ಮಳೆ.. ಮಳೆ.. ಒಂದೇ ಮಳೆಯಿಂದ ರೈತರಿಗೆ ಖುಷಿ!

ಕರ್ನಾಟಕದ ಅನ್ನದಾತರಿಗೆ ಒಂದಷ್ಟು ರಿಲೀಫ್ ಸಿಕ್ಕಿದೆ ಯಾಕಂದ್ರೆ ಕಳೆದ ವಾರ ಸುರಿದಿದ್ದ ಮಳೆ ರೈತರ ಜಮೀನಿಗೆ ಒಂದಷ್ಟು ನೀರು ನೀಡಿದೆ. ಈ ಪೈಕಿ ಬೇಸಿಗೆ ಬೆಳೆಗೆ ನೀರಿಲ್ಲ ಎಂಬ ಕೊರಗಿನಲ್ಲಿ ರೈತರು ಪರದಾಡುತ್ತಿದ್ದರು. ಇಂತಹ ಪರಿಸ್ಥಿತಿ ನಿರ್ಮಾಣ ಆಗಿದ್ದಾಗ ಮಳೆಯ ಎಂಟ್ರಿ ಭರ್ಜರಿ ಖುಷಿ ಕೊಟ್ಟಿದೆ. ಅದರಲ್ಲೂ ಒಣಗಿ ಹೋಗುತ್ತಿದ್ದ ಬೆಳೆಗೆ ಜೀವ ಬಂದಿದೆ.

ಕರ್ನಾಟಕದಲ್ಲಿ ಮಳೆಯ ಅನಿಶ್ಚಿತತೆ ಮುಂದುವರಿದಿದೆ. ಕರ್ನಾಟಕದಲ್ಲಿ ಒಮ್ಮೊಮ್ಮೆ ಭಾರಿ ಮಳೆ ಬಂದು ಅತಿವೃಷ್ಟಿ ಸೃಷ್ಟಿಯಾಗಿ ರೈತರು ಬೆಳೆ ಕಳೆದುಕೊಳ್ಳುತ್ತಾರೆ. ಇನ್ನೂ ಕೆಲವಾರು ಬಾರಿ ವರ್ಷಗಟ್ಟಲೇ ಮಳೆಯೇ ಬಾರದೆ ಕೃಷಿಕರು ಪರದಾಡುತ್ತಾರೆ. ಹೀಗೆ ಮಳೆ ಬರಬೇಕು ಅಂತಾ ರೈತರು ದೇವರ ಮೊರೆ ಹೋಗುತ್ತಾರೆ. ಕೆಲವೊಮ್ಮೆ ವರುಣ ದೇವ ಕರುಣೆ ತೋರಿ ಮಳೆ ಬರಿಸುತ್ತಾನೆ. ಇನ್ನೂ ಕೆಲವು ಬಾರಿ ಮಳೆ ಇಲ್ಲದೆ ಜನಗಳು ಪರದಾಡುತ್ತಾರೆ. ಕಳೆದ ವರ್ಷ ಕೂಡ ಅದೇ ರೀತಿ ಆಗಿತ್ತು. ಹೀಗಾಗಿ ಬೇಸಿಗೆ ಆರಂಭದಲ್ಲೇ ಕರ್ನಾಟಕದ ಕೃಷಿಕರಿಗೆ ಭಾರಿ ಸಮಸ್ಯೆ ಆಗಿತ್ತು. ಆದರೆ ಈಗ ಭರ್ಜರಿ ಮಳೆ ಬಂದ ಕಾರಣಕ್ಕೆ ರೈತರು ಖುಷಿಯಾಗಿ ಬೆಳೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ.

Rain Gives Small Relief To Karnataka Farmers In April 2024

ಗದ್ದೆ, ಹೊಲಗಳಿಗೆ ಹೊಸ ಕಳೆ!

