ಬಜರಂಗದಳ ವಿವಾದದ ಕಿಚ್ಚು: ಕಾಂಗ್ರೆಸ್‌ಗೆ ಪ್ಲಸ್ OR ಮೈನಸ್?
ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಆಗುತ್ತಿದ್ದಂತೆ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಬಜರಂಗದಳ ಸಂಘಟನೆ ನಿಷೇಧ ಮಾಡುವ ವಿಚಾರವನ್ನ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದಂತೆ ಕೇಸರಿ ಪಡೆ ಅಲರ್ಟ್ ಆಗಿದೆ. ಕಾಂಗ್ರೆಸ್ ವಿರುದ್ಧ ಸಿಕ್ಕಿರುವ ಈ ಅಸ್ತ್ರವನ್ನು ಮತವಾಗಿ ಪರಿವರ್ತಿಸಲು ಬಿಜೆಪಿ ವರಿಷ್ಠರು ಪಕ್ಕಾ ಪ್ಲ್ಯಾನ್ ಮಾಡಿ ಅಖಾಡಕ್ಕೆ ಇಳಿದಂತೆ ಕಾಣುತ್ತಿದ್ದು, ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಆಗಿರುವ ಬಜರಂಗದಳ ನಿಷೇಧ ವಿಚಾರ ಬಿಜೆಪಿಗೆ ವರವಾಗುವ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ಇಂತಹ ಪರಿಸ್ಥಿತಿಯನ್ನ ರಣತಂತ್ರ ರೂಪಿಸಿ ಅಖಾಡದಲ್ಲಿ ಸಂಚಲನ ಸೃಷ್ಟಿಸಲು ಸಜ್ಜಾಗಿ ನಿಂತಿದೆ ಬಿಜೆಪಿ ಪಡೆ. ಈಗಾಗಲೇ ಬಿಜೆಪಿ ನಾಯಕರ ಪ್ರೊಫೈಲ್ ಫೋಟೋ, ವಾಟ್ಸಾಪ್, ಫೇಸ್‌ಬುಕ್ ಸ್ಟೇಟಸ್‌ಗಳಲ್ಲಿ 'ನಾನೊಬ್ಬ ಭಜರಂಗಿ' ಘೋಷಣೆ ಹೊರಡುತ್ತಿದೆ. ಹಾಗಾದ್ರೆ ನಿಜವಾಗಿಯೂ ಬಿಜೆಪಿಗೆ ಈ ವಿಚಾರ ಪ್ಲಸ್ ಪಾಯಿಂಟ್ ಆಗುತ್ತಾ? ಮತಗಳು ಕಾಂಗ್ರೆಸ್ ವಿರುದ್ಧ ತಿರುಗಿ ಬಿಜೆಪಿ ಬುಟ್ಟಿಗೆ ಬೀಳುತ್ತವಾ? ತಿಳಿಯೋಣ ಬನ್ನಿ.

ಅಖಾಡಕ್ಕೆ ಪ್ರಧಾನಿ ಮೋದಿ ಎಂಟ್ರಿ!
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ವಿಚಾರ ಪ್ರಸ್ತಾಪ ಆಗುತ್ತಿದ್ಧಂತೆ ಬಿಜೆಪಿ ವರಿಷ್ಠರು ತೀವ್ರ ವಾಗ್ದಾಳಿ ಶುರು ಮಾಡಿದರು. ಪ್ರಧಾನಿ ಮೋದಿ ಕೂಡ ಇದೇ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. 'ಕಾಂಗ್ರೆಸ್ ಹಿಂದೆ ಶ್ರೀರಾಮಚಂದ್ರನ ಬಂಧಿಸಿಟ್ಟಿತು. ಈಗ ಹುನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ' ಎಂದು ವಿಜಯನಗರದಲ್ಲಿ ಆರೋಪ ಕೂಡ ಮಾಡಿದರು. ಆದರೆ ಇಲ್ಲಿ ಉದ್ಭವಿಸಿರುವ ಪ್ರಶ್ನೆ ಚುನಾವಣೆ ಮೇಲೆ ಇದು ಯಾವ ರೀತಿ ಎಫೆಕ್ಟ್ ಬೀರಬಹುದು? ಅಂತಾ.
ಬಿಜೆಪಿ ನಾಯಕರೇ ಬಜರಂಗದಳದಿಂದ ದೂರ?
ಇಷ್ಟೆಲ್ಲಾ ಚರ್ಚೆಯ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಬೇರೆಯದ್ದೇ ಮಾತು ಕೇಳಿಬರುತ್ತಿದೆ. ಇದೀಗ ಬಿಜೆಪಿಯ ನಾಯಕರು ಬಜರಂಗದಳ ನಿಷೇಧ ವಿಚಾರವಾಗಿ ಮಾತನಾಡುತ್ತಿದ್ದಾರೆ. ಆದರೆ ಬಜರಂಗದಳ ಜೊತೆ ಬಹುತೇಕ ಬಿಜೆಪಿ ನಾಯಕರು ಯಾಕೆ ಅಂತರ ಕಾಯ್ದುಕೊಳ್ಳುತ್ತಿದ್ದರು? ಎಂಬ ವಿಷಯದ ಬಗ್ಗೆ ಚರ್ಚೆ ಶುರುವಾಗಿದೆ. ಈ ನಡುವೆ ವಿಪಕ್ಷ ನಾಯಕರು ಕೂಡ ಬಿಜೆಪಿ ವಾಗ್ದಾಳಿಗೆ ಜಾಣನಡೆ ಅನುಸರಿಸುತ್ತಾ ಪರೋಕ್ಷವಾಗಿ ಉತ್ತರ ಕೊಡುತ್ತಿದ್ದು, ಪ್ರಣಾಳಿಕೆಯ ವಿಚಾರ ಸಮರ್ಥಿಸಿಕೊಂಡಿದ್ದಾರೆ. ಈ ನಡೆ ಮತಗಳನ್ನ ಸೆಳೆಯಲು ಬಿಜೆಪಿಗೆ ಸಹಾಯ ಮಾಡಬಹುದಾ? ಮುಂದೆ ಓದಿ.
ಬಿಜೆಪಿಗೆ ಇದರಿಂದ ಪ್ಲಸ್ OR ಮೈನಸ್?
ಚುನಾವಣೆ ಸಂದರ್ಭದಲ್ಲಿ ಇಂತಹ ವಿಚಾರ ಸಿಕ್ಕಾಗ ಅದನ್ನ ತಮ್ಮ ದಾಳಕ್ಕೆ ಬಳಸಿಕೊಳ್ಳಲು ಯಾವುದೇ ಪಕ್ಷವಾದರೂ ಪ್ರಯತ್ನ ಮಾಡೇ ಮಾಡುತ್ತದೆ. ಈಗ ಬಿಜೆಪಿ ನಾಯಕರು ಕೂಡ ಅದೇ ಪ್ರಯತ್ನದಲ್ಲಿದ್ದಾರೆ ಎಂಬುದು ವಿಶ್ಲೇಷಕರ ಮಾತು. ಆದರೆ ಕಾಂಗ್ರೆಸ್ ವಿರುದ್ಧ ಈ ವಿಚಾರ ಹಿಡಿದು ಮತಗಳನ್ನು ಸೆಳೆಯಲು ಆಗುತ್ತಾ? ಎಂಬ ಪ್ರಶ್ನೆ ಕರ್ನಾಟಕದ ಮತದಾರರನ್ನ ಕೂಡ ಕಾಡುತ್ತಿದೆ. ದೊಡ್ಡ ಚರ್ಚೆಯಾಗಿ ಹೊರಹೊಮ್ಮಿರುವ ಬಜರಂಗದಳ ನಿಷೇಧದ ವಿಚಾರವನ್ನ ಕಾಂಗ್ರೆಸ್ ನಾಯಕರು ಹೇಗೆ ನಿಭಾಯಿಸುತ್ತಾರೆ? ಎಂಬುದರ ವಿವರಣೆ ಮುಂದೆ ತಿಳಿಯೋಣ.
ಕಾಂಗ್ರೆಸ್‌ಗೆ ಬೆಲೆ ಏರಿಕೆಯೇ ಅಜೆಂಡಾ!
ಬಿಜೆಪಿ ನಾಯಕರು ಬಜರಂಗದಳ ನಿಷೇಧ ವಿಚಾರ ಹಿಡಿದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೂ, ಕಾಂಗ್ರೆಸ್ ಲೀಡರ್ಸ್ ಮಾತ್ರ ಈ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿಲ್ಲ. ಈ ಮೂಲಕ ಜಾಣನಡೆ ಪ್ರಯೋಗ ಮಾಡುತ್ತಿದೆ ಕೈಪಡೆ. ಬಿಜೆಪಿ ಈ ವಿಚಾರವನ್ನು ವಿವಾದ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪದ ನಡುವೆಯೇ, ಕಾಂಗ್ರೆಸ್ ಒಂದು ದೊಡ್ಡ ಅಸ್ತ್ರವನ್ನು ಬಿಜೆಪಿ ವಿರುದ್ಧ ಸಿದ್ಧಮಾಡಿ ಇಟ್ಟುಕೊಂಡಂತೆ ಕಾಣುತ್ತಿದೆ. ಇದರ ಜೊತೆಗೆ ಬೆಲೆ ಏರಿಕೆ ಮತ್ತು ಸಾಮಾನ್ಯ ಜನರ ಸಂಕಷ್ಟಗಳನ್ನೇ ಚುನಾವಣೆಗೆ ಅಸ್ತ್ರ ಮಾಡಿಕೊಳ್ಳುತ್ತಿದೆ ಕಾಂಗ್ರೆಸ್.
ತಳಮಟ್ಟದಲ್ಲಿ ಕಾಂಗ್ರೆಸ್‌ಗೆ ಏಟು?
ಬಿಜೆಪಿ ತನ್ನ ವಿರೋಧಿ ಕಾಂಗ್ರೆಸ್ ವಿರುದ್ಧ ಬಜರಂಗದಳ ನಿಷೇಧದ ಅಸ್ತ್ರ ಹಿಡಿದು ಸದ್ದು ಮಾಡಲು ಪ್ರಯತ್ನಿಸಿದರೂ ಚುನಾವಣೆಯಲ್ಲಿ ದಿಢೀರ್ ಅದು ವರ್ಕೌಟ್ ಆಗುವುದು ಕಷ್ಟಕಷ್ಟ. ಏಕೆಂದರೆ ಚುನಾವಣೆಗೆ ಕೇವಲ 8 ದಿನಗಳು ಬಾಕಿ ಇದೆ. ಹೀಗಿದ್ದಾಗ ಕಾಂಗ್ರೆಸ್ ವಿರುದ್ಧ ಇದೇ ಅಸ್ತ್ರ ಹಿಡ್ದು ಆರೋಪ ಮಾಡಿ ಅದನ್ನ ಮತವಾಗಿ ಕನ್ವರ್ಟ್ ಮಾಡೋದು ಕಷ್ಟದ ವಿಚಾರವೇ ಸರಿ. ಆದರೆ ಕರಾವಳಿ ಭಾಗದಲ್ಲಿ ಇದರಿಂದ ಕಾಂಗ್ರೆಸ್‌ಗೆ ಹಿನ್ನಡೆ ಎದುರಾದರೂ, ಈಗಾಗಲೇ ಅಲ್ಲಿ ಬಿಜೆಪಿಯೇ ಮುಂದಿದೆ. ಕರ್ನಾಟಕದ ಇನ್ನುಳಿದ ಭಾಗಗಳಲ್ಲಿ ಈ ಬೆಳವಣಿಗೆ ಭಾರಿ ದೊಡ್ಡ ಪ್ರಭಾವ ಬೀರುವ ಸಾಧ್ಯತೆ ಕಡಿಮೆ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಜಾಹೀರಾತು ಮೂಲಕ ಕಾಂಗ್ರೆಸ್ ವರ್ಕೌಟ್
ಈಗಲೂ ಜನರ ಮನಸ್ಸಿನಲ್ಲಿ ಬೆಲೆ ಏರಿಕೆ ಆಕ್ರೋಶ ಇದೆ. ಅದರಲ್ಲೂ ಕಾಂಗ್ರೆಸ್ ಜನರ ಆಕ್ರೋವನ್ನು ಜಾಹೀರಾತು ಮೂಲಕ ಡಬಲ್ ಮಾಡುತ್ತಿದೆ. 2014ರಲ್ಲಿ ಇದ್ದ ಗ್ಯಾಸ್ ಬೆಲೆ 400, ಆದರೆ ಈಗ ಅದು 1000ದ ಗಡಿ ದಾಟಿದೆ ಎಂಬ ಅಂಕಿ-ಅಂಶವನ್ನ ಹಿಡಿದು ಜನರಿಗೆ ತೋರಿಸುತ್ತಿದೆ. ಹೀಗಾಗಿಯೇ ಜನರ ಮನಸ್ಸಲ್ಲೂ ಬೆಲೆ ಏರಿಕೆ ವಿಚಾರ ಮರೆಯಾಗುತ್ತಿಲ್ಲ. ಮತ್ತೊಂದ್ಕಡೆ ಬಿಜೆಪಿಯವರೇ ಉಚಿತ ಉಡುಗೊರೆ ಟೀಕಿಸಿ, ನಂತರ ತಾವೇ ಫ್ರೀ ಗಿಫ್ಟ್ ಕೊಟ್ಟಿದ್ದೇಕೆ ಎಂಬ ಪ್ರಶ್ನೆಯನ್ನೂ ಮುಂದಿಟ್ಟು ಚರ್ಚೆ ನಡೆಸುತ್ತಿದೆ ಕಾಂಗ್ರೆಸ್.
ಬಿಜೆಪಿ ನಾಯಕರ ಮುಂದಿನ ನಡೆ?
ಈಗ ಕಾಂಗ್ರೆಸ್ ವಿರುದ್ಧ ಸಿಕ್ಕಿರುವ ಈ ಅಸ್ತ್ರವನ್ನು ಮತ್ತಷ್ಟು ಪ್ರಬಲವಾಗಿ ಪ್ರಯೋಗ ಮಾಡಲು ರಣತಂತ್ರ ರೂಪಿಸಿ, ಚುನಾವಣಾ ಪ್ರಚಾರ ಸಭೆಗಳಲ್ಲಿ ಬಜರಂಗದಳ ನಿಷೇಧ ವಿಚಾರವನ್ನೇ ಮುಂದಿಟ್ಟು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಬಹುದು. ಇದರ ಜೊತೆಗೆ ತಾವು ಅಧಿಕಾರದಲ್ಲೇ ಉಳಿದರೆ ಬಜರಂಗದಳ ನಿಷೇಧ ಆಗಲ್ಲ ಎಂಬ ಮಾತು ಹೇಳಿ ಮತದಾರರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಬಹುದು. ಆದರೆ ಈಗ ಕಾಡುತ್ತಿರುವ ಪ್ರಶ್ನೆ, ಬಿಜೆಪಿಗೆ ಈ ಅಸ್ತ್ರ ಮತವಾಗಿ ಪರಿವರ್ತನೆ ಆಗುತ್ತಾ? ಎಂಬುದು.
ಒಟ್ನಲ್ಲಿ ರಣಕಣವಾಗಿ ಮಾರ್ಪಟ್ಟಿರುವ ಕರ್ನಾಟಕ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಒಂದೆಡೆ ಬೆಲೆ ಏರಿಕೆ ಸಂಕಷ್ಟ ಜನರನ್ನ ಕಾಡುತ್ತಿದೆ, ಮತ್ತೊಂದು ಕಡೆ ಉಚಿತ ಉಡುಗೊರೆ ಪಟ್ಟಿಗೆ ಬಿಜೆಪಿ ಕೂಡ ಸೇರ್ಪಡೆಗೊಂಡಿದೆ. ಅನಿರೀಕ್ಷಿತವಾಗಿ ಕಾಂಗ್ರೆಸ್ ಇಂದು ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ವಿಚಾರ ಪ್ರಸ್ತಾಪಿಸಿದೆ. ಇದು ಬಿಜೆಪಿಗೆ ಹೊಸ ಅಸ್ತ್ರ ನೀಡಿದಂತಾಗಿದೆ. ಆದರೆ ಇದೆಲ್ಲಾ ಗೆಲುವಿನ ಮೇಲೆ ಹೇಗೆ ಎಫೆಕ್ಟ್ ಬೀರುತ್ತೆ? ಬಿಜೆಪಿ ನಾಯಕರು ಇದೇ ಅಸ್ತ್ರ ಹಿಡಿದು ಕಾಂಗ್ರೆಸ್ ವಿರುದ್ಧ ಹೇಗೆ ದಾಳ ಉರುಳಿಸುತ್ತಾರೆ? ಕಾದು ನೋಡಬೇಕು. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಅಂದೇ ಎಲ್ಲಾ ಕನ್ಫರ್ಮ್ ಆಗಲಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications