ಪೆಟ್ರೋಲ್ & ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆ?
ವಾಹನ ಸವಾರರೇ ಗಮನಿಸಿ, ಪೆಟ್ರೋಲ್ & ಡೀಸೆಲ್ ಬೆಲೆಯಲ್ಲೀಗ ಭರ್ಜರಿ ಏರಿಕೆ ಆಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಪೆಟ್ರೋಲ್ & ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆ ಆಗಿದೆ ಅಂತಾ ವಾಹನ ಸವಾರರು ಪರದಾಡುತ್ತಿದ್ದಾರೆ. ಅಲ್ಲದೆ ಇದರ ಪರಿಣಾಮ ಜೀವನ ನಡೆಸುವುದು ಕೂಡ ಕಷ್ಟವಾಗುತ್ತಿದೆ ಎಂಬ ಆಕ್ರೋಶ ಕೂಡ ಮೊಳಗುತ್ತಿದೆ. ಹೀಗಿದ್ದಾಗಲೇ ಮತ್ತೊಂದು ಸ್ಫೋಟಕ ಹಾಗೂ ಆಘಾತಕಾರಿ ಸುದ್ದಿ ಹೊರ ಬಿದ್ದಂತಾಗಿದೆ!
ಹೌದು ಕರ್ನಾಟಕವೂ ಸೇರಿದಂತೆ ಇಡೀ ಭಾರತದಲ್ಲಿ ಇದೀಗ ಪೆಟ್ರೋಲ್ & ಡೀಸೆಲ್ ರೇಟ್ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ. ಯಾಕೆ ಅಂದ್ರೆ ಇಸ್ರೇಲ್ ಮತ್ತು ಇರಾನ್ ನಡುವೆ ಭೀಕರ ಯುದ್ಧ ಶುರುವಾಗಿದ್ದು, ಒಬ್ಬರ ಮೇಲೆ ಮತ್ತೊಬ್ಬರು ದಾಳಿ ಮಾಡ್ತಿದ್ದಾರೆ. ಹೀಗೆ ಯುದ್ಧ ಶುರುವಾದ ಪರಿಣಾಮ ಪರಿಸ್ಥಿತಿ ಕೈಮೀರಿ ಹೋಗಿದೆ. ಅರಬ್ ರಾಷ್ಟ್ರಗಳಲ್ಲಿ ಸೇರಿದಂತೆ ಪೆಟ್ರೋಲ್ & ಡೀಸೆಲ್ ಉತ್ಪಾದನೆ ಮಾಡುವ ಕೊಲ್ಲಿ ರಾಷ್ಟ್ರಗಳಲ್ಲಿ ಪರಿಸ್ಥಿತಿಯು ಕೈಮೀರಿ ಹೋಗಿದೆ. ಈ ಮೂಲಕ ಭಾರತದಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿ, ಪೆಟ್ರೋಲ್ & ಡೀಸೆಲ್ ಬೆಲೆ ಕೈಸುಡುವ ಸಾಧ್ಯತೆ ದಟ್ಟವಾಗಿದೆ.

ಪೆಟ್ರೋಲ್ ಬೆಲೆ ಎಷ್ಟು ಏರಬಹುದು?
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಇದೀಗ 99.84 ರೂಪಾಯಿ ಇದ್ದರೆ, ಡೀಸೆಲ್ ಬೆಲೆ 85.93 ರೂಪಾಯಿ ಇದೆ. ಹೈದರಾಬಾದ್ ನಗರದಲ್ಲಿ ಅತಿಹೆಚ್ಚು ಅಂದ್ರೆ ಪೆಟ್ರೋಲ್ ಬೆಲೆ ಇದೀಗ 107.41 ರೂಪಾಯಿ ಇದ್ದರೆ, ಹೈದರಾಬಾದ್ ನಗರದಲ್ಲಿ ಡೀಸೆಲ್ ಬೆಲೆ 95.65 ರೂಪಾಯಿ ಆಗಿದೆ. ಅಕಸ್ಮಾತ್ ಯುದ್ಧ ಘೋರವಾಗಿ ಹೋದರೆ ಪೆಟ್ರೋಲ್ & ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆ ಕಾಣಬಹುದು ಎನ್ನಲಾಗಿದೆ. ಅದ್ರಲ್ಲೂ ಕಚ್ಚಾ ತೈಲದ ಬೆಲೆಯಲ್ಲಿ ಹತ್ತಾರು ಡಾಲರ್ ಪ್ರತಿ ಬ್ಯಾರಲ್ ಲೆಕ್ಕದಲ್ಲಿ ಏರಿಕೆ ಕಾಣಬಹುದು ಎನ್ನಲಾಗಿದೆ. ಹೀಗೆ ಆಗಿದ್ದೇ ಆದರೆ ಅದು ಮುಂದೆ ಪೆಟ್ರೋಲ್ & ಡೀಸೆಲ್ ಬೆಲೆ ಏರಿಕೆಗೆ ಕಾರಣ ಆಗಬಹುದು ಎಂಬ ಭಯ ಕಾಡುತ್ತಿದೆ.
ಸೇನಾಧಿಕಾರಿ ಕೊಲೆಗೆ ರಿವೇಂಜ್ ಶುರು?
ಡಮಾಸ್ಕಸ್‌ನ ಇರಾನ್ ರಾಯಭಾರ ಕಚೇರಿಯ ಮೇಲೆ ಏಪ್ರಿಲ್ 1ಕ್ಕೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್ ಅಟ್ಟಹಾಸ ಮೆರೆದಿದೆ ಎಂದು ಇರಾನ್ ಆರೋಪಿಸಿತ್ತು. ಡಮಾಸ್ಕಸ್ ಮೇಲೆ ಇಸ್ರೇಲ್‌ನ ದಾಳಿಯ ವೇಳೆ ಸೇನಾಧಿಕಾರಿಗಳು ಸೇರಿ ಹಲವು ಇರಾನ್ ಅಧಿಕಾರಿಗಳು ಜೀವ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಡಮಾಸ್ಕಸ್ ದಾಳಿಗೆ ನೇರವಾಗಿ ಪ್ರತಿಕ್ರಿಯೆ ನೀಡಲು ಇರಾನ್ ಸಿದ್ಧತೆ ಆರಂಭಿಸಿದೆ ಎಂಬ ಮಾಹಿತಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ದಾಳಿ ಆರಂಭವಾಗಿದೆ.
ಹಮಾಸ್ ಉಗ್ರರ ವಿರುದ್ಧ ಯುದ್ಧವನ್ನು ನಡೆಸುತ್ತಿರುವ ಇಸ್ರೇಲ್ ಸೇನೆಗೆ ಇರಾನ್ ಕೂಡ ತಿರುಗಿ ಬಿದ್ದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರ ನಡುವೆ ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆತಂಕ ಕೂಡ ಶುರುವಾಗಿದೆ. ಅದರಲ್ಲೂ ಕರ್ನಾಟಕದಲ್ಲಿ & ಭಾಗಶಃ ಭಾರತದಲ್ಲಿ ಪೆಟ್ರೋಲ್ & ಡೀಸೆಲ್ ಬೆಲೆ ಏರಿಕೆ ಕಾಣುವ ಭಯ ಕಾಡುತ್ತಿದೆ.
ಅಮೆರಿಕ ವಾರ್ನಿಂಗ್ ಹೇಗಿತ್ತು?
ನಿನ್ನೆ ಖುದ್ದು ಅಮೆರಿಕ ಅಧ್ಯಕ್ಷರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಇದು ಸೂಕ್ಷ್ಮ ವಾತಾವರಣ ಸೃಷ್ಟಿ ಮಾಡಿದ್ದು ಇಸ್ರೇಲ್ ಮೇಲೆ ಇರಾನ್ ಬೇಗನೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದಿದ್ದರು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ದಾಳಿ ಆರಂಭವಾಗಿ, ಇಡೀ ಇಸ್ರೇಲ್ ನಲುಗಿ ಹೋಗಿದೆ. ಇರಾನ್‌ಗೆ ಯುದ್ಧಕ್ಕೆ ಮುಂದಾಗಬೇಡಿ ಎಂಬ ಎಚ್ಚರಿಕೆಯ ಸಂದೇಶ ನೀಡಿದ್ದರೂ ಈಗ ಇರಾನ್ ದಾಳಿ ಆರಂಭಿಸಿದ್ದು, 3ನೇ ಮಹಾಯುದ್ಧದ ಭೀತಿಯನ್ನ ಹುಟ್ಟುಹಾಕಿದೆ. ಹಾಗೇ ಭಾರತದಲ್ಲಿ ಪೆಟ್ರೋಲ್ & ಡೀಸೆಲ್ ಬೆಲೆ ಏರಿಕೆ ಆಗಬಹುದೆಂಬ ಆತಂಕ ಕಾಡುತ್ತಿದೆ.












Click it and Unblock the Notifications