ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಅಕ್ರಮ ಗಣಿ ತನಿಖೆ: ನೂತನ ಲೋಕಾಯುಕ್ತರ ಹೆಗಲಿಗೆ

By Srinath
|
Google Oneindia Kannada News

karnataka-illegal-mining-new-lokayukta-report-bjp-govt
ಬೆಂಗಳೂರು, ಅ.17: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಗಣಿಗಾರಿಕೆ ಕುರಿತ ತನಿಖೆಯನ್ನು ಸರ್ಕಾರ ನೂತನ ಲೋಕಾಯುಕ್ತರು ಅಧಿಕಾರ ಸ್ವೀಕರಿಸಿದ ತಕ್ಷಣ ಅವರಿಗೆ ವಹಿಸುವ ಸಾಧ್ಯತೆ ಇದೆ. ಇದರ ಜೊತೆಗೆ, ಕೆಲವು ಕಾಂಗ್ರೆಸ್ ಮುಖಂಡರು ಮಾಡಿದ್ದಾರೆ ಎನ್ನಲಾದ ಗ್ರಾನೈಟ್ ಗಣಿಗಾರಿಕೆ ಕೂಡ ಲೋಕಾಯುಕ್ತ ತನಿಖೆಗೆ ಒಳಪಡುವ ಸಂಭವ ಇದೆ ಎಂದು ತಿಳಿದುಬಂದಿದೆ.

ಈ ಹಿಮ್ಮೇಳದೊಂದಿಗೆ, ಯಾರು ಲೋಕಾಯುಕ್ತರಾದರೆ ತನಗೆ ಪ್ರಯೋಜನವಾದೀತು ಎಂದು ಎಣಿಕೆ ಹಾಕಿರುವ ರಾಜ್ಯ ಬಿಜೆಪಿ ಪಕ್ಷವು ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್.ಆರ್. ಬನ್ನೂರುಮಠ ಅವರು ನೂತನ ಲೋಕಾಯುಕ್ತರಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಿವೆ ಬಿಜೆಪಿ ಮೂಲಗಳು.

ವಿಧಾನಸಭಾ ಚುನಾವಣೆ 2013ರಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಆಡಳಿತಾವಧಿಯ ಗಣಿಗಾರಿಕೆ ಕುರಿತ ತನಿಖಾ ವರದಿಯನ್ನು ಆರರಿಂದ ಎಂಟು ತಿಂಗಳ ಅವಧಿಯಲ್ಲಿ ಸಲ್ಲಿಸುವಂತೆ ನೂತನ ಲೋಕಾಯುಕ್ತರಿಗೆ ಸೂಚನೆ ನೀಡುವ ಸಾಧ್ಯತೆ ಇದೆ. ಕಾಂಗ್ರೆಸ್ ಪ್ರಚಾರಾಂದೋಲನಕ್ಕೆ ತಡೆಹಾಕಲು ಆಗ ಲೋಕಾಯುಕ್ತ ವರದಿಯನ್ನು ಬಿಜೆಪಿ ಬಳಸಿಕೊಳ್ಳುವ ಸಾಧ್ಯತೆ ಇದೆ.

English summary
The Karnataka BJP govt is thinking in terms of opening the illegal mining cases during Congress govt. As such the govt may ask for a fresh report by new Lokayukta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X