ಸತ್ಯಂ ರಾಜು 'ದಿವಾಳಿ' ನ್ಯೂಯಾರ್ಕ್ ಕೋರ್ಟ್
ನ್ಯೂಯಾರ್ಕ್
ಜ 29 : ಈ ಹಿಂದಿನ ಸತ್ಯಂ ಕಂಪ್ಯೂಟರ್ಸ್ ಅಧ್ಯಕ್ಷ ರಾಮಲಿಂಗ ರಾಜು ದಿವಾಳಿಯಾಗಿದ್ದಾರೆಂದು ನ್ಯೂಯಾರ್ಕ್ ಕೋರ್ಟ್ ಘೋಷಿಸಿದೆ. ತಾವೇ ಸ್ಥಾಪಿಸಿದ ಸಂಸ್ಥೆಯ ಲೆಕ್ಕಪತ್ರದಲ್ಲಿ 14ಸಾವಿರಕೋಟಿ ವಂಚನೆ ಎಸಗಿರುವುದಾಗಿ ರಾಜು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. id="toptextpromo">ಭಾರತ
ಮತ್ತು ಅಮೇರಿಕಾದಲ್ಲಿ ಅವರ ವಿರುದ್ದ ವಿಚಾರಣೆಗೆ ಆದೇಶಿಸಲಾಗಿತ್ತು. ರಾಜು ಜೊತೆ ಅವರ ಸೋದರ ಮಾವ ಮತ್ತು ಸಂಸ್ಥೆಯ ಮಾಜಿ ಹಣಕಾಸು ಮುಖ್ಯಸ್ಥ ಶ್ರೀನಿವಾಸ್ ವಿ ಅವರನ್ನು ಕೋರ್ಟ್ ದಿವಾಳಿಯೆಂದು ಘೋಷಿಸಿದೆ. ಅಮೆರಿಕಾದಲ್ಲಿ ನಡೆಯುತ್ತಿರುವ ವಿಚಾರಣೆಗೆ ಸಂಬಂಧಿಸಿದಂತೆ ವಕೀಲರನ್ನು ನೇಮಿಸಿಕೊಳ್ಳಲು ಮತ್ತು ಕೋರ್ಟ್ ಶುಲ್ಕ ಪಾವತಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಆರೋಪಿಗಳು ಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದರು. id='are-slot-1' class='oiad oi-axt oiadv'> id='top-searched-articles'>ವಿಚಾರಣೆಯ
ಶುಲ್ಕವನ್ನು ಭರಿಸಲು ತಮ್ಮಿಂದ ಸಾಧ್ಯವಿಲ್ಲ ಎನ್ನುವ ಪ್ರತಿವಾದಿಗಳ ಪ್ರತಿಪಾದನೆಯನ್ನು ಕೋರ್ಟ್ ಒಪ್ಪಿಕೊಂಡು ಅವರನ್ನು 'ನಿರ್ಗತಿಕರು' ಎಂದು ಕೋರ್ಟ್ ಆದೇಶಿಸಿದೆ.











Click it and Unblock the Notifications