Kiccha Sudeep: ಈ ವರ್ಷ ಬೇಗ ಪ್ರಾರಂಭವಾಗ್ತಿದೆ ಕನ್ನಡಿಗರ ಹಬ್ಬ: BBK-13 ಪ್ರೋಮೋ ಇಲ್ಲಿದೆ

Kiccha Sudeep: ಕನ್ನಡ ಭರ್ಜರಿ ಹಾಗೂ ಅಪಾರ ಮನ್ನಣೆ ಗಳಿಸಿರುವ ಬಿಗ್‌ಬಾಸ್‌ ಸೀಸನ್ ಪ್ರಾರಂಭವಾಗುವುದಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಸಂಬಂಧ ಕಲರ್ಸ್ ಕನ್ನಡ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವರ್ಷ ಬೇಗ ಪ್ರಾರಂಭವಾಗುತ್ತಿದೆ ಕನ್ನಡಿಗರ ಹಬ್ಬ... With something special! ಎನ್ನುವ ಶೀರ್ಷಿಕೆಯೊಂದಿಗೆ ಬಿಗ್‌ಬಾಸ್ ಕನ್ನಡ ಸೀಸನ್ 13ರ ಪ್ರೋಮೋ ಹಂಚಿಕೊಳ್ಳಲಾಗಿದೆ. ಕನ್ನಡದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ರಿಯಾಲಿಟಿ ಶೋ 12 ಸೀಸನ್‌ಗಳು ಮುಕ್ತಾಯವಾಗಿದೆ. ಕಳೆದ ಬಾರಿಯ ಸೀಸನ್ ಹಲವು ಕಾರಣಕ್ಕೆ ಗಮನ ಸೆಳೆದಿತ್ತು. ಈ ಬಾರಿ ಬಿಗ್‌ಬಾಸ್ ರಿಯಾಲಿಟಿ ಶೋವನ್ನು ಯಾರು ನಡೆಸಿಕೊಡಲಿದ್ದಾರೆ ಎನ್ನುವುದು ಸೇರಿದಂತೆ ಹಲವು ಕಾರಣಗಳಿಗೆ ವಿಶೇಷವೆನಿಸಿದೆ. ಇದರೊಂದಿಗೆ ಕಲರ್ಸ್ ಕನ್ನಡವು ಈ ವರ್ಷ ಬೇಗ ಪ್ರಾರಂಭವಾಗುತ್ತಿದೆ ಕನ್ನಡಿಗರ ಹಬ್ಬ ಅದು ಸಹ ಈ ಬಾರಿ ವಿಶೇಷವಾದದ್ದು ಇರಲಿದೆ ಎಂದು ಹೇಳಿರುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಬಿಗ್ ಬಾಸ್ ಸೀಸನ್‌ 12 ಮುಕ್ತಾಯವಾಗಿ ಇನ್ನೂ ಆರೂ ತಿಂಗಳು ಸಹ ಆಗಿಲ್ಲ. ಅಷ್ಟರಲ್ಲೇ ಮತ್ತೊಂದು ಸೀಸನ್‌ಗೆ ಕಲರ್ಸ್ ಕನ್ನಡ ರೆಡಿಯಾಗಿದೆ. ವಿವಾದ ಹಾಗೂ ಮನರಂಜನೆಗಳ ಕಾರಣಕ್ಕೆ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಸಿದ್ಧಿ ಗಳಿಸಿದೆ. ಕಳೆದ ಬಾರಿಯ ಬಿಗ್‌ಬಾಸ್ ಹಲವು ಕಾರಣಗಳಿಗೆ ಸುದ್ದಿಯಲ್ಲಿತ್ತು.