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಫೆಬ್ರವರಿ & ಮಾರ್ಚ್ ತಿಂಗಳಲ್ಲಿ ಭಾರಿ ಬಿಸಿಲಿನಿಂದ, ಜನರು ಬೆಚ್ಚಿಬಿದ್ದಿದ್ದರು. ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಭಾರಿ ಬಿಸಿಲು ಸಮಸ್ಯೆ ತಂದೊಡ್ಡಿತ್ತು. ಆದರೆ ಕಳೆದ ವಾರ ಪೂರ್ತಿ ವರುಣದೇವ ಒಂದಷ್ಟು ಕರುಣೆ ತೋರಿಸಿದ್ದ. ಈ ಹಿನ್ನೆಲೆಯಲ್ಲಿ ಜನರು ನಿಟ್ಟುಸಿರು ಬಿಟ್ಟರು. ಆದ್ರೆ ಈ ವಾರ ಮತ್ತೆ ಮಳೆ ಕೈಕೊಟ್ಟಿದೆ. ಹೀಗಿದ್ದರೂ ಒಂದಷ್ಟು ಖುಷಿಯಾಗಿರುವ ರೈತರು ಮುಂದಿನ ದಿನಗಳಲ್ಲಿ ಮತ್ತೆ ಮಳೆರಾಯ ಕರ್ನಾಟಕದಲ್ಲಿ ಅಬ್ಬರಿಸಲಿದ್ದಾನೆ ಎಂದು ಕಾಯುತ್ತಿದ್ದಾರೆ.

ಬೋರ್‌ಗಳಲ್ಲಿ ನೀರು ಖಾಲಿ!

ಕರ್ನಾಟಕದ ಬಹುತೇಕ ಬೋರ್‌ಗಳು ಖಾಲಿ ಖಾಲಿ ಆಗಿದ್ದು, ಅಂತರ್ಜಲ ಕುಸಿಯುತ್ತಿರುವ ಕಾರಣಕ್ಕೆ ಜನರು ಕುಡಿಯುವ ನೀರಿಗೂ ಪರದಾಡುತ್ತಿದ್ದರು. ಆದರೆ ಕಳೆದ ವಾರ ಸುರಿದಿದ್ದ ಮಳೆ ಒಂದಷ್ಟು ಕೆರೆ ಹಾಗೂ ತೊರೆಗಳನ್ನು ತುಂಬಿಸಿದೆ. ಈ ನೀರಿನಿಂದ ಇನ್ನೂ ಒಂದು, ಅಥವಾ ಎರಡು ತಿಂಗಳು ದಿನದೂಡಬಹುದು. ಆದ್ರೆ ಮೇ ಅಂತ್ಯಕ್ಕೆಲ್ಲ ಒಳ್ಳೆಯ ಮಳೆಯು ಬೀಳುವ ನಿರೀಕ್ಷೆ ಇರುವುದು ಖುಷಿ ಕೊಡುತ್ತಿದೆ. ಹೀಗೆ ರೈತರು, ಉತ್ತಮವಾಗಿ ಮುಂಗಾರು ಮಳೆ ಬರಲಿದೆ ಅಂತಾ ಕಾಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಭರ್ಜರಿಯಾಗಿ ಮಳೆಯಾಗಿ, ಜನರು ಕೂಡ ನಿಟ್ಟುಸಿರು ಬಿಟ್ಟರು. ಕರ್ನಾಟಕದಲ್ಲಿ ಕಳೆದ ವಾರ ಭರ್ಜರಿಯಾಗಿ ಮಳೆ ಸುರಿದಿತ್ತು, ಆದರೆ ಈ ವಾರ ಮತ್ತೆ ಮಳೆ ಮೋಡಗಳು ಮಾಯವಾಗಿವೆ. ಭಾರಿ ಬಿಸಿಲಿನ ಬೇಗೆಗೆ ಜನರು ಕೂಡ ನರಳಾಡಿದ್ದಾರೆ. ಇದೇ ಸಮಯದಲ್ಲಿ ಹವಾಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದ್ದು, ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ ಬೀಳುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಆದ್ರೂ ಬೆಂಗಳೂರಿನಲ್ಲಿ ಮಾತ್ರ ಮಳೆಯ ಸೂಚನೆ ಸಿಗುತ್ತಿಲ್ಲ. ಹಾಗಾದ್ರೆ ಬೆಂಗಳೂರಿನಲ್ಲಿ ಇದೇ ರೀತಿ ಕೆಟ್ಟ ಬಿಸಿಲು ಜನರ ನೆತ್ತಿ ಸುಡುತ್ತಾ? ಅಥವಾ ಭರ್ಜರಿ ಮಳೆ ಬರುತ್ತಾ? ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ.

