ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
ಬೆಂಗಳೂರಿನಲ್ಲಿ ಮಳೆಯೇ ಇಲ್ಲದೆ ಜನರು ಪರದಾಡಿ ಹೋಗಿದ್ದು, ಬಿಸಿಲಿನ ಬೇಗೆ ನೆತ್ತಿಯ ಸುಡುತ್ತಿದೆ. ಅದ್ರಲ್ಲೂ ಈಗಿನ ಪರಿಸ್ಥಿತಿ ನೋಡಿದರೆ ಇನ್ನು ಕೆಲವೇ ದಿನದಲ್ಲಿ ಬೆಂಗಳೂರು ಜನರು ಹೊರಗಡೆ ಬರುವುದಕ್ಕೆ ಆಗಲ್ಲ ಎಂಬ ವಾತಾವರಣ ನಿರ್ಮಾಣ ಆಗಿದೆ. ಹೀಗಿದ್ದಾಗ ಹವಾಮಾನ ಇಲಾಖೆ ಮಳೆ & ಬಿಸಿಲಿನ ಬಗ್ಗೆ ಬೆಂಗಳೂರು ಜನರಿಗೆ ಆಘಾತಕಾರಿ ಸುದ್ದಿಯ ನೀಡಿದೆ. ಹಾಗಾದರೆ ಏನದು ಸುದ್ದಿ? ಮುಂದೆ ಓದಿ.
ಬೆಂಗಳೂರಿನಲ್ಲಿ ಶನಿವಾರ ಭರ್ಜರಿಯಾಗಿ ಮಳೆಯಾಗಿ, ಜನರು ಕೂಡ ನಿಟ್ಟುಸಿರು ಬಿಟ್ಟರು. ಕರ್ನಾಟಕದಲ್ಲಿ ಕಳೆದ ವಾರ ಭರ್ಜರಿಯಾಗಿ ಮಳೆ ಸುರಿದಿತ್ತು, ಆದರೆ ಈ ವಾರ ಮತ್ತೆ ಮಳೆ ಮೋಡಗಳು ಮಾಯವಾಗಿವೆ. ಭಾರಿ ಬಿಸಿಲಿನ ಬೇಗೆಗೆ ಜನರು ಕೂಡ ನರಳಾಡಿದ್ದಾರೆ. ಇದೇ ಸಮಯದಲ್ಲಿ ಹವಾಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದ್ದು, ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ ಬೀಳುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಆದ್ರೂ ಬೆಂಗಳೂರಿನಲ್ಲಿ ಮಾತ್ರ ಮಳೆಯ ಸೂಚನೆ ಸಿಗುತ್ತಿಲ್ಲ. ಹಾಗಾದ್ರೆ ಬೆಂಗಳೂರಿನಲ್ಲಿ ಇದೇ ರೀತಿ ಕೆಟ್ಟ ಬಿಸಿಲು ಜನರ ನೆತ್ತಿ ಸುಡುತ್ತಾ? ಅಥವಾ ಭರ್ಜರಿ ಮಳೆ ಬರುತ್ತಾ? ಮುಂದೆ ಓದಿ.

ಬೆಂಗಳೂರಲ್ಲಿ ಮಳೆ ಬರುತ್ತಾ?
ಈಗಿನ ಲೆಕ್ಕಾಚಾರ ನೋಡುತ್ತಿದ್ದರೆ ಬೆಂಗಳೂರಿನ ಕಡೆ ಮುಂದಿನ 1 ವಾರ ಕಾಲ ಯಾವುದೇ ರೀತಿಯಲ್ಲೂ ಮಳೆಯ ಮೋಡಗಳು ಎಂಟ್ರಿ ಕೊಡೋದೆ ಇಲ್ಲ. ಅದರಲ್ಲೂ ಈಗ ಕಡಿಮೆ, ಕಡಿಮೆ ಆಗುತ್ತಿರುವ ಬಿಸಿಲು ಮುಂದಿನ 1 ವಾರದಲ್ಲಿ ಮತ್ತೆ ಹೆಚ್ಚಾಗಲಿದೆ ಎನ್ನಲಾಗಿದೆ. ಈ ಮೂಲಕ ಬಿಸಿ ಗಾಳಿಯ ಭೀಕರ ಆರ್ಭಟಕ್ಕೆ ಬೆಂಗಳೂರಿನ ಜನರು ಮತ್ತೆ ನಲುಗಲಿದ್ದು, ಈ ಬೆಳವಣಿಗೆ ಭಯ ಮೂಡಿಸಿದೆ. ಅದರಲ್ಲೂ ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಮಳೆ ಸಮಸ್ಯೆ ದೊಡ್ಡ ತಲೆನೋವು ತರಿಸುತ್ತಿದೆ. ಹಾಗಾದರೆ ಇದರಿಂದ ಬೆಂಗಳೂರಿನಲ್ಲಿ ಏನೆಲ್ಲಾ ಸಮಸ್ಯೆ ಎದುರಾಗಲಿದೆ?
