₹8 Lakh Gold: ಆಟೋದಲ್ಲೇ ಬಿಟ್ಟಿದ್ದ 8 ಲಕ್ಷ ರೂ. ಚಿನ್ನಾಭರಣವಿದ್ದ ಬ್ಯಾಗ್ ಮರಳಿ ಸಿಕ್ಕಿದ್ದೆ ರೋಚಕ
ಹುಬ್ಬಳ್ಳಿ, ಏಪ್ರಿಲ್ 18: ಈಗಿನ ಕಾಲದಲ್ಲಿ ಚಿನ್ನಾಭರಣ, ವಸ್ತು ಸಿಕ್ಕಿದರೆ ಯಾರು ಬಿಡ್ತಾರೆ ಹೇಳಿ. ಆದರೆ ಇಲ್ಲೊಬ್ಬ ನಿಶ್ವಾರ್ಥ ಆಟೋ ಚಾಲಕ ಬಿಟ್ಟು ಹೋಗಿದ್ದ ಬ್ಯಾಗ್ ಅನ್ನು ಮರಳಿ ತಲುಪಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.
ಆಟೋದಲ್ಲಿ ಬಿಟ್ಟಿ ಬ್ಯಾಗ್ಯ ತೆರೆದು ನೋಡಿದರೆ, ಅದರೊಳಗೆ 8 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಇರುವುದು ಗೊತ್ತಾಗಿದೆ. ಇದೆಲ್ಲ ನೋಡಿ ವಿಚಲಿತರಾಗದೇ ಪ್ರಯಾಣಿಕರೇ ಆ ಬ್ಯಾಗ್ ಅನ್ನು ವಾಪಾಸ್ ನೀಡುವ ಮೂಲಕ ಆಟೋ ಚಾಲಕರೊಬ್ಬರು ಮಾನವೀಯತೆ ಪ್ರದರ್ಶಿಸಿದ್ದಾರೆ.

ಧಾರವಾಡದ ಮಹಿಳೆಯ ಬ್ಯಾಗ್
ಹುಬ್ಬಳ್ಳಿಯ ನಾಗರಾಜ್ ಎನ್ನುವವರ ಆಟೋದಲ್ಲಿ ನಗರದ ಗೋಕುಲ ಬಸ್ ನಿಲ್ದಾಣದಿಂದ ಹೊಸುರ ಬಸ್ ನಿಲ್ದಾಣದವರೆಗೆ ಮೂವರು ಪ್ರಯಾಣ ಮಾಡಿದ್ದಾರೆ. ಈ ವೇಳೆ ಆಟೋದಿಂದ ಇಳಿಯುವಾಗ ಗಡಿಬಿಡಿಯಲ್ಲಿ ಧಾರವಾಡದ ನಿಸ್ಸಾಮುದ್ದೀನ್ ಕಾಲೋನಿ ಮಹಿಳೆಯೊಬ್ಬರು ತಮ್ಮ ಬ್ಯಾಗ್ನ್ನು ಆಟೋದಲ್ಲಿ ಬಿಟ್ಟು ಹೋಗಿದ್ದರು.
ಈ ಮಹಿಳೆ ಬಿಟ್ಟು ಹೋದ ಬ್ಯಾಗ್ನಲ್ಲಿ 4 ತೊಲೆ ಬಂಗಾರ, 16 ತೊಲೆ ಬೆಳ್ಳಿ ಹಾಗೂ ಮನೆಯ ದಾಖಲಾತಿಗಳು ಇವೆ. ಪ್ರಯಾಣಿಕರು ಬ್ಯಾಗ್ ಬಿಟ್ಟು ಹೋಗಿರುವುದನ್ನು ಗಮನಿಸಿದ ಆಟೋ ಚಾಲಕ ಹುಬ್ಬಳ್ಳಿಯ ಗೋಕುಲ ಠಾಣೆಯ ಪೊಲೀಸರು, ಆಟೋ ಚಾಲಕರ ಸಮ್ಮುಖದಲ್ಲಿ ಪ್ರಯಾಣಿಕರಿಗೆ ಬ್ಯಾಗ್ ವಾಪಸ್ ನೀಡಿದ್ದಾರೆ.
ಈ ಮೂಲಕ ಆಟೋ ಚಾಲಕ ನಾಗರಾಜ್ ಮಾನವೀಯತೆ ಮೆರೆದಿದ್ದಾರೆ. ಸದ್ಯ ನಾಗರಾಜ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಆಟೋ ಚಾಲಕನ ಮಾನವೀಯತೆಗೆ ಪೊಲೀಸರು ಕೂಡ ಸನ್ಮಾನ ಮಾಡಿದ್ದಾರೆ.

ಬ್ಯಾಗ್ ಬಿಟ್ಟು ಹೋಗಿ ಮಹಿಳೆ ಆತಂಕ
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಬಿಟ್ಟು ಹೋದ ಮಹಿಳೆಯು ಮನೆಗೆ ಹೋಗಿ ನೋಡಿದಾಗ ಬ್ಯಾಗ್ ಕಾಣಲಿಲ್ಲ. ಎಲ್ಲಿ ಬಿಟ್ಟು ಬಂದಿದ್ದಾರೆ ಎಂಬುದು ಸಹ ಅವರಿಗೆ ನೆನಪಿರಲಿಲ್ಲ. ಇದರಿಂದಾಗಿ ಆತಂಕಗೊಂಡ ಧಾರವಾಡದ ನಿಸ್ಸಾಮುದ್ದೀನ್ ಕಾಲೋನಿ ಮಹಿಳೆ ಹುಡುಕಾಟ ನಡೆಸಿದರು.
33 ಕಡೆ ಸಿಸಿಟಿವಿ ಪರಿಶೀಲನೆ
ಒಂದು ದಿನ ಕಳೆದರೂ ಆ ಬ್ಯಾಗ್ ಸಿಗಲೇ ಇಲ್ಲ. ನಂತರ ಶ್ರೀ ಸಿದ್ಧಾರೂಢ ಮಠ, ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ರೈಲು ನಿಲ್ದಾಣ ಹೀಗೆ ಎಲ್ಲ ಕಡೆ ಹುಡುಕಲಾಯಿತು. ನಂತರ ಇದರ ಜೊತೆಗೆ 33 ವಿವಿಧ ಕಡೆಗಳಲ್ಲಿ ಸಿಸಿ ಟಿವಿವಳನ್ನ ಪರಿಶೀಲನೆ ಸಹ ಮಾಡಲಾಯಿತು. ಆದರೆ ಚಿನ್ನಾಭರಣ ಬ್ಯಾಗ್ ಅಟೋ ಸೀಟಿನ ಹಿಂಬದಿಯಲ್ಲೇ ಇತ್ತು. ಅಟೊ ಚಾಲಕ ನೋಡಿ ಪೊಲೀಸರಿಗೆ ಒಪ್ಪಿಸಿದರು.
ಬಳಿಕ ಪೊಲೀಸರ ಸಮೇತರಾಗಿ ಆಟೋ ಚಾಲಕ ಬ್ಯಾಗ್ ಅನ್ನು ಕಳೆದುಕೊಂಡಿದ್ದ ಮಹಿಳೆಗೆ ತಲುಪಿಸಿ ಸಾರ್ಥಕತೆ ಮೆರೆದು ಇತರರಿಗೆ ಮಾದಿಯಾಗಿದ್ದಾರೆ.












Click it and Unblock the Notifications