ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಂ ಹೊಸ ಮಂಡಳಿ ಮೊದಲ ಸುದ್ದಿಗೋಷ್ಠಿ

By Staff
|
Google Oneindia Kannada News

ಹೈದರಾಬಾದ್, ಜ. 12 : ಸತ್ಯಂ ಕಂಪನಿಯಲ್ಲಿ ನಡೆದ ಅವ್ಯವಹಾರ ನಂತರ ಕೇಂದ್ರ ಸರ್ಕಾರದಿಂದ ರಚಿತಗೊಂಡಿರುವ ಮೂವರನ್ನೊಳಗೊಂಡ ನಿರ್ದೇಶಕ ಮಂಡಳಿ ಜಂಟಿಯಾಗಿ ಇಂದು ಸಂಜೆ ನಡೆಸಿದ ಪತ್ರಿಕಾಗೋಷ್ಠಿಯ ಸಾರಾಂಶ. ನಾಸ್ಕಾಂ ಮಾಜಿ ಅಧ್ಯಕ್ಷ ಕಿರಣ ಕಾರ್ನೀಕ್, ಎಚ್ ಡಿ ಎಫ್ ಸಿ ಚೇರಮನ್ ದೀಪಕ್ ಪಾರೇಖ್ ಹಾಗೂ ಸೆಬಿಯ ಮಾಜಿ ಸದಸ್ಯ ಸಿ ಅಚ್ಯುತನ್ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.

ಸತ್ಯಂ ಕಂಪನಿ ಭಾರತದ ನಾಲ್ಕನೇ ಪ್ರತಿಷ್ಠಿತ ಸಾಫ್ಟವೇರ್ ಸಂಸ್ಥೆ ಎಂಬ ಹೆಗ್ಗಳಿಕೆ ಕಾರಣವಾಗಿತ್ತು. ಆದರೆ ನಾನಾ ಕಾರಣಗಳಿಂದ ಇಂದು ಶೋಚನೀಯ ಸ್ಥಿತಿ ತಲುಪಿದೆ ಎಂದು ವಿಷಾದಿಸಿದ ದೀಪಕ್ ಪಾರೇಖ್, ಸತ್ಯಂ ಕಂಪನಿಯು ಮೊದಲಿನಂತೆ ಸರಳವಾಗಿ ಕಾರ್ಯನಿರ್ವಹಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಆದರೆ, ಇದು ನೂತನವಾಗಿ ಆಯ್ಕೆಯಾಗುವ ಆಡಳಿತ ಮಂಡಳಿಗೆ ಸವಾಲಿನ ಕೆಲಸವೇ ಆಗಿದೆ ಪಾರೇಖ್ ಹೇಳಿದರು.

ಮುಂದಿನ 48 ಗಂಟೆಗಳಲ್ಲಿ ಸ್ವಾತಂತ್ರ್ಯ ಅಕೌಂಟ್ ಗಳನ್ನು ನೇಮಿಸಲಾಗುವುದು. ಅದರ ಜೊತೆಗೆ ನೂತನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಹಣಕಾಸು ವಿಭಾಗದ ಮುಖ್ಯಸ್ಥರನ್ನು ನೇಮಿಸಿಕೊಳ್ಳಲಾಗುವುದು. ಕಂಪನಿಗೆ ಹೊಸ ಅಡಿಟರ್ ಗಳನ್ನು ಸಹ ನೇಮಿಸಲಾಗುವುದು ಎಂದು ಪಾರೇಖ್ ಹೇಳಿದರು.

ಸತ್ಯಂ ಕಂಪನಿಯ ವ್ಯವಹಾರಗಳ ಬಗ್ಗೆ ಸಂಪೂರ್ಣ ಗಮನ ಹರಿಸಲಾಗಿದೆ. ಮುಖ್ಯವಾಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳ ಹಿತ ಕಾಯುವುದು ಪ್ರಥಮ ಅದ್ಯತೆಯಾಗಿದ್ದು, ಇದಕ್ಕೆ ಬೇಕಿರುವ ಎಲ್ಲ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಉದ್ಯೋಗಿಗಳು ಭಯ ಪಡುವ ಅಗತ್ಯವಿಲ್ಲ. ಆಗಿರುವ ಅನಾಹುತವನ್ನು ಧೈರ್ಯದಿಂದ ಎದುರಿಸಿ ನಿಮ್ಮ ಸಹಕಾರದೊಂದಿಗೆ ಮತ್ತೆ ಸತ್ಯಂ ಕಂಪನಿಯನ್ನು ಮುಂಚೂಣಿ ತರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಸತ್ಯಂ ಉದ್ಯೋಗಿಗಳು ನೂತನ ನಿರ್ದೇಶಕ ಮಂಡಳಿಯ ಮೇಲೆ ಭರವಸೆ ಇರಿಸಬೇಕು ಎಂದು ಮನವಿ ಮಾಡಿಕೊಂಡರು.

ಸತ್ಯಂ ಕಂಪನಿಯ ಹಗರಣದಿಂದ ಸಾಫ್ಟವೇರ್ ಕಂಪನಿ ಮೇಲೆ ಭಾರಿ ಪರಿಣಾಮ ಬೀರಿದೆ ಎನ್ನುವ ಕೂಗನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅವರು, ಸತ್ಯಂಗೆ ಬೇಕಿರುವ ಸದ್ಯದ ಅಗತ್ಯತೆಯನ್ನು ತಾತ್ಕಾಲಿಕವಾಗಿ ಸರ್ಕಾರ ನಿರ್ವಹಿಸುತ್ತದೆ ಎಂದು ಪಾರೇಖ್ ಹೇಳಿದರು. ಒಟ್ಟು ಹತ್ತು ಮಂದಿ ಒಳಗೊಂಡ ಆಡಳಿತ ಮಂಡಳಿಯನ್ನು ರಚಿಸಲಾಗವುದು. ಉಳಿದ ಏಳು ಮಂದಿ ನಿರ್ದೇಶಕನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿ ನೇಮಕ ಮಾಡದೆ ಎಂದು ಪಾರೇಖ್ ಭರವಸೆ ನೀಡಿದರು.

(ದಟ್ಸ್ ಕನ್ನಡ ವಾರ್ತೆ)
ಸತ್ಯಂ ಉದ್ಯೋಗಿಗಳ ಸೆಳೆಯುವುದಿಲ್ಲ:ಇನ್ಫಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X