ಸತ್ಯಂ ನೂತನ ಸಿಇಓ ಆಗಿ ಎ ಎಸ್ ಮೂರ್ತಿ ನೇಮಕ
ಹೈದರಾಬಾದ್, ಫೆ. 5 : ಸತ್ಯಂ ಕಂಪ್ಯೂಟರ್ಸ್ ಜಾಗತಿಕ ಮಾರುಕಟ್ಟೆ ವ್ಯವಹಾರಗಳ ಮುಖ್ಯಸ್ಥ (COO) ಎಎಸ್ ಮೂರ್ತಿ ಅವರನ್ನು ಸತ್ಯಂ ಕಂಪನಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮೂರ್ತಿ ಅವರ ವಿಶೇಷ ಸಲಹೆಗಾರರಾಗಿ ಮುರುಗಪ್ಪ ಗುಂಪಿನ ಮಾಜಿ ಹಣಕಾಸು ಅಧಿಕಾರಿ ಪಾರ್ಥೋ ಎಸ್ ದತ್ತ ಹಾಗೂ ಟಾಟಾ ಕೆಮಿಕಲ್ಸ್ ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಹೋಮಿ ಖುಸ್ರೋ ಖಾನ್ ಅವರನ್ನು ನೇಮಿಸಿ ಸತ್ಯಂ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಸತ್ಯಂ ಕಂಪನಿಯ ನೂತನ ಸಿಇಒ ಆಗಿರುವ ಎಎಸ್ ಮೂರ್ತಿ ಅವರು ಕಳೆದ 15 ವರ್ಷಗಳಿಂದ ಸತ್ಯಂ ಕಂಪನಿಯಲ್ಲಿ ಜಾಗತಿಕ ಮಟ್ಟದ ಅಧಿಕಾರಿ ಸೇವೆ ಸಲ್ಲಿಸುವ ಮೂಲಕ ಅಪಾರ ಅನುಭವ ಪಡೆದುಕೊಂಡಿದ್ದಾರೆ ಎಂದು ನಿರ್ದೇಶಕ ಮಂಡಳಿ ಹೇಳಿದೆ. ಸತ್ಯಂ ಕಂಪನಿಯ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಹೈದರಾಬಾದ್ ಸಿಐಡಿ ಪೋಲಿಸರು ತಿಳಿಸಿದ್ದಾರೆ. ಸತ್ಯಂ ಕಂಪನಿಯಲ್ಲಿ ಮೂಡಿರುವ ಈ ಬೆಳವಣಿಗೆಯನ್ನು ಐಟಿ ಕ್ಷೇತ್ರದ ದಿಗ್ಗಜ ಇನ್ಫೋಸಿಸ್ ಸ್ವಾಗತಿಸಿದೆ. ಇತ್ತೀಚೆಗೆ ಸತ್ಯಂ ಕಂಪನಿಗೆ 12ಕ್ಕೂ ಹೆಚ್ಚು ಹೊಸ ಯೋಜನೆಗಳು ದೊರೆತಿದ್ದವು.
(ದಟ್ಸ್ ಕನ್ನಡ ವಾರ್ತೆ)
ರಾಜು ವಿಚಾರಣೆ, ಸೆಬಿ ಅರ್ಜಿ ಪುರಸ್ಕರಿಸಿದ ಕೋರ್ಟ್












Click it and Unblock the Notifications