ಟೀಮ್ ಇಂಡಿಯಾಗೆ ಬಿಗ್ ಶಾಕ್: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಕೊಹ್ಲಿ ಔಟ್? ವಿರಾಟ್ ಸ್ಥಾನ ತುಂಬುವವರು ಯಾರು?
Virat Kohli: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾ ಕ್ರಿಕೆಟ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಗಾಯದ ಕಾರಣದಿಂದ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಸರಣಿಯಿಂದ ಹೊರಗುಳಿದರೆ ಬದಲಿ ಆಟಗಾರನನ್ನಾಗಿ ಯಾರನ್ನ ಆಡಿಸುವ ಸಾಧ್ಯತೆಯಿದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ವಿನ್ನಿಂಗ್ ರನ್ ಬಾರಿಸಿದ್ದೂ ಕೊಹ್ಲಿಯೇ ಆಗಿದ್ದರು. ಇಡೀ ಸರಣಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ಅವರು 675 ರನ್ ಗಳಿಸಿದ್ದರು. ಈ ಹೈ-ವೋಲ್ಟೇಜ್ ಫೈನಲ್ ಪಂದ್ಯದ ಅವಧಿಯಲ್ಲೇ ಅವರು ಗಾಯಕ್ಕೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.

ಏಕದಿನ ಸರಣಿಯಿಂದ ಕೊಹ್ಲಿ ಔಟ್..
'ವಿರಾಟ್ ಕೊಹ್ಲಿ ಅವರು ಗಾಯದ ಕಾರಣದಿಂದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಫೈನಲ್ ಪಂದ್ಯದ ವೇಳೆ ಅವರು ಗಾಯಗೊಂಡಿದ್ದರು. ಸ್ಕ್ಯಾನಿಂಗ್ ವರದಿಯಲ್ಲಿ ಅವರ ಮೊಣಕಾಲಿನ ಹಿಂಭಾಗದಲ್ಲಿ ತೀವ್ರ ಹಾನಿಯಾಗಿರುವುದು ದೃಢಪಟ್ಟಿದೆ,' ಎಂದು ಬಿಸಿಸಿಐ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದೆ ಎಂತಾ ವರದಿಯಾಗಿದೆ.
ಆದ್ದರಿಂದ ಮುಂಬರುವ ಅಫ್ಘಾನಿಸ್ತಾನ ಸರಣಿಯಲ್ಲಿ ಕೊಹ್ಲಿ ಅವರ ಸ್ಥಾನಕ್ಕೆ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಋತುರಾತ್ ಗಾಯಕ್ವಾಡ್ ಅವರು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ 'ಎ' ತಂಡದ ಭಾಗವಾಗಿದ್ದಾರೆ. ಒಂದು ವೇಳೆ ಗಾಯಕ್ವಾಡ್ ಅವರನ್ನು ಮುಖ್ಯ ತಂಡಕ್ಕೆ ಆಯ್ಕೆ ಮಾಡಿದ್ದೇ ಆದಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ಒಳಗೊಂಡ ತ್ರಿಕೋನ ಸರಣಿಯ ಭಾರತ 'ಎ' ತಂಡದಲ್ಲಿ ರಜತ್ ಪಾಟೀದಾರ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ರೋಹಿತ್ ಶರ್ಮಾ ಲಭ್ಯತೆಯೂ ಅನುಮಾನ
ಮತ್ತೊಂದೆಡೆ ನಾಯಕ ರೋಹಿತ್ ಶರ್ಮಾ ಅವರ ಲಭ್ಯತೆಯ ಬಗ್ಗೆ ಅನುಮಾನಗಳು ವಕ್ತವಾಗಿವೆ. ಏಕೆಂದರೆ ಐಪಿಎಲ್ ಸಮಯದಲ್ಲೇ ಸ್ನಾಯು ಸೆಳೆತಕ್ಕೆ ತುತ್ತಾಗಿದ್ದ ರೋಹಿತ್ ಶರ್ಮಾ ಅವರನ್ನು ಫಿಟ್‌ನೆಸ್ ಆಧಾರದ ಮೇಲೆ ಸರಣಿಗೆ ಹೆಸರಿಸಲಾಗಿದೆ. ಆದರೂ ಅವರು ಸಂಪೂರ್ಣ ಸರಣಿಗೆ ಲಭ್ಯವಿರುತ್ತಾರೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಭಾರತ-ಅಫ್ಘಾನಿಸ್ತಾನ 3 ಪಂದ್ಯಗಳ ಏಕದಿನ ಸರಣಿ ವೇಳಾಪಟ್ಟಿ
* ಮೊದಲ ಏಕದಿನ ಪಂದ್ಯ: ಜೂನ್ 14, 2026 (ಧರ್ಮಶಾಲಾ)
* ಎರಡನೇ ಏಕದಿನ ಪಂದ್ಯ: ಜೂನ್ 17, 2026 (ಲಕ್ನೋ)
* ಮೂರನೇ ಏಕದಿನ ಪಂದ್ಯ: ಜೂನ್ 20, 2026 (ಚೆನ್ನೈ)
ಸಾಮಾನ್ಯವಾಗಿ ಅತಿ ಹೆಚ್ಚು ಫಿಟ್‌ನೆಸ್ ಕಾಯ್ದುಕೊಳ್ಳುವ ವಿರಟ್ ಕೊಹ್ಲಿ ಅವರು ಗಾಯದ ಕಾರಣದಿಂದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವುದು ತೀರಾ ಅಪರೂಪ. ಸದ್ಯ ಅವರು ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಮುಂದುವರಿದಿರುವುದರಿಂದ ಅವರ ಅಲಭ್ಯತೆ ಈ ಸರಣಿಯ ಕಳೆಯನ್ನು ತುಸು ಕುಗ್ಗಿಸಿದೆ. ಈ ಸರಣಿಯ ನಂತರ ಭಾರತ ತಂಡವು ಜುಲೈ 14ರಿಂದ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ
* ಮೊದಲ ಏಕದಿನ ಪಂದ್ಯ: ಜುಲೈ 14, 2026 (ಎಡ್ಜ್‌ಬಾಸ್ಟನ್, ಬರ್ಮಿಂಗ್‌ಹ್ಯಾಮ್)
* ಎರಡನೇ ಏಕದಿನ ಪಂದ್ಯ: ಜುಲೈ 16, 2026 (ಸೋಫಿಯಾ ಗಾರ್ಡನ್ಸ್, ಕಾರ್ಡಿಫ್)
* ಮೂರನೇ ಏಕದಿನ ಪಂದ್ಯ: ಜುಲೈ 19, 2026 (ಲಾರ್ಡ್ಸ್ ಕ್ರಿಕೆಟ್ ಮೈದಾನ, ಲಂಡನ್)












Click it and Unblock the Notifications