National Highway: ದಾಬಸ್ ಪೇಟೆ-ಮಧುಗಿರಿ-ಬಳ್ಳಾರಿ ರಸ್ತೆ ಮೇಲ್ದರ್ಜೆಗೆ.. ಏನೆಲ್ಲಾ ಪ್ರಯೋಜನಾಗಳಿವೆ?

National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಿದೆ. ಈ ನಡುವೆಯೇ ಇದೀಗ ಸಚಿವ ವಿ. ಸೋಮಣ್ಣ ಅವರು ದಾಬಸ್ ಪೇಟೆ-ಮಧುಗಿರಿ-ಬಳ್ಳಾರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗರ ಮನವಿ ಮಾಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ

ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಹೊಸ ಹೆದ್ದಾರಿ ನಿರ್ಮಾಣದಿಂದ ಈ ಭಾಗದ ರೈತರು, ಸಂಚಾರ, ವ್ಯಪಾರ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಹೇಳಿದರು. ಇನ್ನೂ ದಾಬಸ್ ಪೇಟೆ - ಮಧುಗಿರಿ - ಬಳ್ಳಾರಿ ರಸ್ತೆಯು ಕರ್ನಾಟಕದ ಪ್ರಮುಖ ಸಾರಿಗೆ ಸಂಪರ್ಕ ರಸ್ತೆಗಳಲ್ಲಿ ಒಂದಾಗಿದೆ. ಈ ಮಾರ್ಗವು ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ.

V Somanna Urges Nitin Gadkari to Declare Dabaspet-Madhugiri-Ballari Road as National Highway

ಯಾವೆಲ್ಲಾ ಜಿಲ್ಲೆಗಳ ಮೂಲಕ ಹಾದುಹೂಗುತ್ತದೆ?

* ಬೆಂಗಳೂರು ಗ್ರಾಮಾಂತರ
* ತುಮಕೂರು
* ಚಿತ್ರದುರ್ಗ
* ವಿಜಯನಗರ
* ಬಳ್ಳಾರಿ

ಈ ರಸ್ತೆ ಸಂಪರ್ಕ ಕಲ್ಪಿಸುವ ಪ್ರಮುಖ ಪಟ್ಟಣಗಳು

* ದಾಬಸ್‌ಪೇಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ)
* ಕೊರಟಗೆರೆ (ತುಮಕೂರು ಜಿಲ್ಲೆ)
* ಮಧುಗಿರಿ (ತುಮಕೂರು ಜಿಲ್ಲೆ)
* ಪಾವಗಡ (ತುಮಕೂರು ಜಿಲ್ಲೆ)
* ರಾಯದುರ್ಗ (ಆಂಧ್ರ ಗಡಿಯ ಅನಂತಪುರ ಜಿಲ್ಲೆ)
* ಹೊಸಪೇಟೆ (ವಿಜಯನಗರ ಜಿಲ್ಲೆ)
* ಬಳ್ಳಾರಿವರೆಗೂ ಈ ರಸ್ತೆ ಇದೆ.

ದಾಬಸ್ ಪೇಟೆಯಿಂದ ಮಧುಗಿರಿ ಮಾರ್ಗವಾಗಿ ಸಾಗುವ ಈ ರಸ್ತೆಯ ಪ್ರಮುಖ ಭಾಗವು ರಾಷ್ಟ್ರೀಯ ಹೆದ್ದಾರಿ 150ಎ ಅಡಿಯಲ್ಲಿ ಬರುತ್ತದೆ. ಇದು ಚಾಮರಾಜನಗರದಿಂದ ಜೀವರ್ಗಿ ಸಂಪರ್ಕಿಸುವ ಬೃಹತ್ ಹೆದ್ದಾರಿಯ ಭಾಗವಾಗಿದೆ. ದಾಬಸ್ ಪೇಟೆ (ಸೋಮಪುರ), ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ಭಾಗಗಳನ್ನು ಸಂಪರ್ಕಿಸುವ ಹಳೆಯ ರಸ್ತೆ ಮಾರ್ಗವನ್ನು ರಾಜ್ಯ ಹೆದ್ದಾರಿ 3 ಎಂದು ಗುರುತಿಸಲಾಗುತ್ತದೆ.

ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಿದ್ರೆ ಆಗುವ ಪ್ರಯೋಜನಗಳು

* ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ: ರಸ್ತೆ ಅಭಿವೃದ್ಧಿ, ವಿಸ್ತರಣೆ ಮತ್ತು ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ನೇರ ಅನುದಾನ ಸಿಗಲಿದೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಮಾನದಂಡಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುತ್ತದೆ.

