Silk Board-KR Puram Metro Line: ಪ್ರಯಾಣಿಕರಿಗೆ ಗುಡ್‌ನ್ಯೂಸ್, ಮೊದಲ ಡ್ರೈವರ್‌ಲೆಸ್ ನೀಲಿ ಮೆಟ್ರೋ ಆಗಮನ

ಬೆಂಗಳೂರು: ಬೆಂಗಳೂರು ನಮ್ಮ ನೀಲಿ ಮಾರ್ಗದ ಕಾಮಗಾರಿ ಬರದಿಂದ ಸಾಗುತ್ತಿದೆ. ಸುಮಾರು 58 ಕಿಲೋ ಮೀಟರ್ ಉದ್ದದ ಮಾರ್ಗವನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ಮೊದಲ ಹಂತವನ್ನು ಇದೇ 2026 ಡಿಸೆಂಬರ್‌ ವೇಳೆಗೆ ಲೋಕಾರ್ಪಣೆಗೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಇದರ ಬೆನ್ನಲ್ಲೆ ಬೆಂಗಳೂರಿನ ಬೈಯಪ್ಪನಹಳ್ಳಿ ಡಿಪೋಗೆ 'ನೀಲಿ ಮಾರ್ಗ'ದ ಮೊದಲ ಡ್ರೈವರ್‍‌ಲೆಸ್ ರೈಲಿನ ಸೆಟ್ (6 ಬೋಗಿ) ಆಗಮಿಸಿವೆ.

ಬೆಂಗಳೂರು ಅರ್ಥ್ ಮೂವರ್ಸ್ ಲಿಮಿಟೆಡ್ (BEML) ತಯಾರಿಸಿದ ನೀಲಿ ಮೆಟ್ರೋ ಇದಾಗಿದೆ. ಲಾರಿ ಮೂಲಕ ಮೆಟ್ರೋ ಡಿಪೋಗೆ ಬಂದ ಮೊದಲ ರೈಲನ್ನು ಇಳಿಸಿ ಗುರುವಾರ ಜೋಡಿಸಲಾಗಿದೆ. ಈ ಮೂಲಕ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮುಂದಿನ ದಿನಗಳಲ್ಲಿ ಆದಷ್ಟು ಶೀಘ್ರವೇ ಈ ರೈಲಿನ ಸಂಪೂರ್ಣ ತಪಾಸಣೆ, ಪ್ರಾಯೋಗಿಕ ಸಂಚಾರ ನಡೆಸಲಿದೆ ಎಂದು ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

Namma Metro Blue Line

ಸಿಲ್‌ಬೋರ್ಡ್‌ವರೆಗೆ ಕಾಮಗಾರಿ ಪೂರ್ಣವಾಗಿದ್ದೆಷ್ಟು?

ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಂವರೆಗೆ ಹಂತ 2A ಅನ್ನು (19.75 ಕಿಲೋ ಮಿಟರ್) ಇದೇ ವರ್ಷ 2026 ಡಿಸೆಂಬರ್‍‌ನಲ್ಲಿ ಉದ್ಘಾಟಿಸಲು ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಅದರ ಪೂರ್ವ ತಯಾರಿ, ಅಂತಿಮ ಕಾಮಗಾರಿಗಳು ನಡೆಯುತ್ತಿವೆ. ಲೋಕಾರ್ಪಣೆಯ ಸಿದ್ಧತೆಯ ಭಾಗವಾಗಿ ಮೊದಲ ಮೆಟ್ರೋ ರೈಲು ಆಗಮಿಸಿದೆ. ಈ ಮಾರ್ಗದ ಒಟ್ಟು ಕಾಮಗಾರಿ 86.37ರಷ್ಟು (ಏಪ್ರಿಲ್ 26ರವರೆಗೆ) ಪೂರ್ಣಗೊಂಡಿದೆ. ಜೂನ್ ಹೊತ್ತಿಗೆ ಇನ್ನಷ್ಟು ಕೆಲಸಗಳು ನಡೆದಿದ್ದು, ಮುಂದಿನ ಐದುವರೆ ತಿಂಗಳಲ್ಲಿ ಎಲ್ಲ ಕೆಲಸಗಳು ಮುಗಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

Namma Metro: ಸಂಚಾರ ನಿರ್ಬಂಧ ಹಿನ್ನೆಲೆ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ
Namma Metro: ಸಂಚಾರ ನಿರ್ಬಂಧ ಹಿನ್ನೆಲೆ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ

ನೀಲಿ ಮಾರ್ಗದ 2ಬಿ ಹಂತದ ಕಾಮಗಾರಿ ಪ್ರಗತಿ

ಬೆಂಗಳೂರು ಏರ್‍‌ಪೋರ್ಟ್‌ವರೆಗೆ ನೀಲಿ ಮಾರ್ಗದ ಕೆಲಸ ಬರದಿಂದ ಸಾಗಿದೆ. ಪಿಲ್ಲರ್ ನಿರ್ಮಾಣ ಮುಗಿದಿದ್ದು, ಮೆಟ್ರೋ ನಿಲ್ದಾಣ ಕಾಮಗಾರಿ ನಡೆದಿದೆ. ವಯಾಡಕ್ಟ್ ಅಳವಡಿಸಲಾಗುತ್ತಿದೆ. ಸಿಲ್ಕ್‌ಬೋರ್ಡ್‌ ಹಳದಿ ಮಾರ್ಗದಿಂದ 2ಎ ಹಂತದ ನೀಲಿ ಮಾರ್ಗವು ಸಂಪರ್ಕ ಪಡೆದುಕೊಳ್ಳುತ್ತದೆ. ಇಲ್ಲಿ ಇಂಟರ್‍‌ಚೇಂಜ್ ನಿಲ್ದಾಣ ತಲೆ ಎತ್ತಲಿದೆ. ಲೋಕಾರ್ಪಣೆ ಬಳಿಕ ಎಚ್‌ಎಸ್‌ಆರ್‍‌, ಆಗರ, ಕಾಡುಬೀಸನಹಳ್ಳಿ, ಮಹಾದೇವಪುರ ಮೂಲಕ ಹೊರವರ್ತುಲ ರಸ್ತೆ ಮಾರ್ಗವಾಗಿ ಜನನಿಬಿಡ ಸ್ಥಳ ಕೆ.ಆರ್‍‌.ಪುರಂವರೆಗೆ ಸಂಚಾರ ಮಾಡಬಹುದಾಗಿದೆ. ಸದ್ಯ ಒಂದು ರೈಲು ಆಗಮಿಸಿದ್ದು, ಡಿಸೆಂಬರ್ ಹೊತ್ತಿಗೆ ಬಿಇಎಂಎಲ್ ಇನ್ನಷ್ಟು ರೈಲುಗಳನ್ನು ಪೂರೈಸಲಿದೆ.

60 ರೈಲುಗಳ ಪೂರೈಕೆಗೆ 3177 ಕೋಟಿ ರೂ ಒಪ್ಪಂದ

ನೀಲಿ ಮೆಟ್ರೋ ರೈಲುಗಳನ್ನು ಉತ್ಪಾದಿಸಿ ಒದಗಿಸುಂತೆ ಬೆಂಗಳೂರು ಮೆಟ್ರೋ ರೈಲು ನಿಗಮವು ಸುಮಾರು 3177 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ. ಒಟ್ಟು 60 ಚಾಲಕ ರಹಿತ ಮೆಟ್ರೋಗಳನ್ನು ಒದಗಿಸಲಿದೆ. ಸದ್ಯಕ್ಕೆ ಯಾವುದೇ ಮಾರ್ಗದಲ್ಲಿ ಡ್ರೈವರ್‍‌ಲೆಸ್ ರೈಲುಗಳು ನಿಯೋಜನೆಗೊಂಡರು ಚಾಲಕ ಸಹಿತವಾಗಿಯೇ ಓಡಾಡಲಿವೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+