ಚಿನ್ನದ ಬೆಲೆಯಲ್ಲಿ ದಾಖಲೆ ಮಟ್ಟದ ಏರಿಕೆ; ಗಗನ ಕುಸುಮವಾಗುತ್ತಿದೆ ಚಿನ್ನ...
ನವದೆಹಲಿ, ಜನವರಿ 05: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮಂಗಳವಾರ ದಾಖಲೆ ಮಟ್ಟದ ಏರಿಕೆ ಕಂಡಿದೆ. ಹೊಸ ವರ್ಷಕ್ಕೆ ಹೊಸ ಬೆಲೆ ಆಭರಣ ಪ್ರಿಯರಿಗೆ ಶಾಕ್ ನೀಡುವಂತಿದೆ. ದೆಹಲಿಯಲ್ಲಿ ಸೋಮವಾರ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 49,070 ರೂಪಾಯಿ ಇದ್ದು, ಈ ಬೆಲೆ ಮಂಗಳವಾರ 50,150ರೂಗೆ ಏರಿಕೆಯಾಗಿದೆ.
ಹೀಗಾಗಿ ಚಿನ್ನದ ಆಭರಣಗಳ ಬೆಲೆ ದಿಢೀರನೆ ಏರಿಕೆಯಾಗಿದ್ದು, 2021-2022ರಲ್ಲಿ ಚಿನ್ನ ಖರೀದಿಸಲು ಯೋಜನೆ ಹಾಕಿಕೊಂಡವರು ಯೋಚಿಸುವಂತಾಗಿದೆ.
ಚಿನ್ನದ ಬೆಲೆ ಭಾರೀ ಏರಿಕೆ: ಬೆಳ್ಳಿ ಬೆಲೆಯಲ್ಲೂ ಹೆಚ್ಚಳ!
ದೆಹಲಿ, ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ಎಷ್ಟು ಏರಿಕೆಯಾಗಿದೆ ಎಂಬುದರ ವಿವರ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ 4,800 ಆಗಿದೆ. ಸೋಮವಾರ ಈ ಬೆಲೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 47,300 ಇತ್ತು. ಮಂಗಳವಾರ ಹತ್ತು ಗ್ರಾಂಗೆ 48,000 ರೂಗೆ ಏರಿಕೆಯಾಗಿದೆ.
ಸೋಮವಾರ 24 ಕ್ಯಾರೆಟ್ ಬ 10 ಗ್ರಾಂ ಚಿನ್ನದ ಬೆಲೆ 51,600 ಇದ್ದಿದ್ದು, ಮಂಗಳವಾರ 52,360ಕ್ಕೆ ಏರಿಕೆಯಾಗಿದೆ.
ಸವರನ್ ಗೋಲ್ಡ್ ಬಾಂಡ್ ಯೋಜನೆ 2020-21: ಇಂದಿನಿಂದ ಓಪನ್, ಪ್ರಮುಖ ಮಾಹಿತಿ ತಿಳಿದುಕೊಳ್ಳಿ..

2021ರ ಆರಂಭದಲ್ಲಿಯೇ ಚಿನ್ನದ ಬೆಲೆ ಏರಿಕೆ
2020 ವರ್ಷದಲ್ಲಿ 22 ಕ್ಯಾರೆಟ್ 10 ಗ್ರಾ ಚಿನ್ನದ ಬೆಲೆ 46,700 ಇತ್ತು. 2021 ವರ್ಷದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,000 ರೂಪಾಯಿ ಆಗಿದೆ.
2020 ವರ್ಷದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 50,950 ರೂ ಇತ್ತು. 2021ರಲ್ಲಿ ಈ ಬೆಲೆ 52,360 ರೂಗೆ ಏರಿಕೆಯಾಗಿದೆ.

ದೆಹಲಿಯಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಜನವರಿ 5ರ ಮಂಗಳವಾರ ದೆಹಲಿಯಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನಕ್ಕೆ ಮಂಗಳವಾರ 5,015 ರೂ ಇದ್ದು, ಸೋಮವಾರ 4,907 ರೂ ಇತ್ತು. ಒಂದೇ ದಿನಕ್ಕೆ ಗ್ರಾಂಗೆ 108 ರೂ ಏರಿಕೆಯಾಗಿದೆ. ಹತ್ತು ಗ್ರಾಂಗೆ 1,080 ರೂಪಾಯಿ ಏರಿಕೆಯಾದಂತಾಗಿದೆ. 24 ಕ್ಯಾರೆಟ್ ಚಿನ್ನಕ್ಕೆ ಸೋಮವಾರ 53,520 ರೂ ಇದ್ದು, ಮಂಗಳವಾರ 54,700 ರೂ ಆಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.