ಯಶ್‌ ಒರಿಜಿನಲ್‌ ಹೆಸರು ನವೀನ್ ಕುಮಾರ್ ಅಲ್ಲ, ಅಸಲಿ ಹೆಸರು ರಿವೀಲ್‌ ಮಾಡಿದ ತಾಯಿ ಪುಷ್ಪಾ

ಸ್ಯಾಂಡಲ್‌ವುಡ್‌ನಲ್ಲಿ ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ನಟ ರಾಕಿಂಗ್‌ ಯಶ್ ಅವರ ಮೂಲ ಹೆಸರಿನ ಬಗ್ಗೆ ಇಷ್ಟು ದಿನ ಇದ್ದ ನಂಬಿಕೆಯೊಂದು ಈಗ ಸುಳ್ಳಾಗಿದೆ. ಚಿತ್ರರಂಗಕ್ಕೆ ಬರುವ ಮುನ್ನ ಯಶ್ ಅವರ ಹೆಸರು 'ನವೀನ್ ಕುಮಾರ್ ಗೌಡ' ಎಂದಾಗಿತ್ತು ಎಂದು ಎಲ್ಲರೂ ಭಾವಿಸಿದ್ದರು. ಸ್ವತಃ ಯಶ್ ಕೂಡ ಹಲವು ವೇದಿಕೆಗಳಲ್ಲಿ ಇದೇ ಹೆಸರನ್ನು ಉಲ್ಲೇಖಿಸಿದ್ದರು. ಆದರೆ, ಇತ್ತೀಚೆಗೆ ಯಶ್ ಅವರ ತಾಯಿ, ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಅವರು ತಮ್ಮ ಮಗನ ನಿಜವಾದ ಹೆಸರನ್ನು ರಿವೀಲ್‌ ಮಾಡುವ ಮೂಲಕ ಅದರ ಹಿಂದಿರುವ ಅಸಲಿ ರಹಸ್ಯವನ್ನು ಬಹಿರಂಗಪಡಿಸಿ ಸಿನಿರಸಿಕರಿಗೆ ಅಚ್ಚರಿ ಮೂಡಿಸಿದ್ದಾರೆ.

ಜನವರಿಯಲ್ಲಿ ಹುಟ್ಟಿದ್ದಕ್ಕೆ 'ನವೀನ್' ಅಂತ ಕರೀತಿದ್ವಿ

ಇತ್ತೀಚೆಗೆ ನಟ ನವೀನ್ ಸಜ್ಜು ಅಭಿನಯದ 'ಲೋ ನವೀನ' ಚಿತ್ರದ ಪ್ರದರ್ಶನಕ್ಕೆ ಬಂದಿದ್ದ ತಾಯಿ ಪುಷ್ಪಾ ಅವರ ಬಳಿ ಮಾಧ್ಯಮಗಳು ನಿಮ್ಮ ಮಗನ ಹೆಸರೂ ನವೀನ್ ತಾನೇ ಎಂದು ಪ್ರಶ್ನಿಸಿದಾಗ ಅವರು ಈ ರಹಸ್ಯ ಬಿಚ್ಚಿಟ್ಟಿದ್ದಾರೆ. "ಅವನು ಜನವರಿ ತಿಂಗಳಲ್ಲಿ ಹುಟ್ಟಿದ ಕಾರಣ ಮನೆಯಲ್ಲಿ ಪ್ರೀತಿಯಿಂದ 'ನವೀನ್' ಎಂದು ಕರೆಯುತ್ತಿದ್ದೆವು. ಹಲವು ವರ್ಷಗಳ ಕಾಲ ಅದೇ ಹೆಸರು ಮುಂದುವರಿದಿತ್ತು. ಆದರೆ ಜಾತಕದ ಪ್ರಕಾರ ಅವನಿಗೆ 'ಯ' ಅಕ್ಷರ ಬಂದಿದ್ದರಿಂದ, ನಾವು ಇಟ್ಟಿದ್ದ ಒರಿಜಿನಲ್ ಹೆಸರು 'ಯಶ್ವಂತ್' ಎಂದು ತಾಯಿ ಸ್ಪಷ್ಟಪಡಿಸಿದ್ದಾರೆ.

Yash

ಹೆಸರು ಬದಲಾದ ಮೇಲೆ ಲಕ್‌ ಚೇಂಜಾಯ್ತು

ಶಾಲಾ ಕಾಲೇಜು ದಿನಗಳಲ್ಲಿ ಯಶ್ ತುಂಬಾ ತುಂಟನಾಗಿದ್ದರಂತೆ. ನಂತರ ಚಿತ್ರರಂಗ ಪ್ರವೇಶಿಸುವಾಗ ಯಶ್ವಂತ್ ಎಂಬ ಹೆಸರನ್ನು ಸುಲಭವಾಗಿರಲಿ ಎಂದು 'ಯಶ್' ಎಂದು ಬದಲಾಯಿಸಿಕೊಳ್ಳಲಾಯಿತು. ಹೆಸರು ಬದಲಾದ ಮೇಲೆಯೇ ಅವನ ಅದೃಷ್ಟವೂ ಬದಲಾಯಿತು ಎಂದಿದ್ದಾರೆ ಪುಷ್ಪಾ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸದ್ಯ ಈ ಹೊಸ ಮಾಹಿತಿಯನ್ನು ವಿಕಿಪೀಡಿಯಾ ಪುಟದಲ್ಲೂ ಸಹ ಅಪ್‌ಡೇಟ್ ಮಾಡಲಾಗಿದೆ.

ಮೆಜೆಸ್ಟಿಕ್‌ನಲ್ಲಿ ಲೈಂಗಿಕ ಕಾರ್ಯಕರ್ತೆಯಂತೆ ಗಿರಾಕಿ ಹುಡುಕಿ, ಸಮಾಜದ ಕಣ್ತೆರೆಸಿದ ನಟಿ ಕಾವ್ಯಾ ಶಾ
ಮೆಜೆಸ್ಟಿಕ್‌ನಲ್ಲಿ ಲೈಂಗಿಕ ಕಾರ್ಯಕರ್ತೆಯಂತೆ ಗಿರಾಕಿ ಹುಡುಕಿ, ಸಮಾಜದ ಕಣ್ತೆರೆಸಿದ ನಟಿ ಕಾವ್ಯಾ ಶಾ

ಬಸ್ ಚಾಲಕನ ಮಗನಿಂದ ಗ್ಲೋಬಲ್‌ ಸ್ಟಾರ್‌

1985ರಲ್ಲಿ ಹಾಸನ ಜಿಲ್ಲೆಯಲ್ಲಿ ಜನಿಸಿದ ಯಶ್ ಅವರ ತಂದೆ ಅರುಣ್ ಕುಮಾರ್ ಕೆಎಸ್‌ಆರ್‌ಟಿಸಿ ಬಸ್ ಚಾಲಕರಾಗಿದ್ದರು. ಮಂಡ್ಯ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಯಶ್, ನಟನಾಗುವ ತೀವ್ರ ಹಂಬಲದಿಂದ ಬೆಂಗಳೂರಿಗೆ ಬಂದರು. ಆರಂಭದಲ್ಲಿ ಖ್ಯಾತ ರಂಗತಂಡ 'ಬೆನಕ' ಸೇರಿದ ಅವರು, ನಂತರ 'ಉತ್ತರಾಯಣ', 'ನಂದಗೋಕುಲ' ಹಾಗೂ 'ಸಿಲ್ಲಿ ಲಲ್ಲಿ'ಯಂತಹ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾದರು. 'ಜಂಭದ ಹುಡುಗಿ' ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಯಶ್‌ಗೆ 'ಮೊಗ್ಗಿನ ಮನಸ್ಸು' ಚಿತ್ರದ ರಾಹುಲ್ ಪಾತ್ರ ದೊಡ್ಡ ಬ್ರೇಕ್ ನೀಡಿತು. ಅಲ್ಲಿಂದ ಶುರುವಾದ ಅವರ ಯಶಸ್ಸಿನ ಪಯಣದ ಇಂದಿಗೂ ಮುಂದುವರಿದಿದೆ.

2011ರ 'ಕಿರಾತಕ' ಚಿತ್ರ ಯಶ್ ಅವರನ್ನು ಮಾಸ್ ಹೀರೊ ಆಗಿ ನಿಲ್ಲಿಸಿದರೆ, 'ರಾಜಾಹುಲಿ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅವರ ಖದರ್ ಬದಲಾಯಿಸಿತು. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ: ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಕಲೆಕ್ಷನ್ ವಿಚಾರವಾಗಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೂಡಿ ಮಾಡಿದ 'ಕೆಜಿಎಫ್‌' ಸರಣಿ ಚಿತ್ರಗಳು ಯಶ್ ಅವರನ್ನು ಇಡೀ ಭಾರತವೇ ತಿರುಗಿ ನೋಡುವಂತೆ ಮಾಡಿತು.

ಯಶ್ ಈಗ ಕೇವಲ ನಟನಾಗಿ ಉಳಿದಿಲ್ಲ, ನೂರಾರು ಕೋಟಿ ಹೂಡಿಕೆ ಮಾಡುವ ದೊಡ್ಡ ನಿರ್ಮಾಪಕರೂ ಆಗಿದ್ದಾರೆ. ಸದ್ಯ ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' (Toxic) ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ರೆಡಿಯಾಗುತ್ತಿದ್ದಾರೆ. ಇದರೊಂದಿಗೆ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಲಂಕಾಧಿಪತಿ ರಾವಣನಾಗಿ ಅಬ್ಬರಿಸಲಿದ್ದಾರೆ. ಈ ಎರಡೂ ಬಿಗ್ ಬಜೆಟ್ ಚಿತ್ರಗಳಿಗೆ ಯಶ್ ಸ್ವತಃ ಸಹ-ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿರುವುದು ವಿಶೇಷ. ಮುಂದೆ ಕೆಜಿಎಫ್‌-3 ಮೂಲಕ ರಾಕಿಭಾಯ್‌ ಪಾತ್ರವನ್ನೂ ಯಶ್‌ ಮುಂದುವರಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+