Lok Sabha Election 2024: ಈಗ ಚುನಾವಣೆ ನಡೆದರೆ ಉತ್ತರ ಪ್ರದೇಶದ ಸಮೀಕ್ಷಾ ಫಲಿತಾಂಶ ಹೀಗಿದೆ

ಹಾಲೀ ಲೋಕಸಭೆಯ ಅವಧಿ ಮುಂದಿನ ವರ್ಷದ ಮೇ ತಿಂಗಳವರೆಗೆ ಇದ್ದರೂ, ಅದಕ್ಕಿಂತಲೂ ಮುನ್ನ ಚುನಾವಣೆ ನಡೆಯುವ ಸಾಧ್ಯತೆಯಿದೆ ಎನ್ನುವ ಮಾತು ದಟ್ಟವಾಗಿ ಕೇಳಿ ಬರುತ್ತಿದೆ. ಇದಲ್ಲದೇ ಪಂಚ ರಾಜ್ಯಗಳ ಚುನಾವಣೆ ನಡೆಯಬೇಕಾಗಿರುವುದರಿಂದ ಸಮೀಕ್ಷೆಗಳು ಹೊರಬೀಳುತ್ತಿವೆ.

ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶ ಒಂದರಲ್ಲೇ ಎಂಬತ್ತು ಸ್ಥಾನಗಳಿವೆ. ಹಾಗಾಗಿ, ಈ ರಾಜ್ಯದ ಸಾರ್ವತ್ರಿಕ ಚುನಾವಣೆಯ ಮೇಲೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ವಿಶೇಷ ಒತ್ತನ್ನು ನೀಡುತ್ತದೆ.

lok-sabha-election-2024

ಒಂದು ಕಾಲದಲ್ಲಿ ಕಾಂಗ್ರೆಸ್ ಮತ್ತು ಗಾಂಧಿ ಪರಿವಾರದ ಭದ್ರಕೋಟೆಯೆಂದೇ ಬಿಂಬಿತವಾಗಿದ್ದ ಉತ್ತರ ಪ್ರದೇಶದ ಹಾಲೀ ಚಿತ್ರಣವೇ ಬೇರೆ. ಕಳೆದ ಬಾರಿ ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು, ಅದೂ ಸೋನಿಯಾ ಗಾಂಧಿಯವರ ಮೂಲಕ..

ಉತ್ತರ ಪ್ರದೇಶದಲ್ಲಿ ಬಿಜೆಪಿ ತನ್ನ ಬುನಾದಿಯನ್ನು ಈಗಾಗಲೇ ಭದ್ರ ಪಡಿಸಿಕೊಂಡಿದೆ. ಸತತವಾಗಿ ಎರಡು ಬಾರಿ ಅಸೆಂಬ್ಲಿ ಚುನಾವಣೆಯನ್ನು ಕಮಲದ ಪಕ್ಷ ಗೆದ್ದಿರುವುದರಿಂದ ಮುಂಬರುವ ಚುನಾವಣೆಯಲ್ಲೂ ಪಕ್ಷಕ್ಕೆ ಪೂರಕ ವಾತಾವರಣವಿದೆ ಎನ್ನುವುದು ಸಮೀಕ್ಷಾ ವರದಿಯಲ್ಲಿ ಬಂದಂತಹ ಅಂಶ.

ಮತದಾರರ ನಾಡಿಮಿಡಿತ ಯಾವ ಪಕ್ಷದ ಮೇಲೆ?

ಈಗ ಒಂದು ವೇಳೆ ಚುನಾವಣೆ ನಡೆದರೆ ಮತದಾರರ ನಾಡಿಮಿಡಿತ ಯಾವ ಪಕ್ಷದ ಮೇಲೆ ಎನ್ನುವ ಸರ್ವೇಯನ್ನು ಇಂಡಿಯಾ ಟಿವಿ - ಸಿಎನ್‌ಎಕ್ಸ್ ನಡೆಸಿದೆ. ಸಮೀಕ್ಷೆಯಲ್ಲಿ ಹೊರಬಿದ್ದ ಫಲಿತಾಂಶದ ಪ್ರಕಾರ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೇರಲಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದ ನಂತರ ಮುಂಬರುವ ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣೆಯ ಸಮೀಕ್ಷೆಯ ಪ್ರಕಾರ ಹೆಚ್ಚಿನ ಕಡೆ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆಯಾಗಲಿದೆ ಎಂದು ಸರ್ವೇಗಳು ಹೇಳುತ್ತಿವೆ. ಇದೇ ಆಧಾರದ ಮೇಲೆ, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಖಚಿತ ವಿಶ್ವಾಸದ ಮಾತನ್ನು ಕಾಂಗ್ರೆಸ್ ನಾಯಕರು ಆಡುತ್ತಿದ್ದಾರೆ.

ಇಂಡಿಯಾ ಟಿವಿ - ಸಿಎನ್‌ಎಕ್ಸ್ ಸಮೀಕ್ಷೆ

ಸೆಪ್ಟಂಬರ್ 20ರಿಂದ ಅಕ್ಟೋಬರ್ 3ರವರೆಗಿನ ಅವಧಿಯಲ್ಲಿ ಇಂಡಿಯಾ ಟಿವಿ - ಸಿಎನ್‌ಎಕ್ಸ್ ಸಮೀಕ್ಷೆಯನ್ನು ನಡೆಸಿದೆ. 54,250 ಮತದಾರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ, ಇದರಲ್ಲಿ ಪುರುಷರು 28,309 ಮತ್ತು ಮಹಿಳೆಯರು 25,941. ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದಲ್ಲಿ ಯೋಗಿ - ಮೋದಿ ದಿಗ್ವಿಜಯ ಮುಂದುವರಿಯಲಿದೆ. ಸಮೀಕ್ಷೆಯ ಫಲಿತಾಂಶ ಈ ರೀತಿಯಿದೆ.

*ಒಟ್ಟು ಸ್ಥಾನಗಳು: 80
*ಬಿಜೆಪಿ: 70
*ಎಸ್.ಪಿ: 04
*ಬಿ.ಎಸ್.ಪಿ: 00
*ಕಾಂಗ್ರೆಸ್: 02
*ಅಪ್ನಾದಳ: 02
*ಆರ್.ಎಲ್.ಡಿ: 01
*ಎಸ್.ಬಿ.ಎಸ್. ಪಿ: 01

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+