ಈ ಬಾರಿ ಭೀಕರ ಬರ

4-5 ವರ್ಷದಿಂದ ಬೆಂಗಳೂರು & ಕರ್ನಾಟಕದ ಜನರು, ಭಾರಿ ಮಳೆಗೆ ಬೆಚ್ಚಿ ಬಿದ್ದಿದ್ದರು. ತಗ್ಗು ಪ್ರದೇಶದ ಜನಕ್ಕೆ ಮಳೆ ನೀರು ಸಾಕಷ್ಟು ಸಮಸ್ಯೆ ನೀಡಿತ್ತು. ಆದ್ರೂ ಕಳೆದ ವರ್ಷ ಮಳೆ ನಾಪತ್ತೆ ಆಗಿತ್ತು. ಬೇಸಿಗೆ ಸಮಯದಲ್ಲಿ ಬಿದ್ದಿದ್ದ ಒಂದೆರಡು ಮಳೆ ಮಾತ್ರ ಕರ್ನಾಟಕಕ್ಕೆ ತಂಪೆರದಿತ್ತು. ಅದನ್ನ ಬಿಟ್ಟು ಮುಂಗಾರು ಸಮಯ ಜೂನ್ ತಿಂಗಳಲ್ಲೇ ಕರ್ನಾಟಕದಲ್ಲಿ ಮಳೆ ಕೊರತೆ ಆತಂಕ ಹುಟ್ಟಿಸಿತ್ತು. ಇದೀಗ ಕರ್ನಾಟಕದಲ್ಲಿ ನಿಧಾನವಾಗಿ ಜೋರು ಮಳೆ ಬೀಳುತ್ತಿದ್ದು, ಪರಿಸ್ಥಿತಿ ಕೂಡ ಸುಧಾರಿಸುತ್ತಿದೆ.

ಭರ್ಜರಿ ಮಳೆಯ ಮುನ್ಸೂಚನೆ

ಮಳೆ ಇಲ್ಲದೆ ಕನ್ನಡದ ರೈತರು ಪರದಾಡುವ ಸಮಯದಲ್ಲಿ ಕಳೆದ ವಾರ ಭರ್ಜರಿಯಾಗೇ, ಮಳೆರಾಯ ತನ್ನ ಕರುಣೆ ತೋರಿಸಿದ್ದಾನೆ. ಹಿಂಗೆ ಕಳೆದ ವಾರ ಭರ್ಜರಿಯಾಗಿ ಮಳೆ ಬಿದ್ದು ಏಪ್ರಿಲ್ 3ನೇ ವಾರದಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಬಂದಿತ್ತು. ಹೀಗೆ ಭಾರಿ ಮಳೆ ಬಿದ್ದ ಕಾರಣಕ್ಕೆ ಕನ್ನಡಿಗರು ಒಂದಷ್ಟು ಖುಷಿಪಟ್ಟರು. ಆದರೆ ಈಗ, ಏಪ್ರಿಲ್ 4ನೇ ವಾರಕ್ಕೆ ಮತ್ತೆ ಮಳೆ ಮೋಡಗಳು ಮರೆಯಾಗಿವೆ. ಹೀಗಿದ್ದಾಗ ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ.

ಮಳೆ ಬಂದರೆ ಮಾತ್ರ ನೆಮ್ಮದಿ!

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನೀರು ಇಲ್ಲದೆ ರೈತರು ಪರದಾಡಿ ಹೋಗಿದ್ದು, ನೀರಿಗೆ ಹೋರಾಟ ಮಾಡಿದ್ದಾರೆ. ಹೀಗಿದ್ದಾಗ ಕಳೆದ ವಾರ ಮಲೆನಾಡು ಪ್ರದೇಶ, ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲೂ ಉತ್ತಮವಾಗಿ ಮಳೆ ಬಿದ್ದಿತ್ತು. ಹಾಗೇ ಕರಾವಳಿ ಜಿಲ್ಲೆ ಭಾಗಕ್ಕೂ ಮಳೆಯ ಸಿಂಚನವಾಗಿತ್ತು. ಆದರೆ ಈ ವಾರ ಸಂಪೂರ್ಣವಾಗಿ ಮಳೆಯೇ ಬಂದ್ ಆಗಿದೆ. ಹಾಗಾದ್ರೆ ಮುಂದಿನ 24 ಗಂಟೆಯಲ್ಲಿ ಮಳೆ ಆಗಲಿದೆ ಅಂತಾ ಎಚ್ಚರಿಕೆ ನೀಡಿರುವ, ಕರ್ನಾಟಕದ ಆ ಜಿಲ್ಲೆಗಳು ಯಾವುವು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+