ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ಕಾರಣ ಏನು?

ಜಗತ್ತಿನಲ್ಲಿ ಯುದ್ಧದ ಭೀತಿ ಆವರಿಸಿದ್ದು, ಇದೇ ಭೀತಿ ನಡುವೆ ಇಂದು ಭಾರತದಲ್ಲಿ 2024 ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆದಿದೆ. ಬಹುತೇಕ ಶಾಂತಿಯುತ ಮತದಾನ ನಡೆದಿದ್ದು, ಕೋಟ್ಯಂತರ ಭಾರತೀಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಹೀಗೆ ಭಾರತೀಯರು ತಮ್ಮ ಹಕ್ಕು ಚಲಾಯಿಸುವ ಸಮಯದಲ್ಲಿಯೆ ಚಿನ್ನದ ಬೆಲೆ ಕೂಡ ಭರ್ಜರಿ ಏರಿಕೆ ಕಂಡಿದೆ.

ಅಂದಹಾಗೆ ಡಮಾಸ್ಕಸ್‌ನ ಇರಾನ್ ರಾಯಭಾರ ಕಚೇರಿ ಮೇಲೆ ಏಪ್ರಿಲ್ 1 ರಂದು ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್ ಅಟ್ಟಹಾಸ ಮೆರೆದಿದೆ ಎಂದು ಇರಾನ್ ಆರೋಪಿಸಿತ್ತು. ಡಮಾಸ್ಕಸ್ ಮೇಲೆ ಇಸ್ರೇಲ್ ದಾಳಿ ಮಾಡಿದಾಗ, ಇರಾನ್ ಸೇನಾಧಿಕಾರಿಗಳು ಸೇರಿ ಹಲವು ಇರಾನ್ ಅಧಿಕಾರಿ ವರ್ಗ ಜೀವ ಬಿಟ್ಟಿದೆ ಎಂದು ಮಾಹಿತಿ ನೀಡಿ ಆಕ್ರೋಶ ಹೊರಹಾಕಿತ್ತು ಇರಾನ್. ಆ ನಂತರವೇ ಯುದ್ಧ ಭೀತಿ ಆವರಿಸಿತ್ತು, ಇನ್ನು ಮತ್ತೊಂದು ಕಡೆ ಈಗಾಗಲೇ ಸುಮಾರು 200 ಮಿಸೈಲ್ ಹಾಗೂ ಡ್ರೋನ್‌ಗಳ ಮೂಲಕ ಇರಾನ್ ಸೇನೆ ದಾಳಿ ಮಾಡಿದೆ. ಆ ನಂತರ ಇಸ್ರೇಲ್ ಕೂಡ ಮರು ದಾಳಿ ನಡೆಸಿದೆ ಎಂಬ ಆರೋಪ ಇದೆ. ಹೀಗೆ ಕಿತ್ತಾಟ ಮುಂದುವರಿದ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಕೂಡ ಭರ್ಜರಿ ಏರಿಕೆ ಕಾಣುತ್ತಿದೆ. ಹಾಗಾದ್ರೆ ಇದೀಗ ಚಿನ್ನದ ಬೆಲೆ ಎಷ್ಟಿದೆ?

Gold Price Got Another Hike Amid War Tensions

ಚಿನ್ನದ ಬೆಲೆ ಈಗ ಎಷ್ಟಿದೆ?

ಅಷ್ಟಕ್ಕೂ ಇಂದು 10 ಗ್ರಾಂ ಚಿನ್ನದ ದರ 400 ರೂಪಾಯಿ ಅಷ್ಟು ಹೆಚ್ಚಳವಾಗಿ 74,100 ರೂ. ಹಂತಕ್ಕೆ ತಲುಪಿದೆ. ಈ ಮೂಲಕ ಸಾರ್ವಕಾಲಿಕ ಗರಿಷ್ಠಕ್ಕೆ ಮುಟ್ಟಿದ್ದು, ಬೆಳ್ಳಿ ಧಾರಣೆಯೂ ಪ್ರತಿ ಕೆ.ಜಿಗೆ 100 ರೂಪಾಯಿ ಏರಿಕೆ ಆಗುವ ಮೂಲಕ ಈಗ 86,600 ರೂಪಾಯಿಗೆ ತಲುಪಿದೆ. ಮತ್ತೊಂದು ಕಡೆ ಜಾಗತಿಕ ಮಾರುಕಟ್ಟೆಯಲ್ಲಿ ಕೂಡ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ ಅಂದರೆ 28.34 ಗ್ರಾಂಗೆ ಕ್ರಮವಾಗಿ 2,390 ಡಾಲರ್‌ ಹಾಗೂ ₹2,360 ಡಾಲರ್‌ನಂತೆ ಮಾರಾಟ ಆಗುತ್ತಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿಯೂ ಚಿನ್ನ & ಬೆಳ್ಳಿಯ ಬೆಲೆಯು ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ.

ಚಿನ್ನ 1 ಲಕ್ಷ ರೂಪಾಯಿ ಆಗುತ್ತಾ?

ಜಾಗತಿಕವಾಗಿ 2 ಭೀಕರ ಯುದ್ಧಗಳು ನಡೆಯುತ್ತಿವೆ ಇದೇ ಸಮಯದಲ್ಲಿ ದಿಢೀರ್ ಅಂತ ಇರಾನ್ ಕೂಡ ಇಸ್ರೇಲ್ ವಿರುದ್ಧ ಯುದ್ಧ ಸಾರಿದೆ. ಈ ಮೂಲಕ ಬಡಿದಾಟ ಹೆಚ್ಚಾಗಿ, ಜಾಗತಿಕ ಆರ್ಥಿಕ ಪರಿಸ್ಥಿತಿ ಅಲ್ಲಾಡಿ ಹೋಗಿದೆ. ಅದರಲ್ಲೂ ರಷ್ಯಾ VS ಉಕ್ರೇನ್ ಯುದ್ಧದ ನಂತರ ಇಸ್ರೇಲ್ & ಪ್ಯಾಲೆಸ್ತೀನ್ ಯುದ್ಧ ಇಡೀ ಜಗತ್ತಿಗೆ ಆಘಾತ ನೀಡಿತ್ತು. ಇದರ ಜತೆಗೆ ಇಸ್ರೇಲ್ ವಿರುದ್ಧ ಬಾಂಬ್ ಮಿಸೈಲ್ ಹಾರಿಸಿ ತೊಡೆತಟ್ಟಿದೆ ಇರಾನ್. ಇದರ ಫಲವಾಗಿ ಈಗ, ಚಿನ್ನದ ಬೆಲೆ ಕೂಡ ಗಗನಕ್ಕೆ ಏರುತ್ತಿದೆ. ಶೀಘ್ರದಲ್ಲೇ 1 ಲಕ್ಷ ರೂಪಾಯಿ ದಾಟುವ ಬಗ್ಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಚಿನ್ನ ಪ್ರಿಯರಲ್ಲಿ ಆತಂಕ ಮೂಡಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+