (59 ಪೈಸೆ)
   • ಜೂನ್ 14: 74.03 ರು (64 ಪೈಸೆ)
   • ಜೂನ್ 13: 73.39 ರು (58 ಪೈಸೆ)
   • ಜೂನ್ 12: 72.81 ರು (59 ಪೈಸೆ)
   5 ದಿನಗಳಲ್ಲಿ ಬೆಂಗಳೂರಲ್ಲಿ ದರ ತುಲನೆ

   5 ದಿನಗಳಲ್ಲಿ ಬೆಂಗಳೂರಲ್ಲಿ ದರ ತುಲನೆ

   ಪೆಟ್ರೋಲ್ ದರ ರು ಗಳಲ್ಲಿ (ಏರಿಕೆ ಪ್ರಮಾಣ)

   • ಜೂನ್ 16: 79.22 ರು (49 ಪೈಸೆ ಏರಿಕೆ)
   • ಜೂನ್ 15: 78.73 ರು (50 ಪೈಸೆ ಏರಿಕೆ)
   • ಜೂನ್ 14: 78.23 ರು (64 ಪೈಸೆ)
   • ಜೂನ್ 13: 77.59 ರು (61 ಪೈಸೆ)
   • ಜೂನ್ 12: 76.98 ರು (59 ಪೈಸೆ)

   ***

   ಡೀಸೆಲ್ ದರ ರು ಗಳಲ್ಲಿ (ಏರಿಕೆ ಪ್ರಮಾಣ)

   • ಜೂನ್ 16: 71.49 ರು (54 ಪೈಸೆ ಏರಿಕೆ)
   • ಜೂನ್ 15: 70.95 ರು (56 ಪೈಸೆ ಏರಿಕೆ)
   • ಜೂನ್ 14: 70.39 ರು (61 ಪೈಸೆ)
   • ಜೂನ್ 13: 69.78 ರು (56 ಪೈಸೆ)
   • ಜೂನ್ 12: 69.22 ರು (56 ಪೈಸೆ)
   5 ದಿನಗಳಲ್ಲಿ ಚೆನ್ನೈನಲ್ಲಿ ದರ ತುಲನೆ

   5 ದಿನಗಳಲ್ಲಿ ಚೆನ್ನೈನಲ್ಲಿ ದರ ತುಲನೆ

   ಪೆಟ್ರೋಲ್ ದರ ರು ಗಳಲ್ಲಿ (ಏರಿಕೆ ಪ್ರಮಾಣ)

   • ಜೂನ್ 16: 80.37 ರು (41 ಪೈಸೆ ಏರಿಕೆ)
   • ಜೂನ್ 15: 79.96 ರು (43 ಪೈಸೆ ಏರಿಕೆ)
   • ಜೂನ್ 14: 79.53 ರು (54 ಪೈಸೆ)
   • ಜೂನ್ 13: 78.99 ರು (52 ಪೈಸೆ)
   • ಜೂನ್ 12: 78.47 ರು (51 ಪೈಸೆ)

   ***

   ಡೀಸೆಲ್ ದರ ರು ಗಳಲ್ಲಿ (ಏರಿಕೆ ಪ್ರಮಾಣ)

   • ಜೂನ್ 16: 73.17 ರು (48 ಪೈಸೆ ಏರಿಕೆ)
   • ಜೂನ್ 15: 74.62 ರು (59 ಪೈಸೆ)
   • ಜೂನ್ 14: 74.03 ರು (64 ಪೈಸೆ)
   • ಜೂನ್ 13: 73.39 ರು (58 ಪೈಸೆ)
   • ಜೂನ್ 12: 72.81 ರು (59 ಪೈಸೆ)

   English summary
   Petrol, diesel price hiked for 10th day. Petrol and diesel prices at Rs 76.73/litre (increase by Re 0.47) and Rs 75.19/litre (increase by Re 0.57), respectively in Delhi today(June 16).
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X