April 17th Gold Price: ರಾಮನವಮಿಯ ದಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಗೊತ್ತಾ..?
ಬೆಂಗಳೂರು, ಏಪ್ರಿಲ್ 17: ನಾಡಿನಾದ್ಯಂತ ರಾಮನವಮಿಯ ಸಂಭ್ರಮ ಮನೆ ಮಾಡಿದೆ. ಈ ವಿಶೇಷ ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಮತ್ತಷ್ಟು ಹೆಚ್ಚಾಗಿದೆ. ಈ ಸಮಯದಲ್ಲಿ ವಿಶೇಷ ದಿನಗಳು ಹಾಗೂ ಶುಭ ಕಾರ್ಯಗಳು ಹೆಚ್ಚಾಗಿರುವ ಕಾರಣ ಚಿನ್ನದ ದರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಭಾರತದಲ್ಲಿ ಚಿನ್ನ ಉತ್ಪಾದನಾ ಕೇಂದ್ರಗಳಿಲ್ಲದಿರುವುದು ಹಾಗೂ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನ ಖರೀದಿಸುವುದರಿಂದ ಚಿನ್ನದ ಬೆಲೆ ಹೆಚ್ಚಾಗುತ್ತಿದೆ. ಕಳೆದ ಆರು ತಿಂಗಳಿಗೆ ಹೋಲಿಸಿದರೆ ಚಿನ್ನ ಮತ್ತು ಬೆಳ್ಳಿಯ ದರ ಅತಿ ಹೆಚ್ಚು ಏರಿಕೆಯಾಗಿದೆ.

ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 67,950 ರೂಪಾಯಿ ಇದ್ದು, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 74,130 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 8,550 ರೂಪಾಯಿ ಇದೆ. ಹಾಗಾದರೆ ಇಂದು (ಏಪ್ರಿಲ್ 17) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಒಂದು ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಚಿನ್ನದ ದರ - 6,795 ರೂಪಾಯಿ
* 24 ಕ್ಯಾರೆಟ್ ಚಿನ್ನದ ದರ - 7,413 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ- 67,950 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 74,130 ರೂಪಾಯಿ
8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 54,360 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 59,304 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
* ಬೆಂಗಳೂರು-67,950 ರೂಪಾಯಿ
* ಚೆನ್ನೈ- 68,700 ರೂಪಾಯಿ
*ಮುಂಬೈ-67,950 ರೂಪಾಯಿ
* ಕೇರಳ -67,950 ರೂಪಾಯಿ
* ಕೋಲ್ಕತ್ತಾ-67,950 ರೂಪಾಯಿ
* ಜೈಪುರ್-68,100 ರೂಪಾಯಿ
* ಭುವನೇಶ್ವರ್-67,950 ರೂಪಾಯಿ
*ಅಹ್ಮದಾಬಾದ್-68,000 ರೂಪಾಯಿ
*ಲಕ್ನೋ- 68,100 ರೂಪಾಯಿ
* ನವದೆಹಲಿ-68,100 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
* ಬೆಂಗಳೂರು-8,550 ರೂಪಾಯಿ
* ಚೆನ್ನೈ-9,050 ರೂಪಾಯಿ
* ಮುಂಬೈ-8,700ರೂಪಾಯಿ
* ಕೋಲ್ಕತ್ತಾ-8,700ರೂಪಾಯಿ
* ನವದೆಹಲಿ-8,700 ರೂಪಾಯಿ
*ಕೇರಳ-9,050 ರೂ
*ಅಹ್ಮದಾಬಾದ್-8,700 ರೂ












Click it and Unblock the Notifications