ರೂ 2,000 ನೋಟುಗಳೊಂದಿಗೆ ಬ್ಯಾಂಕ್ ಸರದಿಯಲ್ಲಿ ನಿಂತಿದ್ದಾರೆ ಮನೆ ಕೆಲಸದವರು, ಪೆಟ್ರೋಲ್ ಬಂಕ್ ಸಿಬ್ಬಂದಿ
ಚಂಡೀಗಢ, ಜೂನ್. 02: 2,000 ರೂಪಾಯಿ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಾಪಸ್ ಪಡೆಯುವ ನಿರ್ಧಾರ ಮಾಡಿದ ನಂತರ ಹಣವನ್ನು ಬ್ಯಾಮಕ್‌ನಲ್ಲಿ ಠೇವಣಿ ಮಾಡಲು ಮತ್ತು ನೋಟು ಬದಲಾಯಿಸಲು ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಹೆಚ್ಚಿನ ಬ್ಯಾಂಕ್‌ಗಳ ಮುಂದೆ ನೋಟು ಬದಲಾಯಿಸಲು ಸಾಲಿನಲ್ಲಿ ನಿಂತವರು ಮಾತ್ರ ಬಡಜನರು.
2,000 ರೂಪಾಯಿ ನೋಟುಗಳನ್ನು ಠೇವಣಿ ಮಾಡಲು ಬಯಸುವ ಉದ್ಯೋಗದಾತರು, ಅಂಗಡಿಯವರು ಅಥವಾ ಅವರ ಸಿಬ್ಬಂದಿ ಕಳುಹಿಸುತ್ತಿದ್ದಾರೆ. ಇದರ ಜೊತೆಗೆ ಅರಿ ಹೆಚ್ಚಾಗಿ ಪೆಟ್ರೋಲ್ ಪಂಪ್ ಸಿಬ್ಬಂದಿ 2,000 ರೂಪಾಯಿಗಳ ನೋಟುಗಳನ್ನು ಬದಲಾಯಿಸಲು ಅಥವಾ ಠೇವಣಿ ಮಾಡಲು ಚಂಡೀಗಢದ ಬ್ಯಾಂಕ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ 2,000 ರೂ ನೋಟನ್ನು ಚಲಾವಣೆಯಿಂದ ಹಿಂಪಡೆದಿದೆ. ಆದರೂ ಇದು ಕಾನೂನುಬದ್ಧವಾಗಿ ಉಳಿದಿದೆ. 2,000 ರೂಪಾಯಿ ನೋಟುಗಳನ್ನು ಹೊಂದಿರುವವರು ಸೆಪ್ಟೆಂಬರ್ 30 ರವರೆಗೆ ಬ್ಯಾಂಕ್‌ಗಳಲ್ಲಿ (ದಿನಕ್ಕೆ 10 ನೋಟುಗಳವರೆಗೆ) ಠೇವಣಿ ಮಾಡಬಹುದು ಅಥವಾ ಬದಲಾಯಿಸಬಹುದು. ನೋಟುಗಳನ್ನು ಠೇವಣಿ ಮಾಡಲಿ ಇಂತಿಷ್ಟೇ ಹಣ ಎಂಬ ನಿಯಮವಿಲ್ಲ.
ಮನೆ ಕೆಲಸ ಮಾಡುವ 18 ವರ್ಷದ ಮೋಹಿತ್ ಕುಮಾರ್, ಕಳೆದ ಮೂರು ದಿನಗಳಿಂದ ಮಣಿಮಜ್ರಾದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಗೆ ತನ್ನ ಉದ್ಯೋಗದಾತರ 2,000 ರೂ.ಗಳ 20 ನೋಟುಗಳನ್ನು ಬದಲಾಯಿಸಲು ಭೇಟಿ ನೀಡುತ್ತಿದ್ದಾರೆ. ಆದರೆ, ಬ್ಯಾಂಕ್‌ನಲ್ಲಿ ವಿಪರೀತ ಜನರಿರುವ ಕಾರಣ ನೋಟುಗಳನ್ನು ಬದಲಾಯಿಸಲು ಅವರಿಗೆ ಸಾಧ್ಯವಾಗಿಲ್ಲ.
ಪಂಚಕುಲದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಸರದಿ ಸಾಲಿನಲ್ಲಿ ನಿಂತಿರುವ, ಮನೆಕೆಲಸಗಾರ್ತಿಯೂ ಆಗಿರುವ ರೇಷ್ಮಾ ಸುಹಾ, "ಕಳೆದ ಒಂದು ಗಂಟೆಯಿಂದ ಸರದಿ ಸಾಲಿನಲ್ಲಿ ನಿಂತಿದ್ದೇನೆ. ಸದ್ಯಕ್ಕೆ ನನ್ನ ಸರದಿ ಬರುವ ಹಾಗೆ ಕಾಣುತ್ತಿಲ್ಲ. ನಾನು ಕೆಲಸದಿಂದ ಮೂರು ಬಾರಿ ರಜೆ ತೆಗೆದುಕೊಂಡಿದ್ದೇನೆ. ಇದು ನನ್ನ ಸಂಬಳ ಕಡಿತಕ್ಕೆ ಕಾರಣವಾಗುತ್ತದೆ. ನಾನು ಮತ್ತೆ ಮತ್ತೆ ಕೆಲಸದಿಂದ ರಜೆ ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಪಂಚಕುಲ ಸೆಕ್ಟರ್ 8 ರಲ್ಲಿ ಆಪ್ಟಿಕಲ್ ಶಾಪ್ ನಡೆಸುತ್ತಿರುವ ಕರುಣೇಶ್ ಚೋಪ್ರಾ ಹೇಳುವಂತೆ, " ಇದು ನನಗೆ ಹಲವು ವಾರದ ದಿನಚರಿಯಾಗಿದೆ. ನೋಟುಗಳನ್ನು ನಿರಾಕರಿಸಲಾಗದ ಕಾರಣ ಅಂಗಡಿಯವರಾದ ನಾವು ಪ್ರತಿದಿನ 2000 ರೂಪಾಯಿ ನೋಟುಗಳನ್ನು ಪಡೆಯುತ್ತಲೇ ಇರುತ್ತೇವೆ. ಸರ್ಕಾರಿ ಬ್ಯಾಂಕ್‌ಗಳ ಹೊರಗೆ ಪ್ರತಿದಿನ ದೊಡ್ಡ ಸರತಿ ಸಾಲು ಇರುವುದರಿಂದ ನೋಟು ವಿನಿಮಯ ಮಾಡಿಕೊಳ್ಳಲು ನಮಗೆ ಕಷ್ಟವಾಗುತ್ತಿದೆ. ನಾವು ಖಾಸಗಿ ಬ್ಯಾಂಕ್‌ಗಳನ್ನು ಸಂಪರ್ಕಿಸಿದಾಗ, ಅವರು ವಿವಿಧ ನಮೂನೆಗಳಲ್ಲಿ ಗುರುತಿನ ದಾಖಲೆಗಳು ಮತ್ತು ಸಹಿಗಳನ್ನು ಕೇಳುತ್ತಾರೆ" ಎಂದು ತಿಳಿಸಿದ್ದಾರೆ.
ಪಂಚಕುಲ ಸೆಕ್ಟರ್ 20 ರ ಎಸ್‌ಬಿಐ ಶಾಖೆಯ ವ್ಯವಸ್ಥಾಪಕರ ಪ್ರಕಾರ, "ರಾಷ್ಟ್ರೀಯ ಬ್ಯಾಂಕುಗಳು ಮೊಹಾಲಿಯಲ್ಲಿರುವ ಸರ್ಕಾರಿ ಚೆಸ್ಟ್‌ನಿಂದ ಬಿಡುಗಡೆ ಮಾಡಲಾದ ನಿಧಿಯ ಕೋಟಾದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಚಿಕ್ಕ ನೋಟುಗಳ ಪ್ರಸ್ತುತ ರವಾನೆಯು ಸರಿಸುಮಾರು 30 ಲಕ್ಷದಿಂದ 40 ಲಕ್ಷದವರೆಗೆ ಇರುತ್ತದೆ. ಇದು ಪ್ರತಿದಿನ ಖಾಲಿಯಾಗುತ್ತದೆ" ಎಂದಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಪಂಚಕುಲ ಶಾಖೆಯ ಕ್ಯಾಷಿಯರ್, "80 ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನು ವಾರಾಂತ್ಯದಲ್ಲಿ ಬದಲಾಯಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ. ಯೆಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐನಂತಹ ಖಾಸಗಿ ಬ್ಯಾಂಕ್‌ಗಳ ಅಧಿಕಾರಿಗಳು ಪ್ರತಿದಿನ 200 ರಿಂದ 300 ಜನರು 2000 ರೂಪಾಯಿ ನೋಟುಗಳನ್ನು ಬದಲಾಯಿಸಲು ಅಥವಾ ಠೇವಣಿ ಮಾಡಲು ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
(ಕೃಪೆ- ದಿ ಇಂಡಿಯನ್ ಎಕ್ಸ್‌ಪ್ರೆಸ್)
-
ಪೆಟ್ರೋಲ್ ಪ್ರತಿ ಲೀಟರ್ಗೆ 18 ರೂ, ಡೀಸೆಲ್ 35 ರೂಪಾಯಿ ದರ ಹೆಚ್ಚಳ ಸಾಧ್ಯತೆ: ಭಾರತೀಯರಲ್ಲಿ ಗಾಬರಿ ಹುಟ್ಟಿಸಿದೆ ಈ ಲೆಕ್ಕಾಚಾರ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications