ಅಮರನಾಥ ಯಾತ್ರೆ 2026: ದಿನಾಂಕ, ಮಾರ್ಗ, ನೋಂದಣಿ ಮತ್ತು ಹೆಲಿಕಾಪ್ಟರ್ ಸೇವೆ ಸೇರಿದಂತೆ ಇಲ್ಲಿದೆ ಸಂಪೂರ್ಣ ಮಾಹಿತಿ

ಹಿಂದೂ ದರ್ಮದ ಅತ್ಯಂತ ಪವಿತ್ರವಾದ ತೀರ್ಥಯಾತ್ರೆಗಳಲ್ಲಿ ಅಮರನಾಥ ಯಾತ್ರೆಯೂ ಒಂದಾಗಿದೆ. ಜಮ್ಮು ಮತ್ತು ಕಾಶ್ಮೀರದ ಹಿಮಾಲಯದ ಎತ್ತರದ ಪರ್ವತ ಪ್ರದೇಶದಲ್ಲಿರುವ ಅಮರನಾಥ ಗುಹೆಯಲ್ಲಿ ನೈಸರ್ಗಿಕವಾಗಿ ಕಂಡುಬರುವ ಹಿಮದ ಶಿವಲಿಂಗದ ದರ್ಶನಕ್ಕಾಗಿ ಪ್ರತಿ ವರ್ಷ ಲಕ್ಷಾಂತರ ಭಕ್ತರು ಬೇಟಿ ನೀಡುತ್ತಾರೆ. ಈ ಹಿಮದ ಶಿವಲಿಂಗವನ್ನು ಶಿವನ ಅವತಾರವೆಂದು ಪೂಜಿಸಲಾಗುತ್ತದೆ. ನೀವು ಈ ಪವಿತ್ರ ತೀರ್ಥಯಾತ್ರೆಗೆ ತೆರಳು ಯೋಜಿಸುತ್ತಿದ್ದರೆ ಯಾತ್ರೆಯ ದಿನಾಂಕ, ನೋಂದಣಿ ವಿಧಾನ, ಮಾರ್ಗ, ಹೆಲಿಕಾಪ್ಟರ್ ಸೇವೆ ಸೇರಿದಂತೆ ಅಗತ್ಯವಾದ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು.

2026 ಅಮರನಾಥ ಯಾತ್ರೆ ಯಾವಾಗ ಮತ್ತು ಅದರ ಸಂಪೂರ್ಣ ವೇಳಾಪಟ್ಟಿ

ಅಮರನಾಥ ಯಾತ್ರೆಯು 2026 ಜುಲೈ 3 ಪ್ರಾರಂಭವಾಗಿ ಆಗಷ್ಟ್ 28ರಂದು ಮುಕ್ತಾಯಗೊಳ್ಳುತ್ತದೆ. ಈ ಯಾತ್ರೆಯು 57 ದಿನಗಳ ಕಾಲ ನಡೆಯುತ್ತದೆ. ಯಾತ್ರೆಯ ದಿನಾಂಕಗಳನ್ನು ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್(ಆಡಳಿತ ಮಂಡಳಿ) ಈ ವೇಳಾಪಟ್ಟಿಯನ್ನು ನಿರ್ಧಾರ ಮಾಡಲಾಗುತ್ತದೆ. ಈ ಯಾತ್ರೆಯು ಸಾಮಾನ್ಯವಾಗಿ ರಕ್ಷಾ ಬಂದನದಂದು ಮುಕ್ತಾಯಗೊಳ್ಳುತ್ತದೆ. ಪವಿತ್ರ ಗದೆ ಮತ್ತು ಛರಿ ಮುಬಾರಕ್ ಗುಹೆಗೆ ತಲುಪಿದ ನಂತರ ಯಾತ್ರೆಯು ಸಮಾಪ್ತಿಯಾಗುತ್ತದೆ.

