Petrol Price: ಚುನಾವಣೆ ಹೊತ್ತಲ್ಲೇ ದೇಶದ ಜನತೆಗೆ ಗುಡ್‌ನ್ಯೂಸ್ ಕೊಟ್ಟ ಕೇಂದ್ರ; ಪೆಟ್ರೋಲ್, ಡೀಸೆಲ್ ಬೆಳೆ ಇಳಿಕೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ₹ 2 ರಷ್ಟು ಕಡಿಮೆ ಮಾಡಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ. ದೇಶಾದ್ಯಂತ ಈ ಬೆಲೆ ಇಳಿಕೆ ಅನ್ವಯವಾಗಲಿದೆ.

ಲೋಕಸಭೆ ಚುನಾವಣೆಗೆ ಕೆಲವು ವಾರಗಳ ಮೊದಲು ಕೇಂದ್ರ ಸರ್ಕಾರ ಈ ಮಹತ್ವದ ಘೋಷಣೆ ಮಾಡಿದೆ. ಪರಿಷ್ಕೃತ ಬೆಲೆಯು ಮಾರ್ಚ್ 15, ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದೆ ಎಂದು ಸಚಿವರು ಹೇಳಿದ್ದಾರೆ.

Petrol and Diesel Prices Slashed by 2 Nationwide Declares Oil Minister

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ₹ 2 ಇಳಿಸುವ ಮೂಲಕ ದೇಶದ ಪ್ರತಿಷ್ಠಿತ ಪ್ರಧಾನಿ ಮೋದಿ ಅವರು ಕೋಟ್ಯಂತರ ಭಾರತೀಯರ ಕುಟುಂಬದ ಕಲ್ಯಾಣ ತಮ್ಮ ಗುರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ, ಎಂದು ಸಚಿವರು ಹೇಳಿದರು.

ಸಚಿವರು ಹೇಳಿದ್ದೇನು?

"ಮಾರ್ಚ್ 14, 2024 ರಂದು, ರೂಪಾಯಿ ಲೆಕ್ಕದಲ್ಲಿ, ಭಾರತದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ಸರಾಸರಿ ₹ 94 ಇದ್ದರೆ ಇಟಲಿಯಲ್ಲಿ ₹ 168.01- ಅಂದರೆ 79% ಹೆಚ್ಚು; ಫ್ರಾನ್ಸ್‌ನಲ್ಲಿ ₹ 166.87 ಅಂದರೆ 78% ಹೆಚ್ಚು; ಜರ್ಮನಿಯಲ್ಲಿ ₹ 159.57 ಅಂದರೆ 70% ಹೆಚ್ಚು ಸ್ಪೇನ್‌ನಲ್ಲಿ ₹ 145.13 ಅಂದರೆ 54% ಹೆಚ್ಚು" ಎಂದು ಅವರು ಸಮರ್ಥನೆ ನೀಡಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಕಡಿತವು ಗ್ರಾಹಕರ ವೆಚ್ಚವನ್ನು ಕಡಿಮೆ ಮಾಡುತ್ತದೆ. ಡೀಸೆಲ್‌ನಲ್ಲಿ ಚಲಿಸುವ 58 ಲಕ್ಷ ಭಾರೀ ಸರಕುಗಳ ವಾಹನಗಳು, 6 ಕೋಟಿ ಕಾರುಗಳು ಮತ್ತು 27 ಕೋಟಿ ದ್ವಿಚಕ್ರ ವಾಹನಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+