ಅಮೃತಧಾರೆ ಸೀರಿಯಲ್ ಟ್ವಿಸ್ಟ್‌ಗೆ ಪ್ರೇಕ್ಷಕರು ಶಾಕ್: ಗೌತಮ್ ಅರೆಸ್ಟ್; ಮಿಂಚು ಮಿಸ್ಸಿಂಗ್, ಜೈದೇವ್ ಅಟ್ಟಹಾಸ
Amruthadhare Serial: ಅಮೃತಧಾರೆ ಸೀರಿಯಲ್‌ನಲ್ಲಿನ ಹೊಸ ತಿರುವುಗಳನ್ನು ನೋಡಿ ಪ್ರೇಕ್ಷಕರು ಶಾಕ್‌ಗೆ ಒಳಗಾಗಿದ್ದಾರೆ. ಅಮೃತಧಾರೆ ಸೀರಿಯಲ್‌ನಲ್ಲಿ ಇತ್ತೀಚಿನ ದಿನಗಳಲ್ಲಿನ ಎಪಿಸೋಡ್‌ನಲ್ಲಿ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್ ಬರುತ್ತಿದ್ದು ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಹಾಗೂ ಗೌತಮ್ ಅವರ ಮಗಳು ಮಿಂಚುನೇ ಎಂದು ಗೊತ್ತಾದ ಮೇಲೆ ಕೆಡಿ ಜೈದೇವ್ ಮಿಂಚುವನ್ನು ಕಿಡ್ನ್ಯಾಪ್ ಮಾಡಿದ್ದಾನೆ. ಮತ್ತೊಂದು ಕಡೆ ಜೈದೇವ್ ಬೇಬಿ ಕಥೆಯನ್ನೇ ಮುಗಿಸಿದ್ದಾನೆ ಎನ್ನುವಂತೆ ತೋರಿಸಲಾಗಿದೆ. ಮಿಂಚು ಸ್ವಂತ ಮಗಳು ಎನ್ನುವ ವಿಷಯ ತಿಳಿಯದೆ ಭೂಮಿಕಾ ಹಾಗೂ ಗೌತಮ್ ಮಿಂಚುವನ್ನು ಜೀವಾ-ಮಹಿಮಾಗೆ ದತ್ತು ಕೊಡುವುದಕ್ಕೆ ಮುಂದಾಗಿದ್ದರು. ಆದರೆ ಈ ರೀತಿ ಇರುವಾಗಲೇ ಬಿಗ್ ಟ್ವಿಸ್ಟ್‌ವೊಂದು ಎದುರಾಗಿದೆ. ಮೊದ ಮೊದಲು ಮಿಂಚುವನ್ನು ದತ್ತು ಕೊಡುವುದಕ್ಕೆ ಗೌತಮ್ ಮನಸ್ಸು ಒಪ್ಪಿಕೊಂಡಿರಲಿಲ್ಲ. ಆದರೆ, ಮಹಿಮಾ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಪ್ರಯತ್ನಿಸಿದ ಮೇಲೆ ಗೌತಮ್ ಮನಸ್ಸು ಕರಗಿತ್ತು.
ಮಿಂಚು ನಮ್ಮ ಮಗಳು ಎಂದ ದಂಪತಿ
ಗೌತಮ್ ಮತ್ತು ಭೂಮಿಕಾ ಅವರ ಮುದ್ದಿನ ಮಗಳು ಮಿಂಚು ವಿಷಯದಲ್ಲಿ ಹಲವು ಟ್ವಿಸ್ಟ್‌ಗಳು ಎದುರಾಗಿದೆ. ಅದರಲ್ಲಿ ಮೊದಲನೆಯದಾಗಿ ಮಿಂಚು ಕಾಣಿಸುತ್ತಿಲ್ಲ. ಅಲ್ಲದೆ ಅದೇ ಸಂದರ್ಭದಲ್ಲಿ ದಂಪತಿ ಬಂದು ಮಿಂಚು ನಮ್ಮ ಮಗಳು, ಇವರ ಬಳಿಯೇ ಇತ್ತು. ಈಗ ಕಾಣಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳಿರುವ ದೃಶ್ಯಗಳು ಇವೆ. ಮಿಂಚುವನ್ನು ಇನ್ನೇನು ದತ್ತು ಕೊಡಬೇಕು ಎನ್ನುವಾಗ ದೊಡ್ಡ ಟ್ವಿಸ್ಟ್ ಎದುರಾಗಿದೆ. ಗೌತಮ್ ಹಾಗೂ ಭೂಮಿಕಾ ಮನೆಗೆ ಬಂದಿರುವ ದಂಪತಿ ಮಿಂಚು ನಮ್ಮ ಮಗಳು ಎಂದು ಗೊತ್ತಾದ ಮೇಲೆ ಇವರು ಈ ರೀತಿ ನಾಟಕವಾಡುತ್ತಿದ್ದಾರೆ. ನಮ್ಮ ಮಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂದು ತಿಳಿದಿದೆ ಎಂದು ಅವಾಜ್ ಹಾಕಿ ಹೋಗಿದ್ದಾರೆ. ಮಿಂಚು ಎಲ್ಲಿ ಹೋಗಿದ್ದಾಳೆ ಎಂದು ಶಾಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕುವುದಕ್ಕೆ ಭೂಮಿಕಾ ಹೇಳಿದ್ದಾಳೆ.

ಮಗುವನ್ನು ಕೇಳಿಕೊಂಡು ಬರುತ್ತೇವೆ ಎಂದು ಗೊತ್ತಾದ ಮೇಲೆಯೇ ಈ ರೀತಿ ನಾಟಕವಾಡುತ್ತಿದ್ದಾರೆ ಎಂದೂ ದಂಪತಿ ದೂರಿದ್ದಾರೆ. ಇವರು ಸತ್ಯವನ್ನು ಮುಚ್ಚಿಡುತ್ತಿದ್ದಾರೆ ಎಂದು ಸಹ ಆರೋಪಿಸಲಾಗಿದೆ. ಅಲ್ಲದೆ ಆ ಮಗುವನ್ನು ದತ್ತು ಕೊಡುವುದಕ್ಕೆ ಮುಂದಾಗುತ್ತಿದ್ದಾರೆ. ನಾವು ಆ ಮಗುವಿನ ವಾರಸುದಾರರು ಇವರು ಹೇಗೆ ಮಗುವನ್ನು ದತ್ತು ಕೊಡುವುದಕ್ಕೆ ಸಾಧ್ಯ ಎಂದ ಮಿಂಚುವಿನ ಅಪ್ಪ ಎಂದು ನಾಟಕವಾಡುತ್ತಿರುವ ವ್ಯಕ್ತಿ ಹೇಳಿದ್ದಾನೆ. ಇದನ್ನು ಕೇಳಿದ ಭೂಮಿಕಾ - ಗೌತಮ್ ಹಾಗೂ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ. ಈಚೆಗಷ್ಟೇ ಮಿಂಚು ಗೌತಮ್ ಮತ್ತು ಭೂಮಿಕಾ ಮಗಳು ಎನ್ನುವ ಸತ್ಯಾಂಶ ಗೊತ್ತಾಗಿತ್ತು. ಆದರೆ ಮಗು ಸಿಕ್ಕಿದೆ ಎಂದು ಸಂಭ್ರಮಿಸುವ ಸಂದರ್ಭದಲ್ಲಿಯೇ ಶಾಕ್ ಎದುರಾಗಿದೆ.
ಆ ಮಗು ಸಿಕ್ಕಿದ್ದು ನನಗೆ ನಾನು ಪೊಲೀಸರಿಗೆ ದೂರು ಸಹ ಕೊಟ್ಟಿದ್ದೆ. ಆದರೆ ಇಷ್ಟು ವರ್ಷ ಯಾರೂ ಆ ಮಗುವನ್ನು ಹುಡುಕಿಕೊಂಡು ಬಂದಿರಲಿಲ್ಲ ಎಂದು ಗೌತಮ್ ಹೇಳಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿರುವಂತೆ ಪೊಲೀಸರು ಹೇಳಿದ್ದಾರೆ. ಮಗು ಸಿಗುವ ವರೆಗೂ ನಿಮ್ಮನ್ನು ಕಸ್ಟಡಿಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ನಮ್ಮ ಕೆಲಸವನ್ನು ಮಾಡುವುದಕ್ಕೆ ಬಿಡಿ ಎಂದು ಪೊಲೀಸರು ಹೇಳಿದ್ದಾರೆ. ನಿಮಗೆ ಜನಿಸಿದ ಹೆಣ್ಣು ಮಗುವಿನಿಂದ ನಿಮಗೆ ಕಂಟಕ ಎಂದು ಜ್ಯೋತಿಷಿ ಈಚೆಗೆ ಹೇಳಿದ್ದನ್ನು ಭೂಮಿಕಾ ನೆನಪಿಸಿಕೊಂಡಿದ್ದಾಳೆ.
ಮುಂದುವರಿದ ಕೆಡಿ ಜೈದೇವ್ ಅಟ್ಟಹಾಸ
ಇನ್ನು ಮತ್ತೊಂದು ಕಡೆ ಕೆಡಿ ಜೈದೇವ್ ಅಟ್ಟಹಾಸ ಮುಂದುವರಿದಿದೆ. ಮಿಂಚುವನ್ನು ಜೈದೇವ್ ಕಿಡ್ನ್ಯಾಪ್ ಮಾಡಿದ್ದಾನೆ. ಮಿಂಚುವಿಗೆ ಬೆದರಿಕೆ ಹಾಕಿದ್ದಾನೆ. ನೀನು ಹುಟ್ಟಿದಾಗಿನಿಂದಲೇ ನನಗೂ ನಿನಗೂ ಕನೆಕ್ಷನ್ ಇದೆ ಅಂತ ಜೈದೇವ್ ಹೇಳಿದ್ದಾನೆ. ನಿನ್ನನ್ನು ಸೇಫ್ ಆಗಿ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ನಿನ್ನನ್ನು ಕರೆದುಕೊಂಡು ಹೋಗುವುದಕ್ಕೆ ಒಬ್ಬರು ಬರುತ್ತಾರೆ ಅಂತ ಜೈದೇವ್ ಹೇಳಿದ್ದಾನೆ.












Click it and Unblock the Notifications