Amarnath Yatra 2026

ಅಮರನಾಥ ಯಾತ್ರೆಯ ಪ್ರಮುಖ ದಿನಾಂಕಗಳ ಮಾಹಿತಿ

ಯಾತ್ರೆಯ ಆರಂಭದ ದಿನಾಂಕ: ಜುಲೈ 3, 2026

ಯಾತ್ರೆಯ ಮುಕ್ತಾಯದ ದಿನಾಂಕ: ಆಗಸ್ಟ್ 28, 2026

ಪ್ರತಿ ಯಾತ್ರಿಕರ ನೋಂದಣಿ ಶುಲ್ಕ: ₹150

ಗುಹೆಯ ದೇಗುಲದ ಎತ್ತರ: 3,888 ಮೀಟರ್ ಅಂದರೆ(12,756 ಅಡಿ)

ಕೈಲಾಸ ಯಾತ್ರೆ 2026: ಭಕ್ತರಿಗೆ ಕೇಂದ್ರ ಸರ್ಕಾರ ಹೊರಡಿಸಿದ ಪ್ರಮುಖ ಪ್ರಯಾಣ ಮಾರ್ಗಸೂಚಿ
ಕೈಲಾಸ ಯಾತ್ರೆ 2026: ಭಕ್ತರಿಗೆ ಕೇಂದ್ರ ಸರ್ಕಾರ ಹೊರಡಿಸಿದ ಪ್ರಮುಖ ಪ್ರಯಾಣ ಮಾರ್ಗಸೂಚಿ

ಯಾತ್ರೆಯ ಮಾರ್ಗಗಳು: ಬಾಲ್ಟಾಲ್ 14 ಕಿಮೀ, ಮತ್ತು ಜಮ್ಮು ಮತ್ತು ಕಾಶ್ಮೀರ 46 - 48 ಕಿಮೀ,

ಹತ್ತಿರದ ವಿಮಾನ ನಿಲ್ದಾಣ: ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- ಬಾಲ್ಟಾಲ್ 62 ಕಿಮೀ ಮತ್ತು ಪಹಲ್ಗಾಮ್್ಗೆ 90 ಕಿಮೀ.

ಹತ್ತಿರದ ರೈಲು ನಿಲ್ದಾಣ: ಜಮ್ಮು ತಾವಿ, ಉದಂಪುರ ಮತ್ತು ಬನಿಹಾಲ್ ಹತ್ತಿರದಲ್ಲಿವೆ,

ಯಾತ್ರೆಯ ಅವಧಿ: ಬಾಲ್ಟಾಲ್ ಮಾರ್ಗದಲ್ಲಿ 2 ರಿಂದ 3 ದಿನ, ಪಹಲ್ಗಾಮ್ ಮಾರ್ಗದಲ್ಲಿ 4 ರಿಂದ 5 ದಿನ.

ವಯೋಮಿತಿ: 13 ರಿಂದ 70 ವರ್ಷ. ಆರು ವಾರಕ್ಕಿಂತ ಹೆಚ್ಚು ಗರ್ಭಿಣಿಯರಿಗೆ ಯಾತ್ರೆಗೆ ಅವಕಾಶ ಇರುವುದಿಲ್ಲ.

16 ಪಾಸ್‌ಪೋರ್ಟ್, 245 ದೇಶ: ಕೇವಲ 6 ವರ್ಷಗಳಲ್ಲಿ ಇಡೀ ಜಗತ್ತನ್ನೇ ಸುತ್ತಿದ ಬೆಂಗಳೂರಿನ ಬೆನ್ನಿ ಪ್ರಸಾದ್
16 ಪಾಸ್‌ಪೋರ್ಟ್, 245 ದೇಶ: ಕೇವಲ 6 ವರ್ಷಗಳಲ್ಲಿ ಇಡೀ ಜಗತ್ತನ್ನೇ ಸುತ್ತಿದ ಬೆಂಗಳೂರಿನ ಬೆನ್ನಿ ಪ್ರಸಾದ್

ಅಮರನಾಥ್ ಯಾತ್ರೆಯ ನೋಂದಾಯಿಸುವುದು ಹೇಗೆ?

ಯಾತ್ರೆಗೆ ಹೋಹುವ ಪ್ರತಿಯೊಬ್ಬರು ಮುಂಚಿತವಾಗಿ ನೋಂದಣಿ ಮಾಡಿಸಬೇಕು.

* jksasb.nic.in ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಬೇಟಿ ನೀಡಿ ಅಲ್ಲಿ ನೀವು ನೋಂದಣಿಯನ್ನು ಮಾಡಬಹುದು.

* ಆ ವೆಬ್‌ಸೈಟ್್ನಲ್ಲಿ ಖಾತೆಯನ್ನು ರಚಸಿ ಮತ್ತು ನೋಂದಣಿ ಫಾರ್ಮನಲ್ಲಿ ಹೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು.

* ಮಾನ್ಯವಾದ ಪೋಟೊ ಇರುವ ಐಡಿ ಕಾರ್ಡ (ಆಧಾರ್), ಪಾಸ್‌ಪೋರ್ಟ್ ಗಾತ್ರದ ಛಾಯಚಿತ್ರವಿರುವ ಮತ್ತು ನಿಮ್ಮ ಆರೋಗ್ಯದ ಪ್ರಮಾಣ ಪತ್ರ ಅನ್ನು ಸಬ ಇಲ್ಲಿ ಅಪ್‌ಲೋಡ್ ಮಾಡಬೇಕು.

* ನಿಮ್ಮ ಪ್ರಯಾಣದ ದಿನಾಂಕ ಮತ್ತು ನಿಮ್ಮ ಮಾರ್ಗಗಳನ್ನು ಆಯ್ಕೆ ಮಾಡಬೇಕಾಗುತ್ತದೆ(ಬಾಲ್ಟ್್ಲ್ ಅಥವಾ ಪಹಲ್ಗಾಮ್) ಆಯ್ಕೆ ಮಾಡಬೇಕು.

* ಪಾರ್ಮನಲ್ಲಿ ಕೇಳಿರುವ ಎಲ್ಲ ವಿವರಗಳನ್ನು ಪೂರ್ಣಗೂಳಿಸಿದ ನಂತರ, ನೀವು ಆನ್್ಲೃನ್ 150 ಶಲ್ಕವನ್ನು ಪಾವತಿಸಿ ನಂತರ ನಿಮ್ಮ ಯಾತ್ರಾ ಕಾರ್ಡ ಡೌನಲೋಡ್ ಮಾಡಿಕ್ಕೂಳ್ಳಬೇಕು.

* ಯಾತ್ರೆಗೆ ತೆರಳುವವರು ಪ್ರತಿಯೊಬ್ಬರು ಕಡ್ಡಾಯವಾಗಿ ಆರೋಗ್ಯ ಪ್ರಮಾಣಪತ್ರ ಸಲ್ಲಿಸಬೇಕು. 2026ರ ಯಾತ್ರೆಗೆ ಹೋಗುವ ಪ್ರತಿಯೊಬ್ಬರೂ ನೀಡಬೇಕು.

* ಅಮರನಾಥ್ ಯಾತ್ರೆ ಹೆಲಿಕಾಪ್ಟರುಗಳು ಬುಕ್ಕಿಂಗ್ ವಿವರ

ದೀರ್ಘ ಕಾಲ ಕಾಲ್ನಡಿಗೆಯಲ್ಲಿ ಸಾಗಲು ಸಾಧ್ಯವಾಗದ ಭಕ್ತರಿಗಾಗಿ ಹೆಲಿಕಾಪ್ಟರುಗಳ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಸೇವೆ ಬಾಲ್ಟಾಲ್ ಹಾಗೂ ಪಹಲ್ಗಾಮ್್ನಿಂದ ಪಂಚತರಣಿವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಲ್ಲಿಂದ ಅಮರನಾಥ್ ಗುಹೆಯವರೆಗೂ ಸುಮಾರು 6 ಕಿಮೀ, ದೂರವನ್ನು ಕಾಲ್ನಡಿಗೆಯಲ್ಲಿ, ಕುದುರೆ ಅಥವಾ ಪಲ್ಲಕ್ಕಿಯ ಮೂಲಕವೇ ಸಾಗಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+