ಕರೆಂಟ್ ಕಟ್ ಆಗೋದು ಪಕ್ಕಾ?
ಬೆಂಗಳೂರಿನಲ್ಲಿ ಬಿಸಿಲು ಹೆಚ್ಚಾದ ಪರಿಣಾಮ, ಈಗಾಗಲೇ ಎಸಿ ಬಳಕೆ ಮಾಡುತ್ತಿರುವವರು ಕೂಡ ಹೆಚ್ಚಾಗಿದ್ದಾರೆ. ಹೀಗಾಗಿ ಜನ ಕೂಡ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಸುತ್ತಿದ್ದು, ರಾಜ್ಯದಲ್ಲಿ ಮೊದಲೇ ಮಳೆ ಇಲ್ಲದೆ ಡ್ಯಾಂ ಬತ್ತಿ ಹೋಗಿವೆ. ಹೀಗಾಗಿ ವಿದ್ಯುತ್ ತಯಾರಿಕೆ ಕೂಡ ಕಡಿಮೆ ಆಗಿದೆ. ಈ ನಡುವೆ ಹೆಚ್ಚಿನ ವಿದ್ಯುತ್ ಹೀಗೆ ಬಳಸುತ್ತಿದ್ದರೆ ಮುಂದೆ ಕರೆಂಟ್ ಕಟ್ ಆಗೋದು ಗ್ಯಾರಂಟಿ ಎಂಬ ಭಯ ಮೂಡಿದೆ. ಹಾಗೇ ನೀರಿಗೆ ಕೂಡ ಸಮಸ್ಯೆ ಕಾಡಿ, ಜನ ಬೆಂಗಳೂರಲ್ಲಿ ಪರದಾಡುವ ಸ್ಥಿತಿ ಬರಲಿದೆ.

ಟ್ಯಾಂಕರ್ ಮಾಫಿಯ ಅಬ್ಬರ?
ಈಗಾಗಲೇ ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾ ಅಬ್ಬರ ಜೋರಾಗಿದೆ ಅಂತಾ ಜನಗಳು ಆರೋಪ ಮಾಡುತ್ತಿದ್ದಾರೆ. ಅಕಸ್ಮಾತ್ ಬೆಂಗಳೂರಿನಲ್ಲಿ ಬಿಸಿಲಿನ ಧಗೆ ಮತ್ತಷ್ಟು ಹೆಚ್ಚಾಗಿ, ಇದೇ ರೀತಿಯಲ್ಲಿ ತಾಪಮಾನ ಹೆಚ್ಚಿದರೆ ಹನಿ ಹನಿ ನೀರು ಕೂಡ ಚಿನ್ನದಂತೆ ಆಗಲಿದ್ದು, ಆ ನಂತರ ಜನ ಟ್ಯಾಂಕರ್‌ಗಳನ್ನೇ ನಂಬಿ ಕೂರಬೇಕು. ಆಗ ಕೂಡ ಟ್ಯಾಂಕರ್ ಮಾಫಿಯಾ ಮತ್ತಷ್ಟು ಜೋರಾಗಿ ಸದ್ದು ಮಾಡುವ ಅಪಾಯ ಇದೆ. ಇದೀಗ 3000-4000 ರೂಪಾಯಿಗೆ ಮಾರಾಟ ಆಗುತ್ತಿರುವ ಟ್ಯಾಂಕರ್ ನೀರು ಇನ್ನೂ ಎಲ್ಲಿಗೆ ಬಂದು ನಿಲ್ಲಲಿದೆ? ಅಂತಾ ಈಗ ಜನ ಆರೋಪಿಸುತ್ತಿದ್ದಾರೆ.
