ಮತ್ತೆ ಜೈಲು ಪಾಲಾದ ಸತ್ಯಂ ರಾಮಲಿಂಗರಾಜು

ಸತ್ಯಂ ಹಗರಣದಲ್ಲಿ ಬಂಧಿತರಾಗಿ ವಿಚಾರಣೆ ಎದುರಿಸುತ್ತಿರುವ ರಾಮಲಿಂಗರಾಜು ಅವರಿಗೆ ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ್ದ ಜಾಮೀನನ್ನು ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ನ. 10ರೊಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಆದೇಶ ನೀಡಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತರ ಆರೋಪಿಗಳಾದ ರಾಮಲಿಂಗರಾಜು ರವರ ಸಹೋದರ ರಾಮರಾಜು, ಸತ್ಯಂನ ಮಾಜಿ ಸಿಎಫ್ ಒ ಶ್ರೀನಿವಾಸ್ ಮತ್ತು ಇತರ ಮೂವರು ಕಂಪನಿಯ ಉದ್ಯೋಗಿಗಳಾದ ಜಿ ರಾಮಕೃಷ್ಣ, ವೆಂಕಟಪತಿ ರಾಜು ಮತ್ತು ಶ್ರೀಶೈಲಂರವರಿಗೆ ನೀಡಿದ ಜಾಮೀನಿನ ಆಧಾರದಲ್ಲಿ ಹೈಕೋರ್ಟ್ ಅಗಸ್ಟ್ 18ರಂದು ರಾಜುಗೆ ಜಾಮೀನು ನೀಡಿತ್ತು.
ಆದರೆ ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ಜಾಮೀನನ್ನು ಆಗಸ್ಟ್ 26ರಂದು ಸುಪ್ರೀಂ ಕೋರ್ಟ್ ಆದೇಶವನ್ನು ರದ್ದುಪಡಿಸಿ ನವೆಂಬರ್ 10ರೊಳಗೆ ಶರಣಾಗುವಂತೆ ರಾಜು ಮತ್ತು ಇತರ ಐವರು ಆರೋಪಿಗಳಿಗೆ ಆದೇಶ ನೀಡಿತ್ತು.












Click it and Unblock the Notifications