Kichcha Sudeep

ಅಲ್ಲದೆ ಬಿಗ್‌ಶೋ ಪ್ರಸಾರ ಹಾಗೂ ಕಾರ್ಯಕ್ರಮ ನಡೆಯುವ ಪ್ರದೇಶದ ಬಗ್ಗೆಯೂ ವಿವಾದ ಹಾಗೂ ಕೆಲವೊಂದು ಸಮಸ್ಯೆಗಳು ಸಹ ಎದುರಾಗಿದ್ದವು. ಈಗ ಎಲ್ಲಾ ಮಾದರಿಯ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡು ಹೊಸ ಶೋ ಪ್ರಾರಂಭಿಸುವುದಕ್ಕೆ ಬಿಗ್‌ಬಾಸ್ ತಂಡ ಸಿದ್ಧವಾಗುತ್ತಿದೆ. ಸಾಮಾನ್ಯವಾಗಿ ಬಿಗ್‌ಬಾಸ್ ರಿಯಾಲಿಟಿ ಶೋ ಸೆಪ್ಟೆಂಬರ್, ಅಕ್ಟೋವರ್ ತಿಂಗಳಲ್ಲಿ ಪ್ರಾರಂಭದಲ್ಲಿ ಶುರುವಾಗುತ್ತಿತ್ತು. ಆದರೆ ಇದೀಗ ಬಿಗ್‌ಬಾಸ್ ರಿಯಾಲಿಟಿ ಶೋ ನಿರೀಕ್ಷೆಗೂ ಮೊದಲ ಶುರುವಾಗುತ್ತಿರುವುದು ವಿಶೇಷವಾಗಿದೆ.

ಕಲರ್ಸ್ ಕನ್ನಡ ಯಾವುದೇ ಸುಳಿವನ್ನು ಕೊಡದೆಯೇ ವೀಕ್ಷಕರಿಗೆ ದೊಡ್ಡ ಸರ್ಪ್ರೈಸ್ ಕೊಟ್ಟಿದೆ. 'ಬಿಗ್ ಬಾಸ್ ಕನ್ನಡ ಸೀಸನ್ 13' (BBK13) ರ ಮೊದಲ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಈ ಪ್ರೋಮೋ ನೋಡಿರುವ ಕನ್ನಡಿಗರು ಅಚ್ಚರಿ ಹಾಗೂ ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಸುದ್ದಿಯನ್ನು ಕೇಳಿ ಸಂತೋಷದಿಂದ ಕುಣಿದಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯೂ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಿಗ್‌ಬಾಸ್ ಸೀಸನ್ 13ರ ಪ್ರೋಮೊವನ್ನು ರಿಲೀಸ್ ಮಾಡಿದೆ. ಈ ವರ್ಷ ಬೇಗನೇ ಶೋ ಶುರುವಾಗುತ್ತಿದೆ ಎಂಬ ಸುಳಿವನ್ನು ಸಹ ಕೊಡಲಾಗಿದೆ.

'ಗೋಲ್ಡನ್' ಥೀಮ್

ಕನ್ನಡದಲ್ಲಿ 13ನೇ ಸೀಸನ್ ಇಷ್ಟು ಬೇಗ ಆರಂಭವಾಗುತ್ತಿದೆ ಎನ್ನುವುದನ್ನು ಪ್ರೇಕ್ಷಕರು ಸಹ ಕುತೂಹಲದಿಂದ ನೋಡುತ್ತಿದ್ದಾರೆ. ಈ ಬಾರಿಯ ಶೋವನ್ನು ಸಹ ಕಿಚ್ಚ ಸುದೀಪ್ ಅವರೇ ನಡೆಸಿಕೊಡುವುದು ಬಹುತೇಕ ಖಚಿತವಾಗಿದೆ. ಕಲರ್ಸ್ ಕನ್ನಡ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹೊಸ ಮಾದರಿಯ ಹಾಗೂ 'ಗೋಲ್ಡನ್' ಥೀಮ್ ಪ್ರೋಮೋ ಹಂಚಿಕೊಂಡಿದೆ. ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕಿಚ್ಚ ಕಾಣಿಸಿಕೊಂಡಿಲ್ಲ, ಚಿನ್ನದ ಥೀಮ್‌ನಲ್ಲಿದೆ. ಬಿಗ್ ಬಾಸ್ 13ಕ್ಕೂ ಚಿನ್ನದ ಬಣ್ಣಕ್ಕೂ ಏನೋ ಲಿಂಕ್ ಇದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಹೊಸ ಪ್ರೋಮೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+