ಬೆಂಗಳೂರಿನ ಕಾಟನ್ ಪೇಟೆಯಲ್ಲಿ ಕಳ್ಳರ ಕೈಚಳಕ: ನೋಡ ನೋಡುತ್ತಿದ್ದಂತೆ ಪೆಟ್ರೋಲ್ ಗಾಯಬ್!
ಬೆಂಗಳೂರಿನ ಕಾಟನ್ ಪೇಟೆಯಲ್ಲಿ ಕಳ್ಳರ ಪೆಟ್ರೋಲ್ ಕಳ್ಳತನದ ಹಾವಳಿ ಶುರುವಾಗಿದೆ.
ಬೆಂಗಳೂರು ಫೆಬ್ರವರಿ 27: ಸಿಲಿಕಾನ್ ಸಿಟಿ ಬೆಂಗಳೂರಿಯಲ್ಲಿ ರಾತ್ರಿಯಾದರೆ ಸಾಕು ಪೆಟ್ರೋಲ್ ಕಳ್ಳತನಕ್ಕೆ ಕದೀಮರು ಕೈಹಾಕುತ್ತಿದ್ದಾರೆ. ಮನೆ ಮುಂದೆ ನಿಲ್ಲಿಸಿರುವ ಬೈಕ್‌ಗಳಲ್ಲಿನ ಪೆಟ್ರೋಲ್ ಕಳ್ಳತನದ ಹಾವಳಿ ಶುರುವಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ಕಾಟನ್ ಪೇಟೆಯ ಮೊದಲನೇ ಅಡ್ಡರಸ್ತೆಯಲ್ಲಿ ಮನೆ ಮುಂದೆ ನಿಲ್ಲಿಸಿದ ಮಹಾನಗರಗಳಲ್ಲಿ ಪೆಟ್ರೋಲ್ ಕಳವು ಮಾಡಿರುವ ಘಟನೆ ನಡೆದಿದೆ.
ನಾಲ್ಕೈದು ಖಾಲಿ ಬಾಟಲ್‌ಗಳನ್ನು ತೆರೆದುಕೊಂಡು ಬಂದು ಪೆಟ್ರೋಲ್ ಕಳ್ಳತನ ನಡೆಸಲಾಗಿದೆ. ಇದೇ ವೇಳೆ ಸ್ಥಳೀಯನೊಬ್ಬ ಹಿಡಿಯಲು ಹೋದಾಗ ಕಳ್ಳರು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಖಾಕಿ ತಂಡ ಬಲೆ ಬೀಸಿದೆ.

ಬೇಬಿ ಟ್ಯಾಂಕ್ ಪೆಟ್ರೋಲ್ ಕದಿಯುವ ಮಾಫಿಯಾ:
ಟ್ಯಾಂಕರ್ ಒಳಗೆ ರಹಸ್ಯವಾಗಿ ಮಿನಿ ಟ್ಯಾಂಕ್ ಬಚ್ಚಿಟ್ಟು ಪೆಟ್ರೋಲ್ ಮತ್ತು ಡೀಸೆಲ್ ಕದಿಯುವ 'ಬೇಬಿ ಟ್ಯಾಂಕ್ ಪೆಟ್ರೋಲ್ ಕದಿಯುವ ಮಾಫಿಯಾ' ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಕರಾಳ ದಂಧೆ ಪೆಟ್ರೋಲ್ ಬಂಕ್ ಮಾಲೀಕರನ್ನೇ ಬೆಚ್ಚಿ ಬೀಳಿಸಿದೆ. ಹಲವು ವರ್ಷಗಳಿಂದ ಬಂಕ್ ಮಾಲೀಕರು ಮೋಸ ಹೋಗಿರುವ ಅನುಮಾನ ವ್ಯಕ್ತವಾಗಿದೆ.
ದೇವನಗುಂದಿ ಸಮೀಪ ಇರುವ ಟರ್ಮಿನಲ್‌ಗೆ ಹೋಗುವ ಪೆಟ್ರೋಲ್, ಡೀಸೆಲ್ ಸರಬರಾಜು ಮಾಡುವ 1200 ಟ್ಯಾಂಕರ್‌ಗಳಲ್ಲಿ ಶೇ. 80 ರಷ್ಟು ಟ್ಯಾಂಕರ್‌ಗಳು ಈ ದಂಧೆ ಮಾಡುತ್ತಿವೆ ಎಂಬ ಗಂಭೀರ ಆರೋಪ ಕೇಳಿ ಈ ಹಿಂದೆ ಕೇಳಿಬಂದಿತ್ತು.

ಕರಾಳ ದಂಧೆ ಟ್ಯಾಂಕರ್ ವಿರುದ್ಧ ಕ್ರಿಮಿನಲ್ ಕೇಸು:
ಈ ಬೇಬಿ ಟ್ಯಾಂಕ್ ಫಿಟ್ ಮಾಡಿ ಇಂಧನ ಕದಿಯವ ಟ್ಯಾಂಕರ್ ಮಾಲೀಕರ ವಿರುದ್ಧ ಅಳತೆ ಮತ್ತು ಮಾಪನ ಶಾಸ್ತ್ರ ಇಲಾಖೆ ಹೊಸಕೋಟೆ ತಾಲೂಕಿನ ಅನುಗೊಂಡಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಿಸಿದೆ. ಕೇಸ್ ಸಂ. 03/2022 ಪ್ರಕರಣ ದಾಖಲಾಗಿದ್ದು, ಕಾನೂನು ಮಾಪನ ಶಾಸ್ತ್ರ ಇಲಾಖೆಯ ತನಿಖಾ ದಳದ ಅಧಿಕಾರಿ ಮಹಮ್ಮದ್ ಆಸಿಫ್ ದೂರು ನೀಡಲಾಗಿದೆ.












Click it and Unblock the Notifications