ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಾಯಗತಾಯ ಕಾಂಗ್ರೆಸ್ಸನ್ನು ಗಣಿ ಖೆಡ್ಡಾಗೆ ಕೆಡವಲು ಬಿಜೆಪಿ ಸಂಕಲ್ಪ

By Srinath
|
Google Oneindia Kannada News

SM Krishna
ಬೆಂಗಳೂರು, ಅ.17: ಇತ್ತ ತಮ್ಮ ಅಧಿನಾಯಕ ಯಡಿಯೂರಪ್ಪ ಜೈಲಿಗೆ ಹೋಗುತ್ತಿದ್ದಂತೆ ಅತ್ತ ಕಾಂಗ್ರಸ್ ಅಧಿನಾಯಕರು ಶಿವಮೊಗ್ಗದಲ್ಲಿ ಥಕಥೈ ಎಂದು ಹೆಜ್ಜೆ ಹಾಕಿದ್ದಕ್ಕೆ ಆಡಳಿತಾರೂಢ ಬಿಜೆಪಿ ತೀವ್ರ ಅಸಮಾಧಾನಗೊಂಡಿದೆ. ಸೇಡು ತೀರಿಸಿಕೊಳ್ಳುವ ತವಕದಲ್ಲಿರುವ ಬಿಜೆಪಿ ಹೇಗಾದರೂ ಮಾಡಿ ಕಾಂಗ್ರೆಸ್ಸಿಗೆ ಪಾಠ ಕಲಿಸಲು ನಿರ್ಧರಿಸಿದೆ.

ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಡೆದಿದೆಯೆನ್ನಲಾದ ಅಕ್ರಮಗಳನ್ನು ಜನತೆಯ ಮಂದಿಡಲು ಸಿದ್ಧತೆ ನಡೆಸಿದೆ. ಅದರಲ್ಲೂ ಎಸ್.ಎಂ. ಕೃಷ್ಣ ಅವರ ಆಡಳಿತಾವಧಿಯಲ್ಲಿ (1999ರಿಂದ 2004ರವರೆಗೆ) ರಾಜ್ಯದಲ್ಲಿ ನಡೆದ ಗಣಿಗಾರಿಕೆ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ಸಂಸ್ಥೆಯನ್ನು ಕೋರಲಿ ಮುಂದಾಗಿದೆ.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ನೀಡಿದ್ದ ಅಂತಿಮ ವರದಿಯಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ್ದಾರೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ ಎಂಬುದು ಬಿಜೆಪಿ ವಾದ. ಆದ್ದರಿಂದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ನಡೆದ ಗಣಿಗಾರಿಕೆಯ ಕುರಿತೂ ವಿಸ್ತೃತ ತನಿಖೆ ನಡೆಸಲು ಆಸಕ್ತಿ ತೋರಿದೆ.

English summary
The Karnataka BJP govt is getting ready to implicate the SM Krishna Govt in the illegal mining cases. As such the govt may ask for a fresh report by new Lokayukta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X