Viral Video: ಬೆಂಗಳೂರಲ್ಲಿ ಕನ್ನಡ ಡಿಲೀಟ್ ಮಾಡಬೇಕು ಎಂದ ನಾರ್ಥಿ ಯುವತಿಯರ ಗುಂಪು, ಕನ್ನಡಿಗರು ಹೇಳಿದ್ದೇನು
Viral Video: ಬೆಂಗಳೂರಿನಲ್ಲಿ ಕನ್ನಡ ಭಾಷೆಯನ್ನು ಡಿಲೀಟ್ ಮಾಡಬೇಕು ಎಂದು ಕೆಲವು ನಾರ್ಥಿಗಳು ಹೇಳಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿ ಒಂದು ವಿಷಯ ಬ್ಯಾನ್ ಆಗಬೇಕು ಎಂದರೆ ಏನು ಎಂದು ಕಂಟೆಂಟ್ ಕ್ರಿಯೇಟರ್‌ವೊಬ್ಬರು ಕೇಳಿದ್ದು ಇದಕ್ಕೆ ನಾರ್ಥಿ ಯುವತಿಯರ ಗುಂಪು ಕನ್ನಡ ಎಂದು ಹೇಳಿದೆ. ಕನ್ನಡ ಭಾಷೆಯನ್ನು (Second Language) ದ್ವಿತೀಯ ಭಾಷೆಯನ್ನಾಗಿ ಮಾಡಬೇಕು ಎಂದು ನಾರ್ಥಿ ಯುವತಿಯರು ಹೇಳಿದ್ದಾರೆ.
ಈ ವಿಷಯವಾಗಿ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಎಲ್ಲಿಂದಲೋ ಬಂದು ಇಂತಹ ದುರಹಂಕಾರದ ಮಾತುಗಳು. ಇದು ತಪ್ಪಿನಿಂದ ಆಡಿರೋ ಮಾತಲ್ಲ ಇವರ ಮನಸ್ಥಿತಿಯೇ ಇದು. ತಮ್ಮ ಊರನ್ನು ಗಬ್ಬೆಬ್ಬಿಸಿ ನಮ್ಮ ಕನ್ನಡ ನಾಡಿಗೆ ಬದುಕು ಕಟ್ಟಿಕೊಳ್ಳೋಕೆ ಬಂದು ಕನ್ನಡವನ್ನೆ ಬ್ಯಾನ್ ಮಾಡ್ಬೇಕಂತೆ. ಕನ್ನಡಿಗರೇ ಎಚ್ಚರ ನಮ್ಮ ಅಸ್ಮಿತೆ ನಮ್ಮ ಹೊಣೆ ಎಂದು ಹೇಳಿದ್ದಾರೆ.

ಇದನ್ನು ನಿಯಂತ್ರಿಸುವುದಕ್ಕೆ ಈ ರೀತಿ ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡುವವರನ್ನು ತಡೆಯುವುದಕ್ಕೆ ನಾವು ಹಲವು ವಿಧಗಳನ್ನು ಅನುಸರಿಸುವ ಅವಶ್ಯಕತೆ ಇದೆ. ನಮಗೆ ಬಹುಮುಖಿ ವಿಧಾನದ ಅಗತ್ಯವಿದೆ. ಎಲ್ಲಾ CBSE, ICSE ಮುಂತಾದ ಶಾಲೆಗಳಲ್ಲಿ ರಾಜ್ಯ ಮಂಡಳಿಯು ನಿಗದಿಪಡಿಸಿದ ಕನ್ನಡ ಪಠ್ಯಕ್ರಮವನ್ನು ಕಡ್ಡಾಯಗೊಳಿಸುವ ಕಾನೂನನ್ನು ಸರ್ಕಾರ ಜಾರಿಗೆ ತರಬೇಕು. ಖಾಸಗಿ ಶಾಲೆಗಳಲ್ಲಿ, ಪ್ರಾಂಶುಪಾಲರಿಂದ ಹಿಡಿದು ಶಿಕ್ಷಕರವರೆಗೆ ಸ್ಥಳೀಯ ಕನ್ನಡಿಗರನ್ನೇ ನೇಮಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ದಕ್ಷಿಣ ಪಥೇಶ್ವರ ಎನ್ನುವ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಏನ್ ಮಾಡ್ತಿರಾ, ಎನು ಮಾಡಲ್ಲ ಅವ್ರ್ ಇನ್ನು ಜಾಸ್ತಿ ಆಡ್ತಾರೆ ಆವಾಗ್ಲು ಸುಮ್ನೆ ಇರ್ತಿರಾ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ.
Viral Video: ಕನ್ನಡಿಗರ ಆಕ್ರೋಶ
ಇನ್ನು ಬೆಂಗಳೂರಿನಲ್ಲಿ ದಿನೇ ದಿನ ಕನ್ನಡಿಗರನ್ನು ಅವಮಾನ ಮಾಡುವ ಹಾಗೂ ಕನ್ನಡ ಭಾಷೆಗೆ ಅಪಮಾನ ತರುವಂತೆ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹಾಗೂ ವೈರಲ್ ಆಗಬೇಕು ಎನ್ನುವ ಕಾರಣಕ್ಕಾಗಿಯೇ ಕೆಲವು ನಾರ್ಥಿಗಳು ಈ ರೀತಿ ಮಾಡುತ್ತಿದ್ದಾರೆ ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಈಚೆಗೆ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಅಥವಾ ಕನ್ನಡಿಗರೊಂದಿಗೆ ಕಿರಿಕ್ ಮಾಡುವವರ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೆ ಕೆಲವರು ಉದ್ದೇಶಪೂರ್ವಕವಾಗಿ ಈ ರೀತಿ ಹೇಳುತ್ತಿದ್ದಾರೆ. ಇದು ಇವರು ಬಾಯಿ ತಪ್ಪಿ ಹೇಳಿರುವ ಮಾತುಗಳಲ್ಲ ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾತನಾಡಿದ್ದಾರೆ ಎಂದು ಕನ್ನಡಿಗರು ಹೇಳಿದ್ದಾರೆ.
ಎಲ್ಲಿಂದಲೋ ಬಂದು ಇಂತಹ ದುರಹಂಕಾರದ ಮಾತುಗಳು
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) July 12, 2026
ಇದು ತಪ್ಪಿನಿಂದ ಆಡಿರೋ ಮಾತಲ್ಲ
ಇವರ ಮನಸ್ಥಿತಿಯೇ ಇದು.
ತಮ್ಮ ಊರನ್ನು ಗಬ್ಬೆಬ್ಬಿಸಿ
ನಮ್ಮ ಕನ್ನಡ ನಾಡಿಗೆ ಬದುಕು ಕಟ್ಟಿಕೊಳ್ಳೋಕೆ ಬಂದು ಕನ್ನಡವನ್ನೆ ಬ್ಯಾನ್ ಮಾಡ್ಬೇಕಂತೆ.
ಕನ್ನಡಿಗರೇ ಎಚ್ಚರ ನಮ್ಮ ಅಸ್ಮಿತೆ ನಮ್ಮ ಹೊಣೆ.pic.twitter.com/G1uboBVnxj


Click it and Unblock the Notifications
