ಅಮೆರಿಕದ ವರನ ವರಿಸುತ್ತಿರುವ ಅರ್ಜುನ್ ಸರ್ಜಾ ಮಗಳು, ಅಳಿಯ ಸನಾತನಿನೇ ಎಂದ ನೆಟ್ಟಿಗರು

Arjun Sarja: ನಟ ಅರ್ಜುನ್ ಸರ್ಜಾ ಅವರ ಮಗಳು ಅಮೆರಿಕದ ವರನ ವರಿಸುತ್ತಿದ್ದಾರೆ ಎನ್ನಲಾಗಿದ್ದು, ಈ ವಿಷಯವು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅರ್ಜುನ್ ಸರ್ಜಾ ಅವರು ತಮ್ಮ ಕುಟುಂಬದಲ್ಲಿ ನಡೆಯುತ್ತಿರುವ ವಿಶೇಷ ಕಾರ್ಯಕ್ರಮವೊಂದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಇದೇ ಅಕ್ಟೋಬರ್‌ನಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ವರ ಅಮೆರಿಕನ್ ಪ್ರಜೆ ಆಗಿದ್ದು, ವಿದೇಶದಲ್ಲಿ ಅವಳೊಂದಿಗೆ ಅಧ್ಯಯನ ಮಾಡಿದ್ದರು. ಇಬ್ಬರ ನಡುವಿನ ಸ್ನೇಹವು ಪ್ರೀತಿಯಾಗಿ ಬದಲಾಗಿದೆ. ಸ್ನೇಹ ಮತ್ತು ಆತ್ಮೀಯತೆಯೊಂದಿಗಿನ ಅನುಭವಗಳ ಮೂಲಕ ಬೆಳೆದ ಸಂಬಂಧ ಇದಾಗಿದೆ ಎಂದು ಅವರು ಹೇಳಿಕೊಂಡಿದೆ.

ಈ ವಿಚಾರವನ್ನು ಹಾಸ್ಯಮಯವಾಗಿಯೇ ಅರ್ಜುನ್ ಸರ್ಜಾ ಅವರು ಹಂಚಿಕೊಂಡಿದ್ದಾರೆ. ತಮ್ಮ ಅಳಿಯಂದಿರ ಬಗ್ಗೆ ಮಾತನಾಡುತ್ತಾ, ಇಬ್ಬರೂ ಎತ್ತರ ಮತ್ತು ಉತ್ತಮ ಮೈಕಟ್ಟು ಹೊಂದಿದ್ದಾರೆ ಎಂದು ಅವರು ತಮಾಷೆಯಾಗಿ ಹೇಳಿದ್ದಾರೆ. ಬಹುಶಃ ಇಬ್ಬರು ಹೆಣ್ಣುಮಕ್ಕಳು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಅವರಿಂದ ಸ್ಫೂರ್ತಿ ಪಡೆದಿರಬಹುದು ಎಂದು ಹೇಳಿದ್ದಾರೆ.

Arjun Sarja

ಅರ್ಜುನ್ ಸರ್ಜಾ ಅವರು ಖುಷಿಯ ವಿಚಾರವನ್ನು ಹಂಚಿಕೊಂಡಿದ್ದರೂ ಸಹ ಕೆಲವು ನೆಟ್ಟಿಗರು ಅರ್ಜುನ್ ಸರ್ಜಾ ಅವರು ಈಚೆಗೆ ಸನಾತನ ಧರ್ಮದ ಬಗ್ಗೆ ಕೊಟ್ಟಿದ್ದ ಹೇಳಿಕೆಯೊಂದಿಗೆ ಹೋಲಿಕೆ ಮಾಡಿದ್ದಾರೆ. ಅರ್ಜುನ್ ಸರ್ಜಾ ಅವರ ಅಳಿಯ ಸನಾತನಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅರ್ಜುನ್ ಸರ್ಜಾ ಅವರು ಇತ್ತೀಚೆಗೆ ಸನಾತನ ಧರ್ಮದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರು, ಅಲ್ಲದೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ಗೆ ತಿರುಗೇಟು ನೀಡುವಂತೆ ಪ್ರತಿಕ್ರಿಯೆ ಕೊಟ್ಟಿದ್ದರು.

ಅರ್ಜುನ್ ಸರ್ಜಾ ಅವರು ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ ಈಚೆಗೆ ನೀಡಿದ್ದ ಹೇಳಿಕೆಯು ಭಾರೀ ವೈರಲ್ ಆಗಿತ್ತು. ಅಲ್ಲದೆ ಸನಾತನ ಧರ್ಮ ಎನ್ನುವುದು ಜೀವನ ಶೈಲಿಯೇ ಆಗಿದೆ. ಸನಾತನ ಧರ್ಮ ಬೇಡ ಎಂದಾದರೆ ನಿಮ್ಮ ತಂದೆ - ತಾಯಿಯನ್ನು ವಯಸ್ಸಾದ ಕಾಲದಲ್ಲಿ ಮನೆಯಿಂದ ಹೊರದೂಡುವಿರಾ ಎಂದು ಆಕ್ಷ್ಯನ್ ಹೀರೋ ಅರ್ಜುನ್ ಸರ್ಜಾ ಅವರು ಪ್ರಶ್ನೆ ಮಾಡಿದ್ದರು. ಅಲ್ಲದೆ ಸನಾತನ ಧರ್ಮ ಎನ್ನುವುದು ನಮ್ಮ ಜೀವನ ಶೈಲಿ, ಸುಳ್ಳು ಹೇಳಬೇಡಿ - ಕಳ್ಳತನ ಮಾಡಬೇಡಿ ಎಂದು ಹೇಳುವುದೇ ಆಗಿದೆ ಎಂದು ಅರ್ಜುನ್ ಸರ್ಜಾ ಅವರು ಹೇಳಿದ್ದರು.

ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಇದೇ ಹೇಳಿಕೆಯ ಮೇಲೆ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಅಮೆರಿಕಾದ ಪ್ರಜೆಯೊಬ್ಬರನ್ನು ಅಳಿಯನನ್ನಾಗಿ ಮಾಡಿಕೊಳ್ಳುವುದಕ್ಕೆ ಸನಾತನ ಧರ್ಮ ಅವಕಾಶ ನೀಡುತ್ತದೆಯೇ ಎಂದು ನೆಟ್ಟಿಗರು ಕೇಳಿದ್ದಾರೆ. ಸನಾತನ ಧರ್ಮ ಇತರರಿಗೆ ಮಾತ್ರ ಇತ್ತು ಮತ್ತು ಅವರಿಗೆ ಅಲ್ಲ ಅವರು ಕ್ರಿಶ್ಚಿಯನ್ ಅಥವಾ ಮುಸ್ಲಿಂ ಅವರನ್ನು ಮದುವೆಯಾಗಬಹುದು ಆದರೆ ನೀವು ಸನಾತನ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+