ಈ ಬಾರಿ ಭೀಕರ ಬರ
4-5 ವರ್ಷದಿಂದ ಬೆಂಗಳೂರು & ಕರ್ನಾಟಕದ ಜನರು, ಭಾರಿ ಮಳೆಗೆ ಬೆಚ್ಚಿ ಬಿದ್ದಿದ್ದರು. ತಗ್ಗು ಪ್ರದೇಶದ ಜನಕ್ಕೆ ಮಳೆ ನೀರು ಸಾಕಷ್ಟು ಸಮಸ್ಯೆ ನೀಡಿತ್ತು. ಆದ್ರೂ ಕಳೆದ ವರ್ಷ ಮಳೆ ನಾಪತ್ತೆ ಆಗಿತ್ತು. ಬೇಸಿಗೆ ಸಮಯದಲ್ಲಿ ಬಿದ್ದಿದ್ದ ಒಂದೆರಡು ಮಳೆ ಮಾತ್ರ ಕರ್ನಾಟಕಕ್ಕೆ ತಂಪೆರದಿತ್ತು. ಅದನ್ನ ಬಿಟ್ಟು ಮುಂಗಾರು ಸಮಯ ಜೂನ್ ತಿಂಗಳಲ್ಲೇ ಕರ್ನಾಟಕದಲ್ಲಿ ಮಳೆ ಕೊರತೆ ಆತಂಕ ಹುಟ್ಟಿಸಿತ್ತು. ಇದೀಗ ಕರ್ನಾಟಕದಲ್ಲಿ ನಿಧಾನವಾಗಿ ಜೋರು ಮಳೆ ಬೀಳುತ್ತಿದ್ದು, ಪರಿಸ್ಥಿತಿ ಕೂಡ ಸುಧಾರಿಸುತ್ತಿದೆ.
ಭರ್ಜರಿ ಮಳೆಯ ಮುನ್ಸೂಚನೆ
ಮಳೆ ಇಲ್ಲದೆ ಕನ್ನಡದ ರೈತರು ಪರದಾಡುವ ಸಮಯದಲ್ಲಿ ಕಳೆದ ವಾರ ಭರ್ಜರಿಯಾಗೇ, ಮಳೆರಾಯ ತನ್ನ ಕರುಣೆ ತೋರಿಸಿದ್ದಾನೆ. ಹಿಂಗೆ ಕಳೆದ ವಾರ ಭರ್ಜರಿಯಾಗಿ ಮಳೆ ಬಿದ್ದು ಏಪ್ರಿಲ್ 3ನೇ ವಾರದಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಬಂದಿತ್ತು. ಹೀಗೆ ಭಾರಿ ಮಳೆ ಬಿದ್ದ ಕಾರಣಕ್ಕೆ ಕನ್ನಡಿಗರು ಒಂದಷ್ಟು ಖುಷಿಪಟ್ಟರು. ಆದರೆ ಈಗ, ಏಪ್ರಿಲ್ 4ನೇ ವಾರಕ್ಕೆ ಮತ್ತೆ ಮಳೆ ಮೋಡಗಳು ಮರೆಯಾಗಿವೆ. ಹೀಗಿದ್ದಾಗ ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ.
ಮಳೆ ಬಂದರೆ ಮಾತ್ರ ನೆಮ್ಮದಿ!
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನೀರು ಇಲ್ಲದೆ ರೈತರು ಪರದಾಡಿ ಹೋಗಿದ್ದು, ನೀರಿಗೆ ಹೋರಾಟ ಮಾಡಿದ್ದಾರೆ. ಹೀಗಿದ್ದಾಗ ಕಳೆದ ವಾರ ಮಲೆನಾಡು ಪ್ರದೇಶ, ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲೂ ಉತ್ತಮವಾಗಿ ಮಳೆ ಬಿದ್ದಿತ್ತು. ಹಾಗೇ ಕರಾವಳಿ ಜಿಲ್ಲೆ ಭಾಗಕ್ಕೂ ಮಳೆಯ ಸಿಂಚನವಾಗಿತ್ತು. ಆದರೆ ಈ ವಾರ ಸಂಪೂರ್ಣವಾಗಿ ಮಳೆಯೇ ಬಂದ್ ಆಗಿದೆ. ಹಾಗಾದ್ರೆ ಮುಂದಿನ 24 ಗಂಟೆಯಲ್ಲಿ ಮಳೆ ಆಗಲಿದೆ ಅಂತಾ ಎಚ್ಚರಿಕೆ ನೀಡಿರುವ, ಕರ್ನಾಟಕದ ಆ ಜಿಲ್ಲೆಗಳು ಯಾವುವು?












Click it and Unblock the Notifications