* ರಸ್ತೆ ಅಗಲೀಕರಣ, ಬೈಪಾಸ್, ಫ್ಲೈಓವರ್, ಅಂಡರ್‌ಪಾಸ್ ಹಾಗೂ ಸೇತುವೆಗಳ ನಿರ್ಮಾಣಕ್ಕೆ ವೇಗ ಸಿಗುತ್ತದೆ. ಅಪಘಾತ ಪ್ರಮಾಣ ಕಡಿಮೆ ಮಾಡಲು ಸುರಕ್ಷತಾ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ.

* ಪ್ರಯಾಣದ ಸಮಯ ಕಡಿತ: ಬೆಂಗಳೂರು-ತುಮಕೂರು-ಮಧುಗಿರಿ-ಬಳ್ಳಾರಿ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗುತ್ತದೆ. ಸರಕು ಸಾಗಣೆ ವಾಹನಗಳಿಗೆ ವೇಗದ ಸಂಪರ್ಕ ಸಿಗಲಿದೆ.

* ಕೈಗಾರಿಕೆ ಮತ್ತು ಹೂಡಿಕೆಗೆ ಉತ್ತೇಜನ: ಹೊಸ ಕೈಗಾರಿಕೆಗಳು, ಗೋದಾಮುಗಳು, ಲಾಜಿಸ್ಟಿಕ್ಸ್ ಪಾರ್ಕ್‌ಗಳು ಮತ್ತು ಕೈಗಾರಿಕಾ ವಲಯಗಳು ಅಭಿವೃದ್ಧಿಯಾಗಲು ಅನುಕೂಲ ಆಗುತ್ತದೆ.

* ಉದ್ಯೋಗಾವಕಾಶಗಳ ಹೆಚ್ಚಳ

* ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಬೆಂಗಳೂರು ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಗೆ ತ್ವರಿತವಾಗಿ ಸಾಗಿಸಬಹುದು.
ಸಾಗಾಣಿಕೆ ವೆಚ್ಚ ಕಡಿಮೆ ಆಗುವ ಸಾಧ್ಯತೆಯಿದೆ.

* ಪ್ರವಾಸೋದ್ಯಮ ಅಭಿವೃದ್ಧಿ: ಮಧುಗಿರಿ, ಪಾವಗಡ, ಹೊಸಪೇಟೆ, ಹಂಪಿ ಹಾಗೂ ಬಳ್ಳಾರಿ ಭಾಗಗಳಿಗೆ ಉತ್ತಮ ರಸ್ತೆ ಸಂಪರ್ಕ ದೊರೆಯುತ್ತದೆ. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಸ್ಥಳೀಯ ಆರ್ಥಿಕತೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ.

* ಗ್ರಾಮೀಣ ಪ್ರದೇಶಗಳಿಗೆ ಉತ್ತಮ ರಸ್ತೆ ಸಂಪರ್ಕದಿಂದ ಶಿಕ್ಷಣ, ಆರೋಗ್ಯ ಮತ್ತು ವ್ಯಾಪಾರ ಚಟುವಟಿಕೆಗಳು ಸುಧಾರಿಸುತ್ತವೆ.

* ಈ ರಸ್ತೆ ಇತರೆ ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಉತ್ತಮ ಸಂಪರ್ಕ ಸಾಧಿಸಿ ರಾಜ್ಯದ ವಿವಿಧ ಭಾಗಗಳಿಗೆ ಸಂಚಾರವನ್ನು ಸುಲಭಗೊಳಿಸುತ್ತದೆ.

* ರಸ್ತೆಯ ಪಕ್ಕದ ಪ್ರದೇಶಗಳಲ್ಲಿ ಭೂಮಿ ಮತ್ತು ಆಸ್ತಿಗಳ ಮೌಲ್ಯ ಹೆಚ್ಚಳ ಆಗಲಿದೆ.

ಒಟ್ಟಿನಲ್ಲಿ ಹೇಳುವುದಾದರೆ ದಾಬಸ್‌ಪೇಟೆ-ಮಧುಗಿರಿ-ಬಳ್ಳಾರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ ಮಾಡಿದರೆ ಬೆಂಗಳೂರು, ತುಮಕೂರು, ವಿಜಯನಗರ ಮತ್ತು ಬಳ್ಳಾರಿ ಭಾಗಗಳ ನಡುವೆ ಪ್ರಯಾಣದ ಸಮಯ ಕಡಿಮೆಯಾಗಲಿದೆ. ಜೊತೆಗೆ ಕೈಗಾರಿಕಾ ಬೆಳವಣಿಗೆ, ಕೃಷಿ ಅಭಿವೃದ್ಧಿ, ಪ್ರವಾಸೋದ್ಯಮ ಉತ್ತೇಜನ, ಉದ್ಯೋಗ ಸೃಷ್ಟಿ ಹಾಗೂ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ಸಿಕ್ಕಂತಾಗಲಿದೆ ಎಂದು ಹೇಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+