ಈ ನಗರದಲ್ಲಿ 160 ರೂಪಾಯಿ ದಾಟಿದ ಟೊಮ್ಯಾಟೋ ಬೆಲೆ: ಇತರೆ ನಗರಗಳಲ್ಲಿ ಎಷ್ಟು ತಿಳಿಯಿರಿ

ವಿಶಾಖಪಟ್ಟಣ, ಜುಲೈ 5: ಭಾರತದಲ್ಲಿ ಟೊಮ್ಯಾಟೋ ದರ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ, ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ದರಗಳು ಇನ್ನಷ್ಟು ಹೆಚ್ಚಾಗಿದ್ದು ಗ್ರಾಹಕರ ನಿದ್ದೆಗೆಡಿಸಿದೆ. ಈ ನಡುವೆಯೇ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಟೊಮ್ಯಾಟೋ ಬೆಲೆ 160 ರೂಪಾಯಿ ದಾಟಿರುವ ಬಗ್ಗೆ ವರದಿಯಾಗಿದೆ.

ಇನ್ನೂ ಕೆಲವು ನಗರಗಳಲ್ಲಿ ಟೊಮ್ಯಾಟೋ ದರ 150 ರೂಪಾಯಿ ಸಮೀಪದಲ್ಲಿದೆ. ಇನ್ನು 15 ದಿನಗಳಲ್ಲಿ ಟೊಮ್ಯಾಟೋ ಬೆಲೆ ಕಡಿಮೆಯಾಗುವುದಾಗಿ ಕೇಂದ್ರ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಟೊಮ್ಯಾಟೋ ಮಾತ್ರವಲ್ಲದೆ ಇತರೆ ತರಕಾರಿಗಳ ಬೆಲೆ ಕೂಡ ಗಗನಕ್ಕೇರಿದ್ದು, ಜನರಿಗೆ ಹೆಚ್ಚಿನ ಹೊರೆಯಾಗಿದೆ.

 Soaring Tomato Prices Hit ₹160/kg in Vizag Outpacing Even Petrol Costs; Price in Different Cities

''ತರಕಾರಿಗಳ ಬೆಲೆ ಸಾಕಷ್ಟು ಹೆಚ್ಚಾಗಿದೆ. ಟೊಮೆಟೊ ಕೆಜಿಗೆ ₹150ರಂತೆ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ತರಕಾರಿ ಬೆಲೆಯನ್ನು ನಿಯಂತ್ರಿಸಬೇಕು ಎಂದು" ಹಲವು ಗ್ರಾಹಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪೆಟ್ರೋಲ್‌ಗಿಂತ ಟೊಮ್ಯಾಟೋ ದುಬಾರಿ

ದೇಶಾದ್ಯಂತ ಟೊಮ್ಯಾಟೋ ದರ ಹೆಚ್ಚಾಗಿದೆ. ಈಟ ಪೆಟ್ರೋಲ್‌ಗಿಂತ ಟೊಮೆಟೋ ಬೆಲೆ ಹೆಚ್ಚಾಗಿದೆ. ತರಕಾರಿ, ಬೇಳೆ ಕಾಳುಗಳ ಬೆಲೆ ಏರಿಕೆಯಿಂದ ಸಾರ್ವಜನಿಕರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಹೀಗಾದ್ರೆ ಹೇಗಪ್ಪಾ ಜೀವನ ಎಂದುಕೊಂಡೇ ಹಲವರು ತರಕಾರಿ ಖರೀದಿ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

 Soaring Tomato Prices Hit ₹160/kg in Vizag Outpacing Even Petrol Costs; Price in Different Cities

ವಿವಿಧ ನಗರಗಳಲ್ಲಿ ಟೊಮ್ಯಾಟೋ ಬೆಲೆ

ನಗರ ಟೊಮ್ಯಾಟೋ ದರ (ಪ್ರತಿ ಕೆಜಿ)
ಬೆಂಗಳೂರು 100
ಸಿಲಿಗುರಿ 155
ಮೊರಾದಾಬಾದ್ (ಉತ್ತರ ಪ್ರದೇಶ) 150
ದೆಹಲಿ 140
ಕೋಲ್ಕತ್ತಾ 148
ಲಕ್ನೋ 140

ಬೆಲೆ ನಿಯಂತ್ರಣಕ್ಕೆ ಮುಂದಾದ ಪಶ್ಚಿಮ ಬಂಗಾಳ

ಟೊಮ್ಯಾಟೋ ಬೆಲೆ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿರುವ ಕಾರಣ ಪಶ್ಚಿಮ ಬಂಗಾಳ ಸರ್ಕಾರ ದರ ನಿಯಂತ್ರಣಕ್ಕೆ ಮುಂದಾಗಿದೆ. ನಗರದಲ್ಲಿ ನ್ಯಾಯೋಚಿತ ಬೆಲೆಯ ತರಕಾರಿಗಳನ್ನು ತಲುಪಿಸಲು ಸರ್ಕಾರವು ತನ್ನ ಚಿಲ್ಲರೆ ಜಾಲವಾದ ಸುಫಲ್ ಬಾಂಗ್ಲಾಗೆ ನಿರ್ದೇಶಿಸಿದೆ ಎಂದು ಪಿಟಿಐ ವರದಿ ಮಾಡಿದೆ. ವರದಿಯ ಪ್ರಕಾರ ಸುಫಲ್ ಬಾಂಗ್ಲಾದಲ್ಲಿ ಪ್ರತಿ ಕೆ.ಜಿ. ಟೊಮ್ಯಾಟೊವನ್ನು 115 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ.

ತಮಿಳುನಾಡಿನಲ್ಲಿ ದರ ನಿಯಂತ್ರಣ

ತಮಿಳುನಾಡಿನಲ್ಲಿ ಟೊಮ್ಯಾಟೋ ಬೆಲೆ ಹೆಚ್ಚಾದ ಕಾರಣ ಎಂಕೆ ಸ್ಟಾಲಿನ್ ಸರ್ಕಾರ ನ್ಯಾಯಬೆಲೆ ಅಂಗಡಿಗಳ ಮೂಲಕ ಮಾರಾಟ ಮಾಡುತ್ತಿದೆ. ಚೆನ್ನೈನ 82 ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ಕೆ.ಜಿ. ಟೊಮ್ಯಾಟೊವನ್ನು 60 ರೂಪಾಯಿಗಳಂತೆ ಮಾರಾಟ ಮಾಡುತ್ತಿದೆ. ಗತ್ಯವಿದ್ದರೆ ರಾಜ್ಯದ ಇತರ ಭಾಗಗಳಿಗೂ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸಹಕಾರಿ ಸಚಿವ ಕೆಆರ್ ಪೆರಿಯಕರುಪ್ಪನ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+