ಚಿನ್ನದ ಬೆಲೆ ಮತ್ತಷ್ಟು ದುಬಾರಿ: 1 ಲಕ್ಷ ರೂಪಾಯಿ ಮುಟ್ಟೋದು ಪಕ್ಕಾ!
ಚಿನ್ನಕ್ಕೆ ಭಾರಿ ಬೆಲೆ ಬಂದಿದೆ, ಅದರಲ್ಲೂ ಕೇವಲ 10 ವರ್ಷದ ಹಿಂದೆ ಕೈಗೆ ಎಟುಕುವಂತೆ ಇದ್ದ ಚಿನ್ನದ ಬೆಲೆ ಈಗ ಭರ್ಜರಿ ಮುಕ್ಕಾಲು ಲಕ್ಷಕ್ಕೆ ಅಂದರೆ 75,000 ರೂಪಾಯಿಗೆ ಬಂದು ನಿಂತಿದೆ. ಈ ಸಮಯದಲ್ಲೇ ಚಿನ್ನ ಪ್ರತಿ 10 ಗ್ರಾಂಗೆ, ಭರ್ಜರಿ 1 ಲಕ್ಷ ರೂಪಾಯಿ ಮುಟ್ಟೋದು ಪಕ್ಕಾ ಆಗಿದ್ದು ಚಿನ್ನದ ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಹೌದು, ಚಿನ್ನಕ್ಕೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ ಹೀಗಾಗಿ ಚಿನ್ನದ ಬೆಲೆ ಕೂಡ ದಿನದಿಂದ ದಿನಕ್ಕೆ ಭಾರಿ ಏರಿಕೆ ಕಾಣುತ್ತಿದೆ. ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಗಿಬಿದ್ದ ಕಾರಣ ಈಗ ಹೊಸ ಇತಿಹಾಸ ಬರೆದಿದೆ ಚಿನ್ನದ ಬೆಲೆ. ಅದರಲ್ಲೂ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಸತತ ಏರಿಕೆ ಕಂಡಿದೆ, ಶೀಘ್ರದಲ್ಲೇ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1 ಲಕ್ಷ ರೂಪಾಯಿ ದಾಟುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆ ಮತ್ತೊಂದು ಕಾರಣಕ್ಕೆ ಕೂಡ ಜಗತ್ತಿನಾದ್ಯಂತ ಈಗ ಚಿನ್ನದ ಬೆಲೆ ಆಕಾಶಕ್ಕೆ ತಲುಪುತ್ತಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಚಿನ್ನ 1 ಲಕ್ಷ ರೂಪಾಯಿ?
ಜಾಗತಿಕವಾಗಿ 2 ಭೀಕರ ಯುದ್ಧಗಳು ನಡೆಯುತ್ತಿವೆ, ಇದೇ ಸಮಯದಲ್ಲಿ ದಿಢೀರ್ ಅಂತಾ ಇರಾನ್ ಕೂಡ ಇಸ್ರೇಲ್ ವಿರುದ್ಧ ಯುದ್ಧ ಸಾರಿದೆ. ಈ ಮೂಲಕ ಬಡಿದಾಟ ಹೆಚ್ಚಾಗಿದ್ದು ಜಾಗತಿಕ ಆರ್ಥಿಕತೆ ಅಲ್ಲಾಡಿ ಹೋಗಿದೆ. ಅದರಲ್ಲೂ ರಷ್ಯಾ & ಉಕ್ರೇನ್ ಯುದ್ಧದ ನಂತರ ಇಸ್ರೇಲ್ & ಪ್ಯಾಲೆಸ್ತೀನ್ ಯುದ್ಧ ಇಡೀ ಜಗತ್ತಿಗೆ ಆಘಾತ ನೀಡಿತ್ತು. ಇದರ ಜೊತೆ ಇಸ್ರೇಲ್ ವಿರುದ್ಧ ಬಾಂಬ್, ಮಿಸೈಲ್ ಹಾರಿಸಿ ತೊಡೆತಟ್ಟಿದೆ ಇರಾನ್. ಇದೆಲ್ಲದರ ಫಲವಾಗಿ ಈಗ, ಚಿನ್ನದ ಬೆಲೆ ಕೂಡ ಗಗನಕ್ಕೆ ಏರುತ್ತಿದೆ. ಶೀಘ್ರದಲ್ಲಿಯೇ 1 ಲಕ್ಷ ರೂಪಾಯಿ ದಾಟುವ ಬಗ್ಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಈ ಯುದ್ಧಕ್ಕೂ, ಚಿನ್ನದ ಬೆಲೆ ಏರಿಕೆಗೂ ಏನು ಸಂಬಂಧ? ಬನ್ನಿ ತಿಳಿಯೋಣ.
ಯುದ್ಧದ ಎಫೆಕ್ಟ್ ಇದು?
ಜಾಗತಿಕವಾಗಿ ಯುದ್ಧ ಶುರುವಾದಾಗ ಮೊದಲು ಅದರ ಪರಿಣಾಮ ಬೀರುವುದು ಚಿನ್ನ ಮತ್ತು ಪೆಟ್ರೋಲ್ & ಡೀಸೆಲ್ ಮೇಲೆ. ಯಾಕೆ ಅಂದ್ರೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಈ ವಸ್ತುಗಳು ದೊಡ್ಡ ಹಿಡಿತ ಹೊಂದಿವೆ. ಹೀಗಾಗಿ ಯುದ್ಧ ಶುರುವಾದ ತಕ್ಷಣ ಚಿನ್ನದ ರೂಪಕ್ಕೆ ತಮ್ಮ, ತಮ್ಮ ಸಂಪತ್ತು ಅಂದ್ರೆ ಹವಣವನ್ನು ಬದಲಾಯಿಸಿ ಸಂಗ್ರಹ ಮಾಡಲು ಜನರು ಮುಂದೆ ಬರುತ್ತಾರೆ. ಹಾಗೇ ದೇಶಗಳು ಕೂಡ ಅಪಾರ ಪ್ರಮಾಣದ ಚಿನ್ನವನ್ನು ಯುದ್ಧದ ಸಮಯ ಬಂದಾಗ ಖರೀದಿ ಮಾಡುತ್ತವೆ. ಈಗ ಕೂಡ ಅದೇ ಆಗುತ್ತಿದೆ.
ಯಾಕಂದ್ರೆ ಯುದ್ಧದ ಸಮಯದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತದೆ, ಹಾಗೆಯೇ ಷೇರು ಮಾರುಕಟ್ಟೆಯ ಇತರ ಹೂಡಿಕೆಗಳು ಕುಸಿದು ಬೀಳುತ್ತವೆ. ಹೀಗಾಗಿ ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗುತ್ತಾರೆ. ಇದೇ ಕಾರಣಕ್ಕೆ, ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುತ್ತೆ. ಹಾಗೇ ಇನ್ನೂ ಹಲವು ಕಾರಣಗಳು ಚಿನ್ನದ ಬೆಲೆ ಏರಿಕೆಗೆ ಕಾರಣ ಆಗುತ್ತವೆ. ಈಗ ಚಿನ್ನ 75,000 ರೂಪಾಯಿ ಗಡಿ ದಾಟಿದೆ. ಇನ್ನೇನು 1 ಲಕ್ಷ ರೂಪಾಯಿ ಗಡಿಯನ್ನೂ ದಾಟುವ ನಿರೀಕ್ಷೆ ಇದೆ.
ಅಮೂಲ್ಯವಾದ ವಸ್ತು 'ಚಿನ್ನ'!
ಸಾವಿರಾರು ವರ್ಷದಿಂದ ಕೂಡ ಚಿನ್ನ ಒಂದು ಅಮೂಲ್ಯ ವಸ್ತು. ವಾತಾವರಣದಲ್ಲಿ ಅತಿ ಬೇಗ ಬೇರೆ ವಸ್ತುಗಳ ಜೊತೆ ಬೆರೆಯದೇ ಇರುವ ಕಾರಣಕ್ಕೆ ಚಿನ್ನಕ್ಕೆ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಶುರುವಾದ್ರೆ ಚಿನ್ನಕ್ಕೆ ಬೇಡಿಕೆಯು ಹೆಚ್ಚಾಗುತ್ತದೆ. ಈಗ ಅಂತಹದ್ದೇ ಸ್ಥಿತಿ ನಿರ್ಮಾಣವಾಗಿದ್ದು ಜಾಗತಿಕವಾಗಿ ಎರಡು ಭೀಕರ ಯುದ್ಧವು ನಡೆಯುತ್ತಿವೆ. ಒಂದು ಕಡೆ ರಷ್ಯಾ & ಉಕ್ರೇನ್, ಇಸ್ರೇಲ್ & ಪ್ಯಾಲೆಸ್ತೀನ್ ನಡುವೆ ಯುದ್ಧ ನಡೆಯುತ್ತಿರುವಾಗ ಇಸ್ರೇಲ್ ಮತ್ತು ಇರಾನ್ ನಡುವೆ ಕೂಡ ಯುದ್ಧದ ವಾತಾವರಣ ಇದೀಗ ನಿರ್ಮಾಣವಾಗಿ, ಭಯ ಆವರಿಸಿದೆ. ಇದು ಕೂಡ ಚಿನ್ನದ ಬೆಲೆ ಏರಿಕೆ ಮೇಲೆ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ.












Click it and Unblock the Notifications