RCB Playing 11: ಜಿಟಿ ವಿರುದ್ಧದ ಐಪಿಎಲ್‌ 2026 ಫೈನಲ್‌ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್‌ 11..

RCB Vs GT IPL 2026 Final: ಅಹಮದಾಬಾದ್‌ನಲ್ಲಿ ಭಾನುವಾರ (ಮೇ 31) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್‌ ನಡುವೆ ಐಪಿಎಲ್‌ 2026ರ ಹೈವೋಲ್ಟೇಜ್ ಫೈನಲ್‌ ಪಂದ್ಯ ನಡೆಯಲಿದೆ. ಈ ರೋಚಕ ಸಮರ ವೀಕ್ಷಣೆ ಮಾಡಲಿ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಹಾಗಾದರೆ ಹಾಲಿ ಚಾಂಪಿಯನ್‌ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್‌ 2026ರ ಆವೃತ್ತಿಯು ಅಂತಿಮ ಹಂತಕ್ಕೆ ತಲುಪಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಇಡೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ಈ ಎರಡು ತಂಡಗಳ ನಡುವಿನ ಬಿಗ್ ಫೈಟ್ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.

RCB vs GT IPL 2026 Final Predicted Playing XI Pitch Report Weather and Match preview Details

ಆರ್‌ಸಿಬಿ-ಗುಜರಾತ್ ಟೈಟಾನ್ಸ್‌ ಕಾಳಗ

ಕ್ವಾಲಿಫೈಯರ್ 1 ಪಂದ್ಯದಲ್ಲಿ ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ತಂಡವು ಇದೇ ಗುಜರಾತ್ ಟೈಟಾನ್ಸ್‌ ವಿರುದ್ಧ 92 ರನ್‌ಗಳ ಭರ್ಜರಿ ಜಯ ಸಾಧಿಸಿ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಹೀಗಾಗಿ ಆರ್‌ಸಿಬಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಕ್ವಾಲಿಫೈಯರ್ 2 ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಅವರ ಸ್ಫೋಟಕ ಶತಕದ ನೆರವಿನಿಂದ ಭರ್ಜರಿ ಕಮ್‌ಬ್ಯಾಕ್ ಮಾಡಿರುವ ಗುಜರಾತ್ ಟೈಟಾನ್ಸ್ ತಮ್ಮದೇ ತವರಿನ ಮೈದಾನದಲ್ಲಿ ಬೆಂಗಳೂರು ತಂಡಕ್ಕೆ ತಿರುಗೇಟು ನೀಡಲು ಸಜ್ಜಾಗಿದೆ.

ಆರ್‌ಸಿಬಿ-ಜಿಟಿ ಮುಖಾಮುಖಿ ದಾಖಲೆಗಳು

* ಒಟ್ಟು ಆಡಿದ ಪಂದ್ಯಗಳು: 9

* ಆರ್‌ಸಿಬಿ ಗೆಲುವು: 5

* ಗುಜರಾತ್ ಟೈಟಾನ್ಸ್ ಗೆಲುವು: 4

ನರೇಂದ್ರ ಮೋದಿ ಕ್ರೀಡಾಂಗಣ ಪಿಚ್ ರಿಪೋರ್ಟ್

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಸಾಮಾನ್ಯವಾಗಿ ರನ್‌ ಮಳೆಗೆ ಹೆಸರುವಾಸಿ. ಇಲ್ಲಿನ ಕೆಂಪು ಮಣ್ಣಿನ ಪಿಚ್‌ಗಳು ಉತ್ತಮ ವೇಗ ಹಾಗೂ ಬೌನ್ಸ್ ಹೊಂದಿರುವುದರಿಂದ ಬ್ಯಾಟರ್‌ಗಳು ಸುಲಭವಾಗಿ ಬಿಗ್ ಶಾಟ್‌ಗಳನ್ನು ಆಡಬಹುದು. ಆದರೆ ಈ ಮೈದಾನದ ಬೌಂಡರಿಗಳು ಸಾಕಷ್ಟು ದೂರ ಇರುವುದರಿಂದ ಪ್ರತಿಯೊಂದು ಬಿಗ್ ಶಾಟ್‌ಗಳು ಸಿಕ್ಸ್‌ ಹೋಗುವುದಿಲ್ಲ. ಬದಲಿಗೆ ಕ್ಯಾಚ್‌ ಆಗಿ ವಿಕೆಟ್‌ ಒಪ್ಪಿಸುವ ಸಾಧ್ಯತೆ ಇರುತ್ತದೆ.

ಈ ಪಿಚ್ ಯಾರಿಗೆ ಹೆಚ್ಚು ಲಾಭ?

ಈ ಪಿಚ್ ಬೌಲರ್‌ಗಳಿಗೆ ದೊಡ್ಡ ಸವಾಲಾಗಿದ್ದು, ರನ್ ವೇಗಕ್ಕೆ ಬ್ರೇಕ್ ಹಾಕುವುದು ಸುಲಭವಲ್ಲ. ಕೇವಲ ಲೈನ್ ಮತ್ತು ಲೆಂತ್ ಕಾಯ್ದುಕೊಂಡು ಚಾಣಾಕ್ಷತೆಯಿಂದ ಬೌಲಿಂಗ್ ಮಾಡುವವರಿಗೆ ಮಾತ್ರ ಇಲ್ಲಿ ವಿಕೆಟ್ ಸಿಗಬಹುದು. ಪ್ರಸಕ್ತ ಸೀಸನ್‌ನಲ್ಲಿ ಇಲ್ಲಿನ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 193 ರನ್ ಆಗಿದ್ದರೆ, ಒಟ್ಟಾರೆ ಸರಾಸರಿ ಸ್ಕೋರ್ 208 ರನ್ ದಾಟಿದೆ.

ಈ ವರ್ಷ ಇಲ್ಲಿ ನಡೆದ 13 ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 8 ಬಾರಿ ಗೆದ್ದರೆ, ಚೇಸಿಂಗ್ ಮಾಡಿದ ತಂಡಗಳು 5 ಬಾರಿ ಮಾತ್ರ ಜಯ ಸಾಧಿಸಿವೆ. ಪಂದ್ಯದ ವೇಳೆ ಇಬ್ಬನಿಯ ಪ್ರಭಾವ ಅಷ್ಟಾಗಿ ಇರುವುದಿಲ್ಲ. ಆದ್ದರಿಂದ ಟಾಸ್ ಗೆಲ್ಲುವ ನಾಯಕ ಮೊದಲು ಬ್ಯಾಟಿಂಗ್ ಆಯ್ದುಕೊಂಡು ಬೃಹತ್ ಮೊತ್ತ ಕಲೆಹಾಕುವ ಕಡೆಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಅಹಮದಾಬಾದ್ ಹವಾಮಾನ ವರದಿ

ಅಕ್ಯುವೆದರ್ ವರದಿಯ ಪ್ರಕಾರ, ಪಂದ್ಯಕ್ಕೆ ಮಳೆಯ ಯಾವುದೇ ಅಡ್ಡಿ ಇರುವುದಿಲ್ಲ. ಆದರೆ ಅಹಮದಾಬಾದ್‌ನಲ್ಲಿ ವಿಪರೀತ ಸೆಖೆ ಇರಲಿದ್ದು, ಹಗಲಿನ ವೇಳೆ ತಾಪಮಾನ ಪ್ರಮಾಣ 41 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುವ ಸಾಧ್ಯತೆಯಿದೆ. ಸಂಜೆಯ ವೇಳೆಯೂ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರಲಿದ್ದು, ಆಟಗಾರರಿಗೆ ಹವಾಮಾನವು ಸವಾಲಾಗಿ ಪರಿಣಮಿಸಲಿದೆ.

ಆರ್‌ಸಿಬಿ-ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೇಕಬ್ ಡಫಿ, ಜೋಶ್ ಹ್ಯಾಜಲ್‌ವುಡ್, ರಸಿಖ್ ಸಲಾಮ್ ದಾರ್.

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಸಾಯಿ ಸುದರ್ಶನ್, ಶುಭ್‌ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಷದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಪಂದ್ಯದ ಸಮಯ, ನೇರಪ್ರಸಾರದ ವಿವರ

* ಭಾರತದಲ್ಲಿ ಐಪಿಎಲ್ 2026ರ ಫೈನಲ್ ಪಂದ್ಯದ ನೇರ ಪ್ರಸಾರವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ವೀಕ್ಷಣೆ ಮಾಡಬಹುದು.

* ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಜಿಯೋಹಾಟ್‌ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರಲಿದೆ.
* ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭವಾಗಲಿದ್ದು, 